Welcome To Kannada News Today

ಡಾಲಿ ಧನಂಜಯ್​ ಗೆ ಟಾಲಿವುಡ್ ನಿಂದ ಕಾಲ್, ಪುಷ್ಟ ಸಿನಿಮಾ ಬಿಗ್ ಆಫರ್ !

Dolly Dhanajaya to play a major role in Telugu movie 'Pushpa'

🌐 Kannada News :

ಡಾಲಿಗೆ ಟಾಲಿವುಡ್ ನಿಂದ ಬಿಗ್ ಆಫರ್, ಪುಷ್ಟ ಸಿನಿಮಾದಲ್ಲಿ ಡಾಲಿ ಧನಂಜಯ್

ಅವಕಾಶ ಅನ್ನೋದು, ಸಮಯ ನೋಡಿಕೊಂಡು ತಾನಾಗೇ ಹುಡ್ಕೊಂಡು ಬರುತ್ತೆ ಅನ್ನೋಂದುಕ್ಕೆ ಡಾಲಿ ಧನಂಜಯ್ ನಿದರ್ಶನ, ಹೌದು, ಹೀಗೆ ಯಾರೋ ಹೇಳಿದ ಮಾತು ನೆನಪಾಗ್ತಾಯಿದೆ, ” ಯಾವತ್ತೂ ನಾವು ಅವಕಾಶ ಹುಡುಕಿ ಹೋಗಬಾರದು, ಅವಕಾಶನೇ ನಮ್ಮನ್ನು ಹುಡುಕಿ ಬರಬೇಕು,” ಸಕತ್ ಆಲ್ವಾ… ಡಾಲಿ ಗೂ ಅದೇ ಆಗಿರೋದು, ಸಧ್ಯ ಟಾಲಿವುಡ್ ನಿಂದ ಡಾಲಿಗೆ ಬಿಗ್ ಆಫರ್ ಬಂದಿರೋ ಬಗ್ಗೆ ಗುಸುಗುಸು ಶುರುವಾಗಿದೆ.

ಟಾಲಿವುಡ್ ನಟ ಅಲ್ಲು ಅರ್ಜುನ್ ನಟನೆಯ ಪುಷ್ಟ ಸಿನಿಮಾದಲ್ಲಿ ಡಾಲಿ ನಟಿಸುತ್ತಿದ್ದಾರಂತೆ. ಈ ಸಿನಿಮಾದಲ್ಲಿ ನಾಯಕಿ ಪಾತ್ರವನ್ನ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮಾಡುತ್ತಿದ್ದಾರೆ ಎನ್ನುವುದು ಇನ್ನೊಂದು ಹೈಲೈಟ್. ಇದೀಗ ಹರಿದಾಡುತ್ತಿರುವ ಸುದ್ದಿ ಪ್ರಕಾರ ಡಾಲಿ ಧನಂಜಯ್ ಅವರಿಗೂ ಪುಷ್ಟ ಸಿನಿಮಾದಲ್ಲಿ ನಟಿಸುವಂತೆ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ.

ಬಹು ನಿರೀಕ್ಷಿತ ತೆಲುಗು ಚಿತ್ರ ಪುಷ್ಟ ಸಿನಿಮಾದಲ್ಲಿ ಡಾಲಿಗೆ ತಕ್ಕಂತಹ ಪಾತ್ರ ಇದಿಯಂತೆ. ಇದೆ ಪಾತ್ರ ಬೇರೆ ಬೇರೆಯವರ ಕೈತಪ್ಪಿ ಕೊನೆಗೆ ಧನಂಜಯ್ ಹೆಸರನ್ನು ಚಿತ್ರತಂಡ ಅಂತಿಮಗೊಳಿಸಿದೆಯಂತೆ. ಆದ್ರೇ ಇದು ನಿಜವೋ ಸುಳ್ಳೋ ಗೊತ್ತಿಲ್ಲ, ಆದ್ರೆ ಆ ಪಾತ್ರ ಸಿಕ್ಕರೆ ನಮ್ಮ ಡಾಲಿ ಪಾತ್ರಕ್ಕೆ ಜೀವ ತುಂಬೋದು ಪಕ್ಕಾ ಅನ್ನೋದು ಸ್ಯಾಂಡಲ್ ವುಡ್ ರಸಿಕರಿಗೆ ಗೊತ್ತೇ ಇದೆ, ಇದು ಟಾಲಿವುಡ್ ಗೂ ಗೊತ್ತಾಗಬೇಕಾದ್ರೆ ಡಾಲಿ ಗೆ ಆ ಅವಕಾಶ ಸಿಗಬೇಕು ಅಷ್ಟೇ….

ಡಾಲಿಗೆ ಟಾಲಿವುಡ್ ನಿಂದ ಬಿಗ್ ಆಫರ್, ಪುಷ್ಟ ಸಿನಿಮಾದಲ್ಲಿ ಡಾಲಿ ಧನಂಜಯ್
ಡಾಲಿಗೆ ಟಾಲಿವುಡ್ ನಿಂದ ಬಿಗ್ ಆಫರ್, ಪುಷ್ಟ ಸಿನಿಮಾದಲ್ಲಿ ಡಾಲಿ ಧನಂಜಯ್

ಟಾಲಿವುಡ್​​ ನಟ ಅಲ್ಲು ಅರ್ಜುನ್ ಅಭಿನಯದ  ಪುಷ್ಟ ಸಿನಿಮಾ ಅದಾಗಲೇ ಅಭಿಮಾನಿಗಳಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿದೆ, ತೆಲುಗು ಚಿತ್ರ ರಂಗದಲ್ಲಿ ಅಲ್ಲೂ ಅರ್ಜುನ್ ಗೆ ಅವರದೇ ಆದ ಹವಾ ಇದೆ. ಅಂತಹ ಚಿತ್ರದಲ್ಲಿ ನಮ್ಮ ಕನ್ನಡದ ಮೂವರು ಕಲಾವಿದರು ನಟಿಸ್ತಾ ಇರೋದು ನಮಗೆ ಹೆಮ್ಮೆಯ ವಿಷಯವಲ್ವಾ ?

ನಾಯಕಿ ಪಾತ್ರವನ್ನು ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಮಾಡುತ್ತಿದ್ದರೆ, ಖಳನಾಯಕನಾಗಿ ಕರಾವಳಿಯ ಸುನೀಲ್ ಶೆಟ್ಟಿ ಹಾಗೂ ಡಾಲಿ ಆಫರ್ ಪಕ್ಕಾ ಆದ್ರೆ ಡಾಲಿ ಧನಂಜಯ್ .

ಇನ್ನು, ಪುಷ್ಪ ಸಿನಿಮಾ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ, ದೇವಿ ಶ್ರಿಪ್ರಸಾದ್ ಸಂಗೀತ ಸಂಯೋಜನೆ, ಮಿರೋಸ್ಲಾ ಕುಬಾ ಬ್ರೋಜೆಕ್ ಸಿನಿಮಾಟೋಗ್ರಾಫಿ ಇದ್ದು, ಅಲ್ಲು ಅರ್ಜುನ್ ಅವರ 20ನೇ ಸಿನಿಮಾ ಇದಾಗಿದ್ದು, ಸಾಮಾನ್ಯವಾಗಿ ನಿರೀಕ್ಷೆ ಹೆಚ್ಚಾಗಿದೆ. .

Web Title : Dolly Dhanajaya to play a major role in Telugu movie ‘Pushpa’

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile