Welcome To Kannada News Today

ಕೊರೋನ ಕುರಿತು ಪೊಲೀಸರ ವಿನೂತನ ಜಾಗೃತಿ, ವೈರಲ್

Police Awareness Of Coronavirus Goes Viral

🌐 Kannada News :

ಕರೋನಾ ಹಾವಳಿ ಹಿನ್ನೆಲೆಯಲ್ಲಿ ಸರಕಾರ ಒಂದಿಲ್ಲೊಂದು ರೀತಿಯಲ್ಲಿ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಸಿನಿಮಾ ಮಂದಿ ಕಡೆಯಿಂದಲೂ ಕೊರೋನಾ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿಸುತ್ತಿದೆ. ಈಗ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದ ಇದು ಚರಿತ್ರೆ ಸೃಷ್ಟಿಸೋ ಅವತಾರ ಡೈಲಾಗ್ ಬಳಸಿಕೊಂಡು ಪೊಲೀಸ್ ಇಲಾಖೆ ಜಾಗೃತಿ ಮೂಡಿಸಿದೆ.

ಇದು ಚರಿತ್ರೆ ಸೃಷ್ಟಿಸೋ ಅವಕಾಶ, Mask up, ಅದುವೇ ಸಿದ್ದಾಂತ, Hand wash, ಈಗಿನ ವೇದಾಂತ! @rakshitshetty ಎಂದು ಟ್ವಿಟ್ಟರ್ ನಲ್ಲಿ ಬರೆದಿರುವ ಪೊಲೀಸರು ಆ ಬಗ್ಗೆ ಪೋಸ್ಟರ್ ಅನ್ನು ಕೂಡ ಶೇರ್ ಮಾಡಿದ್ದಾರೆ. ಸದ್ಯ ಈ ಸಂದೇಶ ಜನರಿಗೆ ಇಷ್ಟವಾಗಿದ್ದು ಸಕಾರಾತ್ಮಕ ಕಾಮೆಂಟ್ ಗಳು ವ್ಯಕ್ತವಾಗಿವೆ.

ಟ್ವಿಟ್ಟರ್ ಪೋಸ್ಟ್ ನಲ್ಲಿ ನೆಟ್ಟಿಗರು ಸಹ ಕಾಮೆಂಟ್ ಮಾಡಿದ್ದು…

“ನಾಲ್ಕು ದಿಕ್ಕಲಿ ಐತೆ..ಆಚೆ ಬಂದರೆ ಮೆಟ್ಟಕೊಂಥೈತೆ.. ಏರಿಲ್ಲ ಮಿತಿ.. ಬರಿ ತಿಥಿ. ! ಖಾಲಿ ರೋಡಿನ ಪುರಾಣ..!! ಆಚೆ ಬಂದರೆ ಮರಣ..!! Stay home..!! ಇದು ಕೊರೋನ..! Stay safe.!! ಇದು ಕೊರೋನೋ .!!” ಎಂದು ಕಾಮೆಂಟ್ ಮಾಡಿದ್ದಾರೆ..

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.