Welcome To Kannada News Today

ಇಂದು ನಿಖಿಲ್ ರೇವತಿ ಚಪ್ಪರ ಶಾಸ್ತ್ರ, ನಾಳೆ ಮಾಂಗಲ್ಯ ಧಾರಣೆ

Getting preparation for Nikhil and Revati wedding, today is reception

🌐 Kannada News :

ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಮದುವೆ : 

ಲಾಕ್​ಡೌನ್​ ಹಿನ್ನೆಲೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಅವರ ಮದುವೆ ಅತೀ ಸರಳವಾಗಿ ನಡೆಯಲಿದ್ದು, ನಾಳೆ ಬೆಳಗ್ಗೆ 9.30ಕ್ಕೆ ಮಾಂಗಲ್ಯ ಧಾರಣೆ ನಡೆಯಲಿದೆ. ಈಗಾಗಲೇ ಮಂಟಪ ನಿರ್ಮಾಣ ಹಾಗೂ ಚಪ್ಪರ ಹಾಕುವ ಕೆಲಸ ಆರಂಭವಾಗಿದೆ.

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವಿವಾಹ ನಿಗದಿಯಾದಂತೆ ನಾಳೆಯೇ ನಡೆಯಲಿದ್ದು, ಇಂದು ಚಪ್ಪರ ಶಾಸ್ತ್ರ, ಅಂದಹಾಗೆ ಬಿಡದಿಯ ಕೇತಿಗಾನಹಳ್ಳಿ ಬಳಿ ಇರುವ ತೋಟದ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆದಿದೆ. ಸರಳವಾಗಿ ನಡೆಯಲಿರುವ ಈ ವಿವಾಹದಲ್ಲಿ ಕೇವಲ ಕುಟುಂಬದವರು ಮಾತ್ರ ಭಾಗಿಯಾಗಲಿದ್ದಾರಂತೆ. ಈಗಾಗಲೇ ಮಂಟಪ ನಿರ್ಮಾಣ ಹಾಗೂ ಚಪ್ಪರ ಹಾಕುವ ಕೆಲಸ ಆರಂಭವಾಗಿದೆ. ವಿವಾಹದಲ್ಲಿ 60 ಜನರಿಗೆ ಮಾತ್ರ ಪ್ರವೇಶವಿರಲಿದೆ ಎಂದು ಹೇಳಲಾಗುತ್ತಿದೆ.

ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಮದುವೆ
ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಮದುವೆ

ಶುಕ್ರವಾರ ಬೆಳಗ್ಗೆ 9.30ಗಂಟೆಗೆ ಸರಿಯಾಗಿ ಸಲ್ಲುವ ಶುಭ ಲಗ್ನದಲ್ಲಿ ವಿವಾಹ ಕಾರ್ಯ ನಡೆಯಲಿದೆ. ಎರಡು ಕುಟುಂಬಗಳ ಸಂಬಂಧಿಕರಿಗಷ್ಟೇ ವಿವಾಹಕ್ಕೆ ಆಹ್ವಾನ ನೀಡಲಾಗಿದ್ದು, ಸಾರ್ವಜನಿಕರು ಜೊತೆಗೆ, ಆತ್ಮೀಯರ ಆಗಮನವನ್ನೂ ನಿಷೇಧಿಸಲಾಗಿದೆ. ಜೊತೆಗೆ ಮದುವೆ ಕಾರ್ಯಕ್ಕೆ ಮಾಧ್ಯಮಕ್ಕೂ ಕೂಡ ಪ್ರವೇಶವಿಲ್ಲವಂತೆ.

ಬಹುತೇಕ ಮದುವೆಯ ಶಾಸ್ತ್ರಗಳು ಬೆಂಗಳೂರಿನ ಮನೆಯಲ್ಲಿಯೇ ನಡೆಯಲಿದ್ದು, ಮಾಂಗಲ್ಯಧಾರಣೆ ಮಾತ್ರ ತೋಟದ ಮನೆಯಲ್ಲಿ ನಡೆಯುವುದು ತಿಳಿದು ಬಂದಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.