Welcome To Kannada News Today

Breaking News, ಹಿರಿಯ ನಟ ರಿಷಿ ಕಪೂರ್ ಆರೋಗ್ಯ ಸ್ಥಿತಿ ಗಂಭೀರ, ICU ನಲ್ಲಿ ಚಿಕಿತ್ಸೆ

Breaking News, Bollywood Veteran Actor Rishi Kapoor Hospitalized, Moved to ICU

🌐 Kannada News :

ಮೂಲಗಳ ಪ್ರಕಾರ, ಹಿರಿಯ ನಟ ರಿಷಿ ಕಪೂರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ರಿಷಿ ಕಪೂರ್ ಐಸಿಯುನಲ್ಲಿದ್ದಾರೆ.

  • ಹಿರಿಯ ನಟ ರಿಷಿ ಕಪೂರ್ ಆರೋಗ್ಯ ಸ್ಥಿತಿ ಗಂಭೀರ.
  • ಬಾಲಿವುಡ್ ನಟ ರಿಷಿ ಕಪೂರ್ ಗೆ ಐಸಿಯು ನಲ್ಲಿ ಚಿಕಿತ್ಸೆ.
  • 2018 ರಲ್ಲಿ, ರಿಷಿ ಕಪೂರ್ ಅವರಿಗೆ ಮೊದಲ ಬಾರಿಗೆ ಕ್ಯಾನ್ಸರ್ ಇರುವುದು ಪತ್ತೆ.

ಹಿರಿಯ ನಟ ರಿಷಿ ಕಪೂರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಕುಟುಂಬವರ್ಗದವರಿಂದ ತಿಳಿದುಬಂದಿದೆ. ರಿಷಿ ಕಪೂರ್ 2018ರಲ್ಲಿ ಕ್ಯಾನ್ಸರ್ ಗೆ ತುತ್ತಾಗಿದ್ದರು. ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಇದೀಗ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಲಿವುಡ್ ನಟ ರಿಷಿ ಕಪೂರ್ ಅವರನ್ನು ಬುಧವಾರ ಮುಂಬೈನ ಎಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.. ರಿಷಿ ಕಪೂರ್ ಅವರ ಸಹೋದರ ರಣಧೀರ್ ಕಪೂರ್ ಈ ಬಗ್ಗೆ ದೃ ಡಪಡಿಸಿದ್ದಾರೆ. ರಿಷಿ ಆರೋಗ್ಯವಾಗಿಲ್ಲ ಮತ್ತು ನೀತು ಕಪೂರ್ ಅವರ ಜೊತೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ..

ಹಿರಿಯ ನಟ ರಿಷಿ ಕಪೂರ್ ಆರೋಗ್ಯ ಸ್ಥಿತಿ ಗಂಭೀರ ICU ನಲ್ಲಿ ಚಿಕಿತ್ಸೆ

ರಿಷಿ ಕಪೂರ್ ಎರಡು ವಾರಗಳಿಂದ ಆಸ್ಪತ್ರೆಯಲ್ಲಿದ್ದಾರೆ, ಆದರೆ ಅವರ ಸ್ಥಿತಿ ಗಂಭೀರವಾದ್ದರಿಂದ ಅವರನ್ನು ಬುಧವಾರ ಸಂಜೆ ಐಸಿಯುಗೆ ಸ್ಥಳಾಂತರಿಸಲಾಗಿದೆ. ನಟನ ಸ್ಥಿತಿ ಗಂಭೀರವಾಗಿದೆ ಮತ್ತು ಪತ್ನಿ ನೀತು ಕಪೂರ್ ಅವರ ಜೊತೆಯಲ್ಲಿದ್ದರೆ, ಅವರ ಮಗ ಮತ್ತು ನಟ ರಣಬೀರ್ ಕಪೂರ್ ಕೂಡ ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Web Title : Breaking News, Bollywood Veteran Actor Rishi Kapoor Hospitalized, Moved to ICU

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.