Welcome To Kannada News Today

ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ ಗೋಲ್ಡನ್ ಸ್ಟಾರ್ ಗಣೇಶ್, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

comedy time Ganesh to Golden star Ganesh , a journey of Inspiration

🌐 Kannada News :

ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ ಗೋಲ್ಡನ್ ಸ್ಟಾರ್ ಗಣೇಶ್, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ನಮ್ಮ ಕಾಮಿಡಿ ಟೈಮ್ ಗಣೇಶ್, ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಅವರ ಮುಂಬರುವ ಯೋಜನೆಗಳಿಗೆ ಆಲ್ ದಿ ಬೆಸ್ಟ್ ಹೇಳುತ್ತಾ.. # 14YearsForGaneshInKFI ಹ್ಯಾಷ್ ಟ್ಯಾಗ್ ವೈರಲ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಸತತ 14 ವರ್ಷಗಳ ಕಾಲ ರಂಜಿಸಿದ ಗೋಲ್ಡನ್ ಸ್ಟಾರ್ ರವರಿಗೆ ದನ್ಯವಾದಗಳ ಸುರಿಮಳೆ.

ಗಣೇಶ್ ಅವರು ಪ್ರಥಮ ಬಾರಿಗೆ ಕ್ಯಾಮರಾವನ್ನು ಎದುರಿಸಿದ್ದು ಗುಟ್ಟು ಸಾಕ್ಷ್ಯಚಿತ್ರದಿಂದ. ಇದರ ಪ್ರಸಾರಣೆಗೆ ನಿರ್ದಿಷ್ಟ ಸಮಯಾವಧಿ ಸಿಗದಿದ್ದರಿಂದ ಅದರ ನಿರ್ಮಾಪಕರು ಅದನ್ನು ಚಿತ್ರ ಪ್ರದರ್ಶನಗಳಲ್ಲಿ ಮತ್ತು ಯು.ಎಸ್.ಎ ಯ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ತುಂಬಾ ನಷ್ಟಕ್ಕೆ ಒಳಗಾದರು. ಈ ಸಾಕ್ಷ್ಯಚಿತ್ರದ ನಿರ್ದೇಶಕರಿಂದಲೇ ಗಣೇಶ್ ಅವರಿಗೆ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರೆಯಿತು.

ಆನಂತರ ದಿನಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದರಾದರೂ, ದಿನ ಬೆಳಗಾಗೋದ್ರೊಳಗೆ ಮನೆ ಮನೆಯಲ್ಲೂ ಮಾತಾಗಿದ್ದು, ಮುಂಗಾರು ಮಳೆ ಚಿತ್ರದ ಮೂಲಕ, ಇನ್ನೊಂದು ವಿಶೇಷವೆಂದರೆ, ರಾಜ್ಯದ ಜನಕ್ಕೆ ಗಣೇಶ್ ಕಾಮಿಡಿ ಟೈಮ್ ಗಣೇಶ್ ಆಗಿ ಅದಾಗಲೇ ಚಿರಪರಿಚಿತರಾಗಿದ್ದರು, ಹೆಂಗಳೆಯರಂತೂ ಗಣೇಶ್ ಕಾರ್ಯಕ್ರಮ ಮಿಸ್ ಮಾಡದೆ ನೋಡ್ತಾ ಇದ್ರು….

ಕಾಮಿಡಿ ಟೈಮ್ ಗಣೇಶ್ ಗೋಲ್ಡನ್ ಸ್ಟಾರ್ ಗಣೇಶ್ ಆಗಿದ್ದು ಈಗ ಇತಿಹಾಸ. ಗಣೇಶ್ ಅವರಿಗೆ, ಇಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನ ಬಳಗವಿದೆ.

ಗಣೇಶ್ ಅವರ ಕಾಮಿಡಿ ಟೈಮ್ ಕಾರ್ಯಕ್ರಮ ಹಾಗೂ ಸಿನಿಮಾಗಳಲ್ಲಿ ಗಮನಿಸಿರಬಹುದು. ಕರಾಟೆ ಕಿಂಗ್ ಶಂಕರ್ ನಾಗ್, ವಿಷ್ಣುವರ್ಧನ್, ಡಾ.ರಾಜ್ ಕುಮಾರ್ ಅವರಂತೆ ಮಿಮಿಕ್ರಿ ಮಾಡಿ ಅಭಿನಯಿಸುತ್ತಿದ್ದರು. ಅವರಂತೆ ಸ್ಟೈಲ್ ಕೂಡ ಮಾಡುತ್ತಿದ್ದರು. ಅಂದಹಾಗೆ ಗಣೇಶ್ ಅವರು ಆ ನಾಯಕರ ಪಕ್ಕಾ ಅಭಿಮಾನಿ ಸಹ ಹೌದು…

ಸಿನಿಮಾ ರಂಗದಲ್ಲಿ ಗಾಡ್ ಫಾದರ್ ಇಲ್ಲದೆ ಬೆಳೆಯೋದು ಅಂದರೆ ಸುಮ್ಮನೆ ಮಾತಲ್ಲ, ಹೀರೋಗಳ ಮಕ್ಕಳು ಹೀರೊ ಆಗೋದ್ರಲ್ಲಿ ಏನೂ ವಿಶೇಷವಿಲ್ಲ, ಆದ್ರೆ ಆ ಹಿನ್ನೆಲೆ ಇಲ್ಲದೆ, ಚಿಕ್ಕ ಪರದೆಯಿಂದ ದೊಡ್ಡ ಪರದೆ ಮೇಲೆ ಗೋಲ್ಡನ್ ಸ್ಟಾರ್ ಆಗಿ ಸಾವಿರಾರು ಅಭಿಮಾನಿಗಳ ಮನಗೆದ್ದ ಗಣೇಶ್ ಇಂದು ಸಾವಿರಾರು ಅಭಿಮಾನಿಗಳ ಆರಾಧ್ಯ ದೈವ, ಸರಳ ಜೀವಿ..

ಟಿವಿ ಆಂಕರ್ ಆಗಿದ್ದ ವ್ಯಕ್ತಿ ಗೋಲ್ಡನ್ ಸ್ಟಾರ್ ಆಗುವುದು, ಸರಳ ವಿಷಯವಲ್ಲ. ಹಾಗೂ ಹಾರ್ಡ್ ವರ್ಕ್ ಎಂದಿಗೂ ವಿಫಲವಾಗುವುದಿಲ್ಲ ಎಂದು ಸಾಬೀತಾಗಿದೆ. ಕನ್ನಡ ಚಿತ್ರರಂಗದಲ್ಲಿ ಯಶಸ್ವಿ  14 ವರ್ಷಗಳನ್ನು ಪೂರೈಸಿದ ನಿಮಗೆ ಅಭಿನಂದನೆಗಳು ಎಂದು ಅಭಿಮಾನಿಗಳು, ಟ್ವೀಟ್ ಮಾಡಿ ಶುಭಾಷಯ ಕೋರುತ್ತಿದ್ದಾರೆ.

ಸ್ಯಾಂಡಲ್ ವುಡ್ ನ ಗೋಲ್ಡನ್ ಹಾರ್ಟ್ ಗೋಲ್ಡನ್ ಸ್ಟಾರ್ ಇದೇನು ಮಹಾ 14 ವರ್ಷ ಇನ್ನೂ 100 ವರ್ಷಗಳ ಕಾಲ, ನಮ್ಮನ್ನು ರಂಜಿಸಲು ಆ ಭಗವಂತ ಅವರಿಗೆ ಆರೋಗ್ಯ ಶಕ್ತಿ ನೀಡಲಿ ಎಂಬುದು ಕೋಟಿ ಅಭಿಮಾನಿಗಳ ಆಶಯ….

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.