Welcome To Kannada News Today

ಏ.17ಕ್ಕೆ ಬಿಡದಿಯ ತೋಟದ ಮನೆಯಲ್ಲಿ ನಿಖಿಲ್ -ರೇವತಿ ಸರಳ ವಿವಾಹ : ಕುಮಾರಸ್ವಾಮಿ

🌐 Kannada News :

ಏ.17ಕ್ಕೆ ಬಿಡದಿಯ ತೋಟದ ಮನೆಯಲ್ಲಿ ನಿಖಿಲ್ -ರೇವತಿ ಸರಳ ವಿವಾಹ

ಈ ಮೊದಲೇ ನಿಖಿಲ್ ಮತ್ತು ರೇವತಿಯ ವಿವಾಹಕ್ಕೆ ಸಿದ್ಧತೆ ನಡೆದಿತ್ತು ಮೊದಲು ಲಾಕ್ ಡೌನ್ ಘೋಷಣೆಯ ನಂತರ ಮದುವೆಯನ್ನು ಸರಳವಾಗಿ ನಿಗದಿತ ದಿನಾಂಕದಂದೇ ಮಾಡಲು ನಿರ್ಧರಿಸಲಾಯಿತು. ಇದೀಗ ಎರಡನೇ ಬಾರಿ ಲಾಕ್ ಡೌನ್ ವಿಸ್ತರಣೆಗೊಂಡ ನಂತರ ಮತ್ತು ಬೆಂಗಳೂರಿನಲ್ಲಿ ರೆಡ್ ಜೋನ್ ಅಳವಡಿಸಿರುವುದರಿಂದ ವಿವಾಹವನ್ನು ಸರಳವಾಗಿ ಬಿಡದಿಯಲ್ಲಿ ನೆರವೇರಿಸಲು ಸಿದ್ಧತೆ ನಡೆದಿದೆ.

ನಿಖಿಲ್ ಕುಮಾರಸ್ವಾಮಿ – ರೇವತಿ ವಿವಾಹವು ಏ.17 ರಂದು ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಸರಳವಾಗಿ ನಡೆಯಲಿದೆ.

ಈಗಾಗಲೇ ತೋಟದ ಮನೆಯಲ್ಲಿ‌ ಮದುವೆ ಕಾರ್ಯಕ್ಕೆ ಸಿದ್ದತೆ ನಡೆಯುತ್ತಿದೆ. ಈ ಹಿಂದೆ ರಾಮನಗರದ ಜಾನಪದ ಲೋಕದ ಬಳಿ ಮದುವೆಗೆ ಸ್ಥಳ ನಿಶ್ಚಯವಾಗಿತ್ತು ಕೊರೋನಾ ಭೀತಿ ಹಿನ್ನೆಲೆ ಬೆಂಗಳೂರಿನಲ್ಲಿ ಮದುವೆ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ನಿಶ್ಚಿಯಿಸಿದ್ದರು.

ಆದರೆ, ಇದೀಗ ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವ್ ನಲ್ಲಿ ರೆಡ್ ಜೋನ್ ಇರುವ ಹಿನ್ನಲೆ ಬಿಡದಿಯ ತೋಟದ ಮನೆಯಲ್ಲಿ ಸರಳವಾಗಿ ಮದುವೆ ತಯಾರಿ ನಡೆದಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.