ಆಚಾರ್ಯ ಸೋಲು: ಪರಿಹಾರ ಕೇಳಿ ಚಿರಂಜೀವಿಗೆ ಪತ್ರ ಬರೆದ ಡಿಸ್ಟ್ರಿಬ್ಯೂಟರ್
Acharya film failure, Distributor asks compensation: ಚಿರಂಜೀವಿ ಅಭಿನಯದ ಭಾರೀ ನಿರೀಕ್ಷಿತ ಚಿತ್ರ ಆಚಾರ್ಯ ಅಂದುಕೊಂಡಂತೆ ಅಭಿಮಾನಿಗಳನ್ನು ತಲುಪಿಲ್ಲ, ಸಿನಿಮಾ ವಿತರಕರು ನಷ್ಟದಲ್ಲಿದ್ದಾರೆ. ಈಗಾಗಿ ಚಿರಂಜೀವಿಗೆ ಪತ್ರ ಬರೆದಿದ್ದಾರೆ.
ಆಚಾರ್ಯ ಚಿತ್ರ ಸೋಲುಕಂಡ ಕಾರಣ ನಷ್ಟಗೊಂಡ ವಿತರಕ ಚಿರಂಜೀವಿಯಿಂದ ಪರಿಹಾರ ಕೇಳಿದ್ದಾರೆ. ಹೌದು, ಚಿತ್ರ ವಿತಕರೊಬ್ಬರು ಬಾರಿ ನಷ್ಟದಿಂದ ಚಿರಂಜೀವಿಗೆ ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಟ ಚಿರಂಜೀವಿ ಅಭಿನಯದ ಭಾರೀ ನಿರೀಕ್ಷೆಯ ಆಚಾರ್ಯ ಚಿತ್ರ ಇತ್ತೀಚೆಗೆ ತೆರೆಗೆ ಬಂದು ವಿಫಲವಾಗಿತ್ತು. ಚಿತ್ರ ಖರೀದಿಸಿದ ವಿತರಕರು ಹೂಡಿದ ಶೇ.25ರಷ್ಟು ಹಣವೂ ಸಹ ವಾಪಸ್ ಬಂದಿಲ್ಲ ಎಂಬ ಆರೋಪವಿದೆ.
ಕರ್ನಾಟಕದ ರಾಯಚೂರು ಜಿಲ್ಲೆಯ ವಿತರಕ ರಾಜಗೋಪಾಲ್ ಅವರು ಚಿರಂಜೀವಿ ಅವರಿಗೆ ಪರಿಹಾರ ನೀಡುವಂತೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, “ನಾನು ಆಚಾರ್ಯ ಚಿತ್ರವನ್ನು ಖರೀದಿಸಿ ಪ್ರದರ್ಶಿಸಿದ್ದೇನೆ. ಆದರೆ ನಿರೀಕ್ಷಿತ ಓಪನಿಂಗ್ ಸಿಗದ ಕಾರಣ ಚಿತ್ರ ಥಿಯೇಟರ್‌ಗಳಲ್ಲಿ ಸರಿಯಾಗಿ ಓಡಲಿಲ್ಲ. ಈ ಚಿತ್ರದಿಂದ ತಾನು ಅಪಾರ ನಷ್ಟ ಅನುಭವಿಸಿದ್ದೇನೆ. ಕೊರೊನಾದಿಂದಾಗಿ ವಿತರಕರು ಈಗಾಗಲೇ ದೊಡ್ಡ ನಷ್ಟದಲ್ಲಿದ್ದಾರೆ.
ಈ ವಿಷಯ ನಿಮಗೆ ಚೆನ್ನಾಗಿ ಗೊತ್ತು. ಹಾಗಾಗಿ ಆಚಾರ್ಯ ಚಿತ್ರವನ್ನು ಖರೀದಿಸಿ ನಷ್ಟಕ್ಕೊಳಗಾದ ವಿತರಕರಿಗೆ ಪರಿಹಾರ ನೀಡಬೇಕು. ಈ ಚಿತ್ರಕ್ಕೆ ಸಾಲ ಮಾಡಿ ಬಂಡವಾಳ ಹಾಕಿದ್ದೇನೆ. ಚಿತ್ರ ಓಡದ ಕಾರಣ ಹಣ ಕಳೆದುಕೊಂಡು ಸಾಲಗಾರನಾದೆ, ಎಂದು ಕೇಳಿಕೊಂಡಿದ್ದಾರೆ.
ಇನ್ನು ಇದೆ ಚಿತ್ರಕ್ಕೆ ಇನ್ನೂ ಹಲವು ವಿತರಕರು ಕೂಡ ಪರಿಹಾರ ಕೇಳುತ್ತಿದ್ದಾರೆ ಎನ್ನಲಾಗಿದೆ.
letter to Chiranjeevi seeking compensation on Acharya film failure from Distributor
Acharya Movie Trailer – ಆಚಾರ್ಯ ಮೂವಿ ಟ್ರೈಲರ್
ಆಚಾರ್ಯ ಸೋಲು: ಚಿರಂಜೀವಿಯನ್ನೇ ಪರಿಹಾರ ಕೇಳಿದ ಡಿಸ್ಟ್ರಿಬ್ಯೂಟರ್ – Web Story
https://kannadanews.today/web-stories/letter-to-chiranjeevi-seeking-compensation-on-acharya-film-failure/