Welcome To Kannada News Today

ಸ್ಯಾಂಡಲ್​ವುಡ್​ ಹಿರಿಯ ನಟ ಸತ್ಯಜಿತ್ ವಿಧಿವಶ (Sathyajith dies at 72) ನಿಧನ

Noted Kannada film actor Sathyajith Died / Dies at 72 - ಸತ್ಯಜಿತ್ ಕನ್ನಡ ಚಿತ್ರರಂಗದ ಪ್ರಮುಖ ಖಳನಟ ಮತ್ತು ಪೋಷಕನಟ, ವಯೋಸಹಜ ಕಾಯಿಲೆಯಿಂದ ವಿಧಿವಶ. ಕೆಲವು ವಿಶೇಷ ಚಿತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದ ಹಿರಿಯ ನಟ ನಿಧನ, ಗಡಸು ದ್ವನಿಯ ಮರೆಯಲಾಗದ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಚಿತ್ರ ನಟ ಸತ್ಯಜಿತ್ ಇನ್ನಿಲ್ಲ.

🌐 Kannada News :

ಬೆಂಗಳೂರು (Bangalore) : ಸ್ಯಾಂಡಲ್ ವುಡ್ ನ ಹಿರಿಯ ನಟ ಸತ್ಯಜಿತ್(72) ವಿಧಿವಶ (Kannada Actor Sathyajith dies at 72) ನಿಧನ. ಚಿತ್ರ ನಟ ಸತ್ಯಜಿತ್ ಇನ್ನಿಲ್ಲ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಸತ್ಯಜಿತ್ (Sathyajith) ಹಲವು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು, ದಿನ ಕಳೆದಂತೆ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು, ಅವರು ಬೌರಿಂಗ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ಹೇಳಲು ವಿಷಾದಿಸುತ್ತೇವೆ. ಸುಮಾರು ರಾತ್ರಿ 2 ಗಂಟೆಗೆ (10th October 2021) ಕೊನೆಯುಸಿರೆಳೆದಿದ್ದಾರೆ.

ಸ್ಯಾಂಡಲ್​ವುಡ್​ ಹಿರಿಯ ನಟ ಸತ್ಯಜಿತ್ ವಿಧಿವಶ
ಸ್ಯಾಂಡಲ್​ವುಡ್​ ಹಿರಿಯ ನಟ ಸತ್ಯಜಿತ್ ವಿಧಿವಶ

ಸತ್ಯಜಿತ್ ಕನ್ನಡ ಚಿತ್ರರಂಗದ ಪ್ರಮುಖ ಖಳನಟ ಮತ್ತು ಪೋಷಕನಟ, ವಯೋಸಹಜ ಕಾಯಿಲೆಯಿಂದ ವಿಧಿವಶ. ಕೆಲವು ವಿಶೇಷ ಚಿತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದ ಹಿರಿಯ ನಟ ನಿಧನ, ಗಡಸು ದ್ವನಿಯ ಮರೆಯಲಾಗದ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಚಿತ್ರ ನಟ ಸತ್ಯಜಿತ್ ಇನ್ನಿಲ್ಲ.

ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪುಟ್ನಂಜ, ಶಿವ ಮೆಚ್ಚಿದ ಕಣ್ಣಪ್ಪ, ಚೈತ್ರದ ಪ್ರೇಮಾಂಜಲಿ, ಆಪ್ತಮಿತ್ರ, ಸೇರಿದಂತೆ 600 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಹಿಂದಿ ಭಾಷೆಯ ಚಿತ್ರ ‘ಅಂಕುಶ್’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸತ್ಯಜಿತ್ ಅವರು ‘ಅರುಣರಾಗ’, ‘ನಮ್ಮೂರ ಹಮ್ಮೀರ’, ‘ಮಾಣಿಕ್ಯ’, ‘ಅಪ್ಪು’, ‘ಗಜ’ ಚಿತ್ರಗಳಲ್ಲೂ ನಟಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸತ್ಯಜಿತ್ ಎಂದೇ ನಾಮಾಂಕಿತರಾಗಿದ್ದ ಅವರ ಮೂಲ ಹೆಸರು ಸೈಯದ್ ನಿಜಾಮುದ್ದೀನ್ (Syed Nizamuddin). ಅವರ ವೃತ್ತಿಪರ ಹೆಸರು ಸತ್ಯಜಿತ್, ಆ ಹೆಸರಿನ ಮೂಲಕವೇ ಅವರು ಚಿರ ಪರಿಚಿತ.

ಅನಾರೋಗ್ಯದಿಂದ ಬಳಲುತ್ತಿದ್ದ “ನಟ ಸತ್ಯಜಿತ್” ರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ..

ಹಿರಿಯ ನಟ ಸತ್ಯಜಿತ್ ನಿಧನ
ಹಿರಿಯ ನಟ ಸತ್ಯಜಿತ್ ನಿಧನ

ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡಿದ್ದ ಹಿರಿಯ ನಟ ಸತ್ಯಜಿತ್ (ವಿಧಿವಶ)

ಕನ್ನಡದ ಹಿರಿಯ ಕಲಾವಿದ ಸತ್ಯಜಿತ್ ಅವರಿಗೆ ‘ಗ್ಯಾಂಗ್ರಿನ್’ ಇದ್ದ ಕಾರಣ, ತಮ್ಮ ಎಡಗಾಲನ್ನ ಕಳೆದುಕೊಂಡಿದ್ದರು. ಅವರ ಜೀವಕ್ಕೆ ಅಪಾಯ ಎನ್ನಲಾದ ಕಾರಣ ಎಡಗಾಲಿನ ತೊಡೆವರೆಗೂ ಕಾಲನ್ನ ಕತ್ತರಿಸಲಾಗಿತ್ತು.

ಜೀವನಕ್ಕಾಗಿ ಸರ್ಕಾರದ ಸಹಾಯಸಹ ಕೇಳಿದ್ದರು.

📣 ಇನ್ನಷ್ಟು ಕನ್ನಡ ಬೆಂಗಳೂರು ನ್ಯೂಸ್ ಗಳಿಗಾಗಿ Bangalore News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today