ಕನ್ನಡಿಗರ ವಿಷಯದಲ್ಲಿ ರಶ್ಮಿಕಾ ಮಂದಣ್ಣ ಮತ್ತೊಂದು ಎಡವಟ್ಟು! ಬೇಕಂತಲೇ ಕನ್ನಡ ಕಡೆಗಣಿಸುವ ನ್ಯಾಷನಲ್ ಕ್ರಶ್
ರಾಷ್ಟ್ರ ಪ್ರಶಸ್ತಿ ಪಡೆದಿರುವ ಎಲ್ಲಾ ಸೆಲೆಬ್ರಿಟಿಗಳಿಗೂ ವಿಶ್ ಮಾಡಿರುವ ರಶ್ಮಿಕಾಗೆ ನಮ್ಮ ಕನ್ನಡದ ಚಾರ್ಲಿ ನೆನ್ಪಾಗ್ಲಿಲ್ವಾ? ಕನ್ನಡಿಗರ ವಿಷಯದಲ್ಲಿ ರಶ್ಮಿಕಾರ ಮತ್ತೊಂದು ಎಡವಟ್ಟು!
ಸ್ನೇಹಿತರೆ, ಇಂದು ನ್ಯಾಷನಲ್ ಫಿಲಂ ಅವಾರ್ಡ್ 2023 (National Film Award 2023) ಅನೌನ್ಸ್ ಆಗಿ ಕನ್ನಡ ತೆಲುಗು ಹಿಂದಿ ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಈ ಒಂದು ವಿಚಾರ ಹೊರ ಬರುತ್ತಾ ಇದ್ದಹಾಗೆ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವಂತಹ ಸಾಲು ಸಾಲು ಸೆಲೆಬ್ರಿಟಿಗಳಿಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಲು ಸಾಲು ಸ್ಟೋರಿಯನ್ನು ಹಾಕಿ ಶುಭಾಶಯಗಳು ಮಹಾಪೂರವನ್ನೇ ಹರಿಸಿರುವಂತಹ ನ್ಯಾಷನಲ್ ಕ್ರಶ್ ನಮ್ಮ ಕನ್ನಡದ ಹುಡುಗಿ, ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಬೆಡಗಿಗೆ ಚಾರ್ಲಿ (Kannada Movie Charlie 777) ನೆನಪಾಗಲಿಲ್ವಾ? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಗೆಳೆಯರೇ ತಮ್ಮದೇ ಪುಷ್ಪ ಸಿನಿಮಾದಲ್ಲಿ ಮ್ಯೂಸಿಕ್ ಡೈರೆಕ್ಟರ್ಗೆ (Pushpa Cinema Music Director) ನ್ಯಾಷನಲ್ ಅವಾರ್ಡ್ ದೊರಕಿದೆ, ಹೀಗಾಗಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿಯನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸುವುದರ ಜೊತೆಗೆ ಶುಭ ಕೋರಿದ್ದಾರೆ.
ತಮ್ಮೊಂದಿಗೆ ಮಿಷನ್ ಮಿಷಿನ್ ಮಜ್ನು ಸಿನಿಮಾದಲ್ಲಿ ಸಹನಟನಾಗಿ ಅಭಿನಯಿಸಿದ್ದ ಸಿದ್ದಾರ್ಥ ಮಲ್ಹೋತ್ರ ಅವರಿಗೆ ಪ್ರಶಸ್ತಿ ಬಂದಿದ್ದಕ್ಕೆ ರಶ್ಮಿಕಾ ಮಂದಣ್ಣ (Actress Rashmika Mandanna) ಎಲ್ಲಿಲ್ಲದ ಸಂತಸ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಅಲ್ಲು ಅರ್ಜುನ್ ಹಾಗೂ ಆಲಿಯಾ ಭಟ್ ಗೂ ಕೂಡ ತಮ್ಮ ಹೃತ್ಪೂರ್ವಕ ಅಭಿನಂದನೆಯನ್ನು ತಿಳಿಸಿರುವ ರಶ್ಮಿಕಾಗೆ ನಮ್ಮ ಕನ್ನಡದ ಚಾರ್ಲಿ ಸಿನಿಮಾಗೆ (National Film Award for Charlie 777) ದೊರಕಿರುವ ನ್ಯಾಷನಲ್ ಅವಾರ್ಡ್ ಕಾಣಿಸಲಿಲ್ಲ? ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವಂತಹ ಕನ್ನಡ ಸಿನಿಮಾಗಳನ್ನು, ಕನ್ನಡಿಗರನ್ನು ಮರೆತುಬಿಟ್ರಾ? ಎಂದು ನೆಟ್ಟಗರು ರಶ್ಮಿಕಾ ಅವರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಆರಂಭಿಕ ದಿನಗಳಲ್ಲಿ ಕೇವಲ ಕನ್ನಡದಲ್ಲಿ (Kannada) ಮಾತ್ರ ಬಿಡುಗಡೆಯಾದಂತಹ ಈ ಸಿನಿಮಾಗೆ ಕನ್ನಡಿಗರು ನೀಡಿದಂತಹ ವ್ಯಾಪಕ ರೆಸ್ಪಾನ್ಸ್ ನೋಡಿ ಇತರೆ ಭಾಷೆಗಳಿಗೂ ಸಿನಿಮಾವನ್ನು ಡಬ್ ಮಾಡಲಾಯಿತು.
Actress Rashmika Mandanna ignores wish to Kannada Movie for National Film Award 2023
Follow us On
Google News |