ಚಾಲೆಂಜಿಂಗ್ ಸ್ಟಾರ್ ಗೆ ಜೊಡಿ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ

Kirk Party Rashmika Mandanna with Challenging Star Darshan | itskannada Film

( itskannada ) ಚಾಲೆಂಜಿಂಗ್ ಸ್ಟಾರ್ ಗೆ ಜೊಡಿ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ.
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ಎಂಬ ಉಹಾ ಪೋಹ ಹಾಗು ಗಾಳಿ ಸುದ್ದಿಗೆ ತೆರೆ ಬಿದ್ದಿದ್ದು , ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ  ನಟಿಸುತ್ತುರುವುದು ಖಾತ್ರಿಯಾಗಿದೆ.ದರ್ಶನ್ ಅಭಿನಯದ 51ನೇ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿರುವ ಚಿತ್ರಕ್ಕೆ ಬಿ.ಸುರೇಶ್-ಶೈಲಜಾ ನಾಗ್ ನಿರ್ಮಾಣ ಹೂಡಿಕೆ ಹಾಕಿದ್ದಾರೆ. ನಾಯಕಿಯ ಬಗೆಗಿನ ಅಂತೆ ಕಂತೆಗಳಿಗೆ ತೆರೆ ಎಳೆಯಲಾಗಿದೆ.
 ಸಂಕ್ರಾಂತಿ ಶುಭಾಶಯಗಳನ್ನು ಕೋರಿ ಚಿತ್ರ ತಂಡ ಚಿತ್ರದ ಮುಹೂರ್ತ ಮಕರಸಂಕ್ರಾಂತಿ ಹಬ್ಬದಂದು ನೆರವೇರಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಮತ್ತೋರ್ವ ನಾಯಕಿಗಾಗಿ ನಿರ್ಮಾಪಕಿ ಶೈಲಜಾ ನಾಗ್ ಹುಡುಕಾಟ ನಡೆಸುತ್ತಿದ್ದಾರೆ.
 ಇದು ದರ್ಶನ್ ನಟನೆಯ 51ನೇ ಚಿತ್ರವಾಗಿದ್ದು , ಪಕ್ಕಾ ಕಮರ್ಷಿಯಲ್ ಮಾದರಿಯಲ್ಲೇ ಸಿದ್ಧಗೊಳ್ಳಲಿದೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ .ಶೈಲಜಾ ನಾಗ್ ಈ ಚಿತ್ರ ದರ್ಶನ್ ಅಭಿಮಾನಿಗಳ ಜತೆಗೆ ಎಲ್ಲ ವರ್ಗಕ್ಕೂ ಇಷ್ಟವಾಗಲಿದೆ ಎಂಬ  ಆಶಯಹೊಂದಿದ್ದಾರೆ.
 ಇದೇ ವೇಳೆ ಚಿತ್ರದ ಕುರಿತಂತೆ ಮಾತಗಿಳಿದ ರಶ್ಮಿಕಾ ಮಂದಣ್ಣ, ದರ್ಶನ್ ಅವರ ಜತೆ ನಟಿಸುವುದು ಇನ್ನಷ್ಟು ಉತ್ಸಾಹ ತಂದಿದೆ ಎಂದರು. ಈ ಮೊದಲೇ ನಾನು ದರ್ಶನ್ ಅವರ ಜೊತೆ ತಾರಕ್ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಚಮಕ್ ಚಿತ್ರದಿಂದಾಗಿ ಡೇಟ್ಸ್ ಸಿಗದೆ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂದರು.
ರಶ್ಮಿಕಾ ಮಂದಣ್ಣ ರವರ ಕನ್ನಡದಲ್ಲಿ ಇದು ನನ್ನ ನಾಲ್ಕನೇ ಚಿತ್ರ. ಇನ್ನು ತೆಲುಗಿನ ಚಿತ್ರ ಚಲೋ ಬಿಡುಗಡೆ ಹಾದಿಯಲ್ಲಿದೆ. ವಿಜಯ್ ದೇವರಕೊಂಡ ಜತೆಗೆ ನಟಿಸುತ್ತಿರುವ ಚಿತ್ರವು ಚಿತ್ರೀಕರಣ ಹಂತದಲ್ಲಿದೆ ಎಂದರು.
ಭರ್ಜರಿ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದು ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಲಿದ್ದಾರೆ. ಪಿ ಕುಮಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಪ್ರೇಕ್ಷಕರ ಕುತೂಹಲಕ್ಕೆ , ನಿರೀಕ್ಷೆಗೆ ಯಾವುದೇ ಕೊರತೆ ಇಲ್ಲದೆ ಸಿನಿಮಾ ನೀಡಲಿದ್ದೇವೆ ಎಂದು ಚಿತ್ರ ತಂಡ ಬರವಸೆ ವ್ಯಕ್ತ ಪಡಿಸಿದೆ, |itskannada Film

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸಿನಿಮಾ ಸುದ್ದಿಗಾಗಿ ಸಿನಿ-ಹನಿ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸಿನಿಮಾ ಪುಟ –ಕನ್ನಡ ಸಿನಿಮಾ ಸುದ್ದಿಗಳು-ಇಲ್ಲವೇ ವಿಭಾಗ ಸ್ಯಾಂಡಲ್ ವುಡ್ ಸುದ್ದಿ ಕ್ಲಿಕ್ಕಿಸಿ itskannada :today news in Kannada: for latest news visit-Kannada news– more in Kannada Film click Kannada Film News or look at Sandalwood News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.