Welcome To Kannada News Today

ಖ್ಯಾತ ಕನ್ನಡ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ನಿಧನ, ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

Popular Kannada actor Bullet Prakash Passes Away

🌐 Kannada News :

Kannada comedy actor Bullet Prakash dies at a private hospital

ಬೆಂಗಳೂರು:  ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹೌದು ಕನ್ನಡದ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಅನಾರೋಗ್ಯದಿಂದ ಸೋಮವಾರ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.

ಕೆಲವು ದಿನಗಳಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಂಡ ಕಾರಣ ಬುಲೆಟ್‌ ಪ್ರಕಾಶ್ ಬೆಂಗಳೂರಿನ ಕನ್ನಿಂಗ್ ಹ್ಯಾಮ್‌‌ ರಸ್ತೆಯಲ್ಲಿನ ಪೋರ್ಟೀಸ್‌ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಖ್ಯಾತ ಕನ್ನಡ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ನಿಧನ, ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ
ಖ್ಯಾತ ಕನ್ನಡ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ನಿಧನ, ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಬುಲೆಟ್‌ ಪ್ರಕಾಶ್ ಲಿವರ್‌ ಮತ್ತು ಕಿಡ್ನಿ ವೈಫಲ್ಯದಿಂದ ಮೃತರಾದರು ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಕೆಲವು ವರ್ಷಗಳ ಹಿಂದೆ ಬುಲೆಟ್‌ ಪ್ರಕಾಶ್‌ ದೇಹದ ತೂಕ ಇಳಿಸಿಕೊಳ್ಳಲು ಯತ್ನಿಸಿದ್ದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿತ್ತು. ಇದರಿಂದ ಅವರು ಚಿತ್ರರಂಗದಿಂದ ಬಹುತೇಕ ದೂರ ಉಳಿದಿದ್ದರು.

ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಆಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. 6 ದಿನಗಳ ಹಿಂದೆ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

Popular Kannada comedy actor Bullet Prakash, who was known for his performances in films like Aithalakkadi and Aryan passed away today (April 6), dies at a private hospital in Bengaluru

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.