Actress Jayaprada: ಬೇರೊಬ್ಬರ ಗಂಡನನ್ನು ಮದುವೆಯಾದ ನಟಿ ಜಯಪ್ರದಾ ಅವರ ಸ್ಥಿತಿ ಈಗ ಹೇಗಿದೆ ಗೊತ್ತಾ ??
1986 ರಲ್ಲಿ ಏಕಾಏಕಿ ಶ್ರೀಕಾಂತವರನ್ನು ಮದುವೆಯಾಗಿಬಿಟ್ಟರು ನಟಿ ಜಯಪ್ರದಾ. ಆದರೆ ಇಲ್ಲಿ ಇರುವ ಒಂದು ದೊಡ್ಡ ಪ್ರಶ್ನೆ ಏನೆಂದರೆ ಶ್ರೀಕಾಂತವರು ತನ್ನ ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟಿರಲಿಲ್ಲ.
ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗದಲ್ಲಿ ಕ್ರಷ್ ಆಗಿದ್ದವರು ನಟಿ ಜಯಪ್ರದ(Jayaprada). ಕನ್ನಡ ಸಿನಿಮಾ ರಂಗ ಸೇರಿ ಭಾರತ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಇವರು ಕೂಡ ಒಬ್ಬರು ಎಂದು ಹೇಳಬಹುದು. ಯಾವುದೇ ರೀತಿಯ ನಿರ್ಮಾಪಕ ಹಾಗೂ ನಿರ್ದೇಶಕರ ಮೊದಲ ಆಯ್ಕೆ ನಟಿ ಜಯಪ್ರದ ಅವರು ಆಗಿದ್ದರು. ಅಷ್ಟೇ ಹೊಂದಿಕೊಂಡು ಹೋಗುವ ಗುಣ ಈ ನಟಿಯದು.
ಇತಿಹಾಸ ಸೃಷ್ಟಿಸಿದ ಅಂತ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ದಾಖಲೆಯ ಕಲೆಕ್ಷನ್ ಎಷ್ಟು ಗೊತ್ತಾ?
ಆದರೆ ನಟಿ ಜಯಪ್ರದ ಅವರ ಸಾಂಸಾರಿಕ ಜೀವನ ಮಾತ್ರ ಆಕೆಗೆ ತುಂಬಾ ನೋವನ್ನು ತಂದುಕೊಟ್ಟಿದ್ದು. ಬರೋಬ್ಬರಿ 14 ವರ್ಷ ಇದ್ದಾಗ ಜಯಪ್ರದ ಅವರು ತಮ್ಮ ಶಾಲೆಯ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ನಿರ್ದೇಶಕರ ಕಣ್ಣಿಗೆ ಬಿದ್ದರು ಅಷ್ಟೇ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇವರು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ಸಹ ಬಹಳ ಬೇಡಿಕೆ ನಟಿಯಾಗಿ ಹೊರಹೊಮ್ಮಿದ್ದರು.
1985 ರಲ್ಲಿ ಅತಿ ಹೆಚ್ಚು ಸಂಭವನೆ ಪಡೆಯುತ್ತಿದ್ದ ನಟಿ ಇವರು. ಈ ಸಮಯದಲ್ಲಿ ಇನ್ಕಮ್ ಟ್ಯಾಕ್ಸ್(Income tax) ನಿಂದಾಗಿ ತೊಂದರೆಗೆ ಸಿಲುಕಿಕೊಂಡರು ನೋಡಿ ಜಯಪ್ರದಾ ಅವರು. ಆಗ ಇವರಿಗೆ ಸಹಾಯ ಮಾಡುವ ನೆಪದಲ್ಲಿ ನಿರ್ಮಾಪಕ ಶ್ರೀಕಾಂತ್(Producer Srikanth) ಅವರು ನಟಿ ಜಯಪ್ರದಾ ಅವರಿಗೆ ಪರಿಚಯ ಆಗುತ್ತಾರೆ. ಕಾಲ ಕಳೆದಂತೆ ನಟಿ ಜಯಪ್ರದ ಹಾಗೂ ಶ್ರೀಕಾಂತ್ ಸ್ನೇಹಿತರಾದರು.
ನಂತರ ಇವರಿಬ್ಬರು ಪ್ರೀತಿಸಲು ಶುರು ಮಾಡಿದರು ಇಲ್ಲಿ ದೊಡ್ಡ ಟ್ವಿಸ್ಟ್ ಏನೆಂದರೆ ಶ್ರೀಕಾಂತ್ ಅವರಿಗೆ ಅದಾಗಲೆ ಮದುವೆಯಾಗಿ ಮೂವರು ಮಕ್ಕಳಿದ್ದರೂ. ಆದರೆ ಇದೆಲ್ಲವನ್ನು ಲೆಕ್ಕಸಿದ ನಟಿ ಜಯಪ್ರದ ಅವರು ಅವರನ್ನು ತುಂಬಾನೇ ಡೀಪಾಗಿ ಲವ್ ಮಾಡುತ್ತಿದ್ದರು. ಕೊನೆಗೆ ಈ ವಿಷಯ ಎಲ್ಲಾ ಕಡೆ ಗೊತ್ತಾಗಿ ಬಹಳ ದೊಡ್ಡ ಸುದ್ದಿ ಆಯಿತು. ಆಗ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು ನಟಿ ಜಯಪ್ರದಾಯದವರು.
ಯಾಕೆಂದರೆ ಇವರು ಎರಡನೇ ಹೆಂಡತಿ ಮತ್ತು ಮೊದಲ ಪತ್ನಿಗೆ ಆತ ವಿಚ್ಛೇದನ ಸಹ ಕೊಟ್ಟಿರಲಿಲ್ಲ. ಹೀಗೆ ಪ್ರೀತಿಯಲ್ಲಿ ಇರುವಾಗ ನಟಿ ಜಯಪ್ರದಾ ಅವರು ತೆಗೆದುಕೊಂಡ ಒಂದು ನಿರ್ಧಾರ ಆಕೆಯ ಜೀವನದಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿ ಮಾಡಿತು. ಕಾನೂನಿನ ತೊಡಕುಗಳಿಂದಾಗಿ ಕೊನೆಗೆ ತಂಗಿಯ ಮಗನನ್ನು ದತ್ತು ಪಡೆದ ಈ ನಟಿ ಆತನನ್ನು ಮಗನ ರೀತಿ ನೋಡಿಕೊಳ್ಳುತ್ತಿದ್ದಾರೆ.
ಸಂಸಾರಿಕ ಜೀವನದಲ್ಲಿ ಬಹಳ ತುಂಬಾ ನೊಂದಿರುವ ನಟಿ ಜಯಪ್ರದವರಿಗೆ ಬೇರೆ ರೂಪದಲ್ಲಾದರೂ ಸಂತೋಷ ಸಿಗಲಿ ಎಂದು ಹಾರೈಸೋಣ. ಯಾಕೆಂದರೆ ಹೃದಯವಂತಿಕೆಯಲ್ಲಿ ಈ ನಟಿ ತುಂಬಾ ಒಳ್ಳೆಯವರು ಮತ್ತು ತುಂಬಾ ಜನರ ಜೀವನವನ್ನು ಕಲ್ಪಿಸಿಕೊಟ್ಟವರು.
Follow us On
Google News |