Welcome To Kannada News Today

ಕನ್ನಡ ಚಿತ್ರರಂಗದ ಧ್ರುವತಾರೆ ಡಾ.ರಾಜ್ ಕುಮಾರ್ ಬಗೆಗೆ ನಿಮಗೆ ತಿಳಿಯದ ಕುತೂಹಲಕಾರಿ ವಿಷಯಗಳು

Interesting facts about Dr. Rajkumar (Mutturaju)

🌐 Kannada News :

ಡಾ.ರಾಜ್ ಕುಮಾರ್ ಬಗೆಗೆ ನಿಮಗೆ ತಿಳಿಯದ ಕುತೂಹಲಕಾರಿ ವಿಷಯಗಳು

ಭಾರತೀಯ ಸಿನಿಮಾ ಇತಿಹಾಸದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದ, ಸಿಂಗನಲ್ಲೂರು ಪುಟ್ಟಸ್ವಾಮಿ ಮುತ್ತುರಾಜು (24 ಏಪ್ರಿಲ್ 1929 – 12 ಏಪ್ರಿಲ್ 2006) ರವರ ಹುಟ್ಟುಹಬ್ಬ ಇದೆ 24 ಏಪ್ರಿಲ್. ಆಪಾರ ಸಾಧನೆಗೈದ ಕನ್ನಡ ಚಿತ್ರರಂಗದ ಹೆಮ್ಮೆಯ ಕುಡಿ ಡಾ.ರಾಜ್ ಕುಮಾರ್ ರವರ ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ.

ಡಾ.ರಾಜ್ ಕುಮಾರ್ ರವರ ಕುತೂಹಲಕಾರಿ ವಿಷಯಗಳು

 • ಡಾ. ರಾಜ್ ಕುಮಾರ್ – ನಟನೆಗಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಭಾರತೀಯ ಚಲನಚಿತ್ರ ರಂಗದ ಮೊದಲ ನಟ.
 • ಡಾ. ರಾಜ್ ಕುಮಾರ್ – 50 ವರ್ಷಗಳಲ್ಲಿ ಕೇವಲ ಒಂದೇ ಭಾಷೆ (ಕನ್ನಡ) ಯಲ್ಲಿ ನಟಿಸಿದ ಏಕೈಕ ನಟ ಮುತ್ತುರಾಜು(ಮುತ್ತಣ್ಣ).
 • ಒಬ್ಬ ನಟ ಜೀವಂತ ಇರುವಾಗಲೇ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವು ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದ್ದ ಭಾರತೀಯ ಸಿನಿಮಾ ಕ್ಷೇತ್ರದ ಮಹಾ ನಟ ರಾಜಣ್ಣ.

  dr.raj-kumar
  ಡಾ.ರಾಜ್ ಕುಮಾರ್
 • ವಿಶ್ವದಾದ್ಯಂತ ಸುಮಾರು 5000ಕ್ಕೂ ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದಿರುವ ಏಕೈಕ ನಟ ಡಾ.ರಾಜ್ ಕುಮಾರ್.
 • ಡಾ. ರಾಜ್ ಕುಮಾರ್ ರವರು ತಮ್ಮ ಗಾಯನ ಮತ್ತು ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ ಏಕೈಕ ನಟ.
 • ಅಭಿನಯಿಸಿದ ಮೊದಲ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರವಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು
 • ತಮ್ಮ ಸಿನಿಮಾ ಕ್ಷೇತ್ರದ ಸಾಧನೆಗಾಗಿ ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿ “ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ” ಗೆದ್ದ ಮೊದಲ ಕನ್ನಡ ನಟ.
 • ಸಿನಿಮಾ ಕ್ಷೇತ್ರದ ಸಾಧನೆಗಾಗಿ “ಪದ್ಮಭೂಷಣ” ಪ್ರಶಸ್ತಿಯನ್ನು ಸ್ವೀಕರಿಸಿದ ಏಕ ಮಾತ್ರ ಕನ್ನಡ ನಟ ಡಾ. ರಾಜ್ ಕುಮಾರ್.
 • ನಟನೆಗಾಗಿ 9 ರಾಜ್ಯ ಪ್ರಶಸ್ತಿಗಳನ್ನು, 10 ಫಿಲ್ಮ್ ಫೇರ್ ಪ್ರಶಸ್ತಿಗಳು, ಗಾಯನಕ್ಕಾಗಿ 2 ರಾಜ್ಯ ಪ್ರಶಸ್ತಿಗಳನ್ನು ಪಡೆದ ಭಾರತೀಯ ಚಲನಚಿತ್ರೋದ್ಯಮದ ಏಕೈಕ ನಟ.
 • 1964 ರಲ್ಲಿ ಮತ್ತು 1968 ರಲ್ಲಿ ಎರಡು ಬಾರಿ ಒಂದೇ ವರ್ಷದಲ್ಲಿ 14 ಚಿತ್ರಗಳಲ್ಲಿ ನಟಿಸಿದ ಏಕೈಕ ಕನ್ನಡ ನಟ
 • ಕನ್ನಡ ಚಲನಚಿತ್ರಗಳಲ್ಲಿ ತಾಯಿ ಮತ್ತು ಮಗಳು, ಇಬ್ಬರ ಜೊತೆಯೂ ನಾಯಕನಾಗಿ ನಟಿಸಿದ ಕನ್ನಡ ನಟ.
 • ಆಂಧ್ರ ಸರ್ಕಾರ ನೀಡಿದ “ಎನ್ಟಿಆರ್ ಪ್ರಶಸ್ತಿ” ಗೆದ್ದ ಕನ್ನಡ ನಟ.

  ಡಾ.ರಾಜ್ ಕುಮಾರ್
  ಡಾ.ರಾಜ್ ಕುಮಾರ್

ಇವಿಷ್ಟೇ ಅಲ್ಲದೇ , ಹೇಳುತ್ತಾ ಹೋದಂತೆಲ್ಲಾ ಅವರ ಸಾಧನೆಗಳು ಮತ್ತು ಪ್ರಶಸ್ತಿಗಳು ಹೆಚ್ಚುತ್ತಲೇ ಇರುತ್ತವೆ. ಕನ್ನಡ ಚಿತ್ರರಂಗದ ಧ್ರುವತಾರೆ ಡಾ.ರಾಜ್ ಕುಮಾರ್ ಇಂದಿಗೂ ಸಾವಿರಾರು ಅಭಿಮಾನಿಗಳ ಆರಾಧ್ಯ ದೈವ. ಇಂದಿಗೂ ನೂರಾರು ಜನರಿಗೆ ಸ್ಪೂರ್ತಿ…. ಇಂದಿನಿಂದ ವಾರಗಳ ಕಾಲ ನಿಮ್ಮ ಕನ್ನಡ ನ್ಯೂಸ್ ಟುಡೇ ಪ್ರತಿ ದಿನ ಅವರ ಬಗೆಗಿನ ಕುತೂಹಲಕಾರಿ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದೆ….

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile