Youtube ನಲ್ಲಿ ಅಪ್ಲೋಡ್ ಆಯ್ತು ಕೃಷ್ಣತುಳಸಿ, ನಿರ್ಮಾಪಕನಿಂದ ಸೈಬರ್ ಕ್ರೈಂ ಗೆ ದೂರು

kannada movie krishna tulasi producer filled case in cyber crime police

Youtube ನಲ್ಲಿ ಅಪ್ಲೋಡ್ ಆಯ್ತು ಕೃಷ್ಣತುಳಸಿ, ನಿರ್ಮಾಪಕನಿಂದ ಸೈಬರ್ ಕ್ರೈಂ ಗೆ ದೂರು

ವಿಭಿನ್ನ ಕಥಾಹಂದರ ಹೊಂದಿದ್ದು, ಸಾಕಷ್ಟು ಜನರ ಮನ್ನಣೆ ಪಡೆದಿದ್ದ ಚಿತ್ರ ಕೃಷ್ಣತುಳಸಿ, ಕಳೆದ ವರ್ಷವಷ್ಟೇ ಬಿಡುಗಡೆಗೊಂಡು ಉತ್ತಮ ಚಿತ್ರ ಎನಿಸಿಕೊಂಡಿತ್ತು, ಇದೆ ಗೆಲುವಿನ ಖುಷಿಯಲ್ಲಿ ಚಿತ್ರ ನಿರ್ಮಾಪಕ ಚಿಕ್ಕಬಳಾಪುರದ ನಾರಾಯಣಸ್ವಾಮಿ ಚಿತ್ರವನ್ನು ಭಾಷಾಂತರಿಸಿ ತೆಲುಗಿನಲ್ಲೂ ಬಿಡುಗಡೆ ಮಾಡಲು ಸಜ್ಜುಮಾಡಿದ್ದರು.

ಅದಾಗಲೇ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದ್ದ ಚಿತ್ರಕ್ಕೆ ಥಿಯೇಟರ್ ಗಳೂ ಸಹ ಗೊತ್ತಾಗಿದ್ದವು, ಅಷ್ಟರಲ್ಲೇ ಚಿತ್ರವನ್ನು ಕಿಡಿಗೇಡಿಗಳು Youtube ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಚಿತ್ರವನ್ನು ಅದಾಗಲೇ ಲಕ್ಷಾಂತರ ಜನರೂ ಸಹ ವೀಕ್ಷಿಸಿದ್ದಾರೆ. ಈ ಕಾರಣಕ್ಕೆ ಇದೀಗ ಥಿಯೇಟರ್ ಮಾಲೀಕರು ಚಿತ್ರ ಬಿಡುಗಡೆಗೆ ನೋ ಎನ್ನುತ್ತಿದ್ದಾರೆ.

Youtube ನಲ್ಲಿ ಅಪ್ಲೋಡ್ ಆಯ್ತು ಕೃಷ್ಣತುಳಸಿ, ನಿರ್ಮಾಪಕನಿಂದ ಸೈಬರ್ ಕ್ರೈಂ ಗೆ ದೂರು - Kannada News

ಇನ್ನು ಈ ಬಗ್ಗೆ ಚಿತ್ರ ನಿರ್ಮಾಪಕರು ಸೈಬರ್ ಕ್ರೈಂ ಗೆ ದೂರು ನೀಡಿದ್ದು, ಚಿತ್ರವನ್ನು ಕದ್ದು ಮುಚ್ಚಿ ಅಪ್ಲೋಡ್ ಮಾಡಿದವರ ಬಗ್ಗೆ ಕಾನೂನು ಕ್ರಮ ಜರಿಗಿಸಲು ದೂರು ನೀಡಿದ್ದಾರೆ.

ಇನ್ನು ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮತ್ತು ನಟಿ ಮೇಘಶ್ರೀ ನಟಿಸಿದ್ದರು, ಸುಕೇಶ್ ನಾಯಕ್ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ತಮ್ಮ ಪ್ರತಿಭೆ ತೋರಿಸಿದ್ದರು. ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ ಕಿಡಿಗೇಡಿಗಳಿಂದ ಚಿತ್ರ ನಿರ್ಮಾಪಕರು ಐವತ್ತು ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸಿದ್ದಾರೆಂದು ತಿಳಿದು ಬಂದಿದೆ.////

Web Title : Kannada movie krishna tulasi producer filled case in cyber crime police
(Kannada News Live Alerts @ kannadanews.today)

Follow us On

FaceBook Google News

Read More News Today