ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ಜಾರಿ ! ಐದನೇ ದಿನಕ್ಕೆ ಹಾಲು-ತುಪ್ಪ
144 section near Kanteerava Studio : ಕಂಠೀರವ ಸ್ಟುಡಿಯೋ ಸುತ್ತ ಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ, ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ, ಹಾಗೂ ಮೂರನೇ ದಿನದ ಹಾಲು ತುಪ್ಪ ಕಾರ್ಯ ಇಂದು ಮಾಡಲಾಗುತ್ತಿಲ್ಲ, ಈ ಕಾರ್ಯವನ್ನು ಐದನೇ ದಿನಕ್ಕೆ ಮಾಡಲು ನಿರ್ಧರಿಸಲಾಗಿದೆ
144 section near Kanteerava Studio : ಕಂಠೀರವ ಸ್ಟುಡಿಯೋ ಸುತ್ತ ಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ, ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ, ಹಾಗೂ ಮೂರನೇ ದಿನದ ಹಾಲು ತುಪ್ಪ ಕಾರ್ಯ ಇಂದು ಮಾಡಲಾಗುತ್ತಿಲ್ಲ, ಈ ಕಾರ್ಯವನ್ನು ಐದನೇ ದಿನಕ್ಕೆ ಮಾಡಲು ನಿರ್ಧರಿಸಲಾಗಿದೆ.. ಐದನೇ ದಿನ ಕುಟುಂಬದಿಂದ ಹಾಲು-ತುಪ್ಪ ಕಾರ್ಯ ಇರುತ್ತದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗಿದೆ, ಈ ನಡುವೆ ಬೆಂಗಳೂರು ಪೊಲೀಸರ ಕಾರ್ಯ ವೈಖರಿಗೆ ಕಮಲ್ ಪಂತ್ ಅವರು ಪ್ರಶಂಸಿದ್ದಾರೆ.
ಇನ್ನು ಐದಾರು ದಿನ ಕಂಠೀರವ ಸ್ಟುಡಿಯೋ ಒಳಗೆ ಯಾರಿಗೂ ಅವಕಾಶ ಇರುವುದಿಲ್ಲ, ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತಿಮ ವಿಧಿಗಳನ್ನು ಭಾನುವಾರ ಬೆಳಿಗ್ಗೆ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಬೆಂಗಳೂರಿನ ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋವರೆಗೆ ಸುಮಾರು 13 ಕಿ.ಮೀ.ನಷ್ಟು ಮೆರವಣಿಗೆಯಲ್ಲಿ ನಟನ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಅವರ ಹಿತೈಷಿಗಳು ಮತ್ತು ಅಭಿಮಾನಿಗಳು ಗೌರವ ಸಲ್ಲಿಸಿದರು.
ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ನಡೆಯಿತು. ಇದೆ ಮಂಗಳವಾರ ಹಾಲು-ತುಪ್ಪ ಕಾರ್ಯ ಇರುತ್ತದೆ.
ಪುನೀತ್ ಇಲ್ಲದ ಕೊರಗು ಕೊನೆಯವರೆಗೂ ಇರುತ್ತದೆ, ಅಪ್ಪ ಅಮ್ಮನ ಬಳಿಗೆ ಹೋಗಿದ್ದಾನೆ, ಅವನಿಗೆ ಅಪ್ಪ ಅಮ್ಮ ಅಂದರೆ ಬಹಳ ಪ್ರೀತಿ, ಅವರಲ್ಲಿಗೆ ಹೋಗಿದ್ದಾನೆ ಎಂದು ಅಂತ್ಯಕ್ರಿಯೆ ಬಳಿಕ ರಾಘವೇಂದ್ರ ರಾಜ್ ಕುಮಾರ್ ಹೇಳಿದರು.
ಸಹಕರಿಸಿದ ಎಲ್ಲರಿಗೂ ಅವರು ಧನ್ಯಾವಾದ ತಿಳಿಸಿದರು, ಪುನೀತ್ ಅಂತ್ಯಕ್ರಿಯೆ ಬಳಿಕ ಅವರು ಮಾತನಾಡಿದರು. ಮಂಗಳವಾರ ಹಾಲು-ತುಪ್ಪ ಇರುವುದರಿಂದ ಆ ಬಳಿಕ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತೆ ಎಂದರು.
ಎಲ್ಲರ ಸಹಕಾರದಿಂದ ಶಾಂತಿಯುತವಾಗಿ ವಿಧಿವಿಧಾನ ನಡೆಯಿತು, ಕಳೆದ ಬಾರಿ ಅಪ್ಪಾಜಿ ವಿಷಯದಲ್ಲಿ ಸ್ವಲ್ಪ ಗೊಂದಲವಾಗಿತ್ತು, ಆದರೆ ಈ ಬಾರಿ ಎಲ್ಲರೂ ಶಾಂತಿಯಿಂದ ಸಹಕರಿಸಿದರು ಎಂದರು..
Follow us On
Google News |