ಈ ಕಾರಣಕ್ಕೆ ಇನ್ನು ದರ್ಶನ್ ಚುನಾವಣಾ ಪ್ರಚಾರ ಮಾಡೋಲ್ವಂತೆ

Darshan will no longer be campaigning for this reason

ಈ ಕಾರಣಕ್ಕೆ ಇನ್ನು ದರ್ಶನ್ ಚುನಾವಣಾ ಪ್ರಚಾರ ಮಾಡೋಲ್ವಂತೆ – Darshan will no longer be campaigning for this reason

[story-lines]

ಈ ಕಾರಣಕ್ಕೆ ಇನ್ನು ದರ್ಶನ್ ಚುನಾವಣಾ ಪ್ರಚಾರ ಮಾಡೋಲ್ವಂತೆ

ಇಷ್ಟು ದಿವಸ ಸತತ ಪ್ರಚಾರದಲ್ಲಿ ತೊಡಗಿದ್ದ ದರ್ಶನ್ ಇನ್ನು ನಾಲ್ಕು ದಿವಸ ಪ್ರಚಾರಕ್ಕೆ ಗೈರಾಗಲಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅಭಿಮಾನಿಗಳ ನೂಕುನುಗ್ಗಲು ಹಾಗೂ ವಾಹನ ಇಳಿಯುವಾಗ ದರ್ಶನ್ ಬಲಗೈಗೆ ಮತ್ತೆ ಪೆಟ್ಟಾಗಿದೆ. ಹೌದು ತನ್ನ ಬಲಗೈನಲ್ಲಿ ಅತಿಯಾದ ನೋವು ಕಾಣಿಸಿಕೊಂಡ ಹಿನ್ನೆಲೆ ದರ್ಶನ್ ಪ್ರಚಾರದಿಂದ ವಿರಾಮ ತೆಗೆದುಕೊಳ್ಳಲಿದ್ದಾರೆ.

ದರ್ಶನ್ ಹೋದ ಕಡೆಯೆಲ್ಲಾ ಸಾಮಾನ್ಯವಾಗಿ ಬಹಳಷ್ಟು ಜನ ಸೇರುತ್ತಿದ್ದರು, ದರ್ಶನ್ ಮೇಲಿನ ಅಭಿಮಾನಕ್ಕೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಶೇಕ್ ಹ್ಯಾಂಡ್ ಮಾಡುವುದು ನಡೆಯುತ್ತಿತ್ತು , ಇದರಿಂದಲೇ ದರ್ಶನ್ ಕೈ ನಲ್ಲಿ ಮತ್ತ್ವ ನೋವು ಕಾಣಿಸಿಕೊಂಡಿತ್ತು, ನೆನ್ನೆ ಪ್ರಚಾರದ ಸಮಯದಲ್ಲಿ ವಾಹನದಿಂದ ಇಳಿಯುವಾಗ ಮತ್ತೆ ಅದೇ ಕೈಗೆ ಪೆಟ್ಟಾಗಿದೆ.

ಪ್ರಚಾರದ ವೇಳೆಯೇ ದರ್ಶನ್ ತಮ್ಮ ಮೈಕನ್ನು ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾಯಿಸುತ್ತಿದ್ದದ್ದು ಕಂಡು ಬಂದಿದ್ದು, ಅದಾಗಲೇ ಅವರಿಗೆ ಸ್ವಲ್ಪ ಸ್ವಲ್ಪ ಕೈ ನೋವು ಕಾಣಿಸಿಕೊಂಡಿತ್ತು, ಇದೀಗ ನೋವು ಹೆಚ್ಚಾಗಿ ಕಾಡುತ್ತಿರುವುದರಿಂದ ಚುನಾವಣಾ ಪ್ರಚಾರದಲ್ಲಿ ಶಾರ್ಟ್ ಬ್ರೇಕ್ ತೆಗೆದುಕೊಳ್ಳಲಿದ್ದಾರೆ.

ಈ ಕಾರಣಕ್ಕೆ ದರ್ಶನ್ ನಾಲ್ಕು ದಿನಗಳ ಕಾಲ ವಿರಾಮ ಪಡೆಯಲಿದ್ದಾರೆ. ಆದರೆ ಇಂದು ಸುಮಲತಾಗೆ ರಾಜಾಹುಲಿ ಯಶ್ ಸಾಥ್ ನೀಡಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಇಂದು ಶ್ರೀರಂಗ ಪಟ್ಟಣದ ಸುತ್ತ ಮುತ್ತ ಮತ ಬೇಟೆ ನಡೆಸಲಿದ್ದಾರೆ.////