Welcome To Kannada News Today

ಬುಲೆಟ್ ಗೆ ಸಾರಥಿಯಾದ ದಚ್ಚು, ಬುಲೆಟ್ ಪ್ರಕಾಶ್ ಜವಾಬ್ದಾರಿಗಳಿಗೆ ಹೆಗಲು ಕೊಟ್ಟ ದರ್ಶನ್

Darshan Help to Bullet Prakash Family

🌐 Kannada News :

ಬುಲೆಟ್ ಗೆ ಸಾರಥಿಯಾದ ದಚ್ಚು…. ಬುಲೆಟ್ ಪ್ರಕಾಶ್ ಜವಾಬ್ದಾರಿಗಳಿಗೆ ಹೆಗಲು ಕೊಟ್ಟ ಕಲಿಯುಗ ಕರ್ಣ ದರ್ಶನ್…. ಹಾಸ್ಯ ನಟ ಬುಲೆಟ್ ಪ್ರಕಾಶ್ ಏಪ್ರಿಲ್ 6ರಂದು ಕೊನೆಯುಸಿರೆಳೆದಿದ್ದಾರೆ. ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬುಲೆಟ್ ಪ್ರಕಾಶ್ ಸಾವಿನ ಸುದ್ದಿ ತಿಳಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಅವರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಈಗ ನನ್ನ ಗೆಳೆಯಾನೋ ಅಲ್ವೋ.. ಆದರೆ ಒಂದು ಕಾಲದ ಗೆಳೆಯ. ಯಾರೂ ಕೊಟ್ರೂ ಬಿಟ್ರೂ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ….

ನೆರವು, ಸಹಾಯ , ಪ್ರೀತಿ ಸ್ನೇಹ ಎಂದೆಡೆ ಮೊದಲು ಕೇಳಿ ಬರೋದೇ ದರ್ಶನ್ ಹೆಸರು, ಮೊದಲು ಮುಂದೆ ಬರೋದೇ ದಚ್ಚು ರಿಯಲ್ ಸ್ಟೈಲ್.

ಎರಡು ದಶಕಗಳಿಂದ ಕನ್ನಡಿಗರಿಗೆ ಮನರಂಜನೆ ನೀಡಿದ್ದ ನಟ ಬುಲೆಟ್ ಪ್ರಕಾಶ್‌ ನಿಧಾನಕ್ಕೆ ಇಡೀ ಸ್ಯಾಂಡಲ್‌ವುಡ್‌ ಅವರಿಗೆ ಸಂತಾಪ ಸೂಚಿಸುತ್ತಿದೆ. ಒಟ್ಟಿಗೆ ಕಳೆದ ಕ್ಷಣಗಳನ್ನು ನೆನೆದು, ತಮ್ಮ ಸಿನಿ ಕುಟುಂಬದ ಸದಸ್ಯನಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ದರ್ಶನ್, ಪುನೀತ್ ರಾಜ್‌ಕುಮಾರ್ ಸೇರಿ ಅನೇಕ ತಾರೆಯರು ಬುಲೆಟ್‌ ಪ್ರಕಾಶ್‌ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.