Welcome To Kannada News Today

ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ

Dr Rajkumar and Parvathamma's Wedding Invitation Goes Viral

🌐 Kannada News :

ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ

ಇಂದು ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬ, ಪ್ರತಿ ವಿಶೇಷ ಸಂದರ್ಭದಲ್ಲಿ ಅಣ್ಣಾವ್ರ ವಿಚಾರಧಾರೆಗಳು, ವಿಷಯಗಳು ವೈರಲ್ ಆಗೇ ಆಗ್ತವೆ, ಅದಕ್ಕೆ ಕಾರಣ ಅವರ ಮೇಲೆ ಕನ್ನಡ ನಾಡಿನ ಜನ ಇಟ್ಟಿರೋ ಪ್ರೀತಿ, ಗೌರವ. ಹಾಗೆಯೇ ವರನಟ ಡಾ.ರಾಜ್ ಕುಮಾರ್ ರವರನ್ನು ನೋಡದೆ ಇರುವ ಅದೆಷ್ಟೋ ಅಭಿಮಾನಿಗಳಿದ್ದಾರೆ, ಅದೇ ರೀತಿ ಅಣ್ಣಾವ್ರ ಮದುವೆ ಸಂಭ್ರಮವನ್ನು ಕಣ್ತುಂಬಿ ಕೊಳ್ಳದ ಅಭಿಮಾನಿಗಳೂ ಇದ್ದಾರೆ.

ಈಗಂತೂ ಮದುವೆ ನೋಡೋ ಭಾಗ್ಯ ಇಲ್ಲ, ಆದರೆ ಅವರ ಮದುವೆ ನಿಮಿತ್ತ ಪ್ರಕಟವಾಗಿದ್ದ ಲಗ್ನಪತ್ರಿಕೆ ಇಲ್ಲಿದೆ ನೋಡಿ…

ಈಗ ಅಣ್ಣಾವ್ರಾ ಮದುವೆ ಸಂಭ್ರಮವನ್ನು ನೋಡುವ ಭಾಗ್ಯ ಸಿಕ್ಕರೆ ಹೇಗೆ ? ಅದು ಕಷ್ಟ ಸಾಧ್ಯ… ಆದರೆ ಅವರ ಮದುವೆಗಾಗಿ ತಯಾರಾಗಿದ್ದ ಲಗ್ನಪತ್ರಿಕೆ ನೋಡೊ ಸೌಭಾಗ್ಯವಂತೂ ಇದೆ. ಸಧ್ಯ ಇದು ಹಲವಾರು ವರ್ಷಗಳ ಹಿಂದೆಯೇ ವೈರಲ್ ಆದ ಲಗ್ನ ಪತ್ರಿಕೆ ಆದ್ರೆ ಇಂದು ಸಹ ಅದು ಸಾವಿರಾರು ಬಾರಿ ಶೇರ್ ಆಗಿರುವ ವಿಷಯ.. ಕನ್ನಡಿಗರ ಕುತೂಹಲ.

ಪತ್ರದ ಸಾರಾಂಶ : 

ನಾಗೇ ಗೌಡರ ಅಣ್ಣಂದಿರು ಲೇಟ್ ನಾಟಕದ ಅಭಿನಯ ಶಿರೋಮಣಿ ಪುಟ್ಟ ಸ್ವಾಮಿಗೌಡರ ಪುತ್ರ ಚಿ ।। ರಾ ।। ಮುತ್ತುರಾಜು ಎಂಬ ವರನಿಗೂ…

ಅಪ್ಪಾಜಿಗೌಡರ ಪುತ್ರಿ ಹ । ಕುಂ । ಶೋ । ಚಿ । ಸೌ । ಪಾರ್ವತಿ ಎಂಬ ವಧುವಿಗೂ…

ಗುರುವಾರ ತಾ 25-06-53 ರ ಶುಭ ದಿವಸ ಸೂರ್ಯೋದಯಾದಿ 10.30 ಘಂಟೆಯ ಶುಭ ಗಳಿಗೆಯಲ್ಲಿ ವಿವಾಹ……

ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ
ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ

WebTitle : Dr Rajkumar and Parvathamma’s Wedding Invitation Goes Viral

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.