Welcome To Kannada News Today

ರಾಮ್ ಚರಣ್ ಚಿತ್ರ ಆಚಾರ್ಯ’ ಕ್ಕೆ ನಾಯಕಿ ಹುಡುಕಾಟ, ರಶ್ಮಿಕಾ ಮಂದಣ್ಣ ಮೇಲಿದೆ ಚಿತ್ರ ತಂಡದ ಕಣ್ಣು

Acharya Movie Team finding a heroine for Ram Charan, Rashmika Mandanna is sure to act

🌐 Kannada News :

ತೆಲುಗು ನಿರ್ದೇಶಕ ಕೊರಟಾಲ ಶಿವ ಪ್ರಸ್ತುತ ಆಚಾರ್ಯ ಎಂಬ ರೋಚಕ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಪಾತ್ರದಲ್ಲಿದ್ದಾರೆ, ಎಂಬುದು ಇನ್ನೊಂದು ವಿಶೇಷ.

‘ಆಚಾರ್ಯ’ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಪಾತ್ರದಲ್ಲಿದ್ದಾರೆ. ರಾಮ್ ಚರಣ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ನಿರ್ದೇಶಕರು ಈಗಾಗಲೇ ಖಚಿತಪಡಿಸಿದ್ದಾರೆ . ಕಾಜಲ್ ಅಗರ್ವಾಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಖಚಿತವಾಗಿದೆ . ಏತನ್ಮಧ್ಯೆ, ಕೊರಟಾಲ ಶಿವ ಈಗ ಚಿತ್ರದಲ್ಲಿ ರಾಮ್ ಚರಣ್ ಜೊತೆ ನಾಯಕಿ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದು ಈಗ ನಿರ್ದೇಶಕರಿಗೆ ದೊಡ್ಡ ಸವಾಲಾಗಿದೆಯಂತೆ ?

ಹೌದು, ರಾಮ್ ಚರಣ್ ಚಿತ್ರಕ್ಕೆ ನಾಯಕಿ ಹುಡುಕಾಟ ನಡೆದಿದೆ, ಅದರಲ್ಲೂ ಲಾಕ್‌ಡೌನ್ ಮುಗಿಯುವ ಹೊತ್ತಿಗೆ ನಾಯಕಿಯನ್ನು ಅಂತಿಮಗೊಳಿಸಲು ಚಿತ್ರತಂಡ ನಿರ್ದರಿಸಿದೆಯಂತೆ, ಮೆಗಾಸ್ಟಾರ್ ಚಿರಂಜೀವಿ, ಕಾಜಲ್ ಅಗರ್ವಾಲ್, ರಾಮ್ ಚರಣ್ ಸೇರಿದಂತೆ ಹಲವು ನಟರ ಬಿಗ್ ಬಜೆಟ್ ಚಿತ್ರ “ಆಚಾರ್ಯ” ಚಿತ್ರ ಅಭಿಮಾನಿಗಳ ಬಹು ನಿರೀಕ್ಷೆಯ ಚಿತ್ರ.

ಈ ಮೊದಲು, “ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು

ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ಹೇಳಿ ನೆಟಿಗರ ಕೆಂಗಣ್ಣೆಗೆ ಗುರಿಯಾಗಿದ್ದ ಕಬೀರ್ ಸಿಂಗ್ ನಟಿ ಕಿಯಾರಾ ಅಡ್ವಾಣಿ, ಅಥವಾ ತ್ರಿಶಾ ಚಿತ್ರದಲ್ಲಿ ರಾಮ್ ಚರಣ್ ಗೆ ಜೋಡಿಯಾಗ್ತಾರೆ ಅಂತ ಮಾತಾಗಿತ್ತು…

ರಶ್ಮಿಕಾ ಮಂದಣ್ಣ ಆಗ್ತಾರಾ ? ರಾಮ್ ಚರಣ್ ಜೋಡಿ 

ಕೊರಟಾಲ ಶಿವ ನಿರ್ದೇಶಿಸ್ತಾ ಇರೋ ಚಿತ್ರದ ನಾಯಕ ರಾಮ್ ಚರಣ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುವ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರ್ತಾ ಇದೆ, ಆಚ್ಚಾರ್ಯ ಚಿತ್ರ ತಂಡದಿಂದಲೇ ಈ ಸುದ್ದಿ ಹೊರಬಿದ್ದಿದ್ದು ಚಿತ್ರಕ್ಕೆ ಈಗ ರಶ್ಮಿಕಾ ಮಂದಣ್ಣ ಹೆಸರು ಕೇಳಿಬರುತ್ತಿದೆ.

ರಶ್ಮಿಕಾ ಮಂದಣ್ಣ ನಟಿಸುವ ಬಗ್ಗೆ ಬಹುತೇಕ ಖಚಿತ ಮಾಹಿತಿ ಹೊರಬಿದ್ದಿದ್ದು, ಇನ್ನೇನು ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ, ಹಾಗೂ ಲಾಕ್ ಡೌನ್ ನಂತರವಷ್ಟೇ ಈ ಬಗ್ಗೆ ಚಿತ್ರತಂಡ ತಿಳಿಸಲಿದೆ.


 

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.