Welcome To Kannada News Today

ಲಾಕ್ ಡೌನ್ ಎಫೆಕ್ಟ್ : ಮೈಸೂರಿನಲ್ಲಿ ಸಿಲುಕಿದ ನಟಿ ಭಾರತಿ ವಿಷ್ಣುವರ್ಧನ್

Lockdown Effect: Actress Bharathi Vishnuvardhan struck in Mysore

🌐 Kannada News :

ಡಾ. ಭಾರತಿ ವಿಷ್ಣುವರ್ಧನ್ ಲಾಕ್‍ಡೌನ್ ಹಿನ್ನೆಲೆ ಮೈಸೂರಿನಲ್ಲಿ ಸಿಲುಕಿದ್ದಾರೆ. ಸಚಿವ ಎಸ್ ಟಿ ಸೋಮಶೇಖರ್ ಅವರು ಬೆಂಗಳೂರಿಗೆ ತಲುಪಲು ನೆರವಾಗಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ, ನಟಿ ಜಯಂತಿಯವರು ಲಾಕ್ ಡೌನ್ ನಿಂದಾಗಿ ಹಂಪಿಯಲ್ಲಿಯೇ ಸಿಲುಕಿದ್ದ ಸುದ್ದಿಯಾಗಿತ್ತು, ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ರವರು ಇದೆ ರೀತಿ ಮೈಸೂರಿನಲ್ಲಿ ಸಿಲುಕಿದ್ದಾರೆ.

ಹೌದು, ಕೆಲಸದ ನಿಮಿತ್ತ ಮೈಸೂರಿಗೆ ಹೋಗಿದ್ದ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಲ್ಲೇ ಉಳಿದುಕೊಂಡಿದ್ದರು. ಲಾಕ್ ಡೌನ್ ನಂತರ ಹಿಂದುರಿಗಿದರೆ ಆಯಿತು ಅಂದು ಕೊಂಡಿದ್ದರು, ಆದರೆ ಇದೀಗ ಲಾಕ್‍ಡೌನ್ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ತಲುಪಿಸಲು ಸಚಿವರಾದ ಎಸ್ ಟಿ ಸೋಮಶೇಖರ್ ಸಹಾಯ ಮಾಡಿದ್ದಾರೆ.

ಇನ್ನು, ಕೋವಿಡ್ -19 ಪ್ರಕರಣಗಳ ಏರಿಕೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ  826 ಮತ್ತು 28 ಸಾವುಗಳನ್ನು ವರದಿ ಮಾಡಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು ಈಗ 12,759 ರಷ್ಟಿದ್ದು, 420 ಸಾವುಗಳು ಸಂಭವಿಸಿವೆ.

ಈ ನಡುವೆ 55 ದೇಶಗಳಿಗೆ ಮಲೇರಿಯಾ ವಿರೋಧಿ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಸಲು ಕೇಂದ್ರ ಸರ್ಕಾರ ಗುರುವಾರ ನಿರ್ಧರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಸರಬರಾಜಿಗೆ ದೇಶವು ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

Web title : Lockdown Effect: Actress Bharathi Vishnuvardhan struck in Mysore

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile