ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ನಟಿ ತಾರಾ

ಯೋಗವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹಿರಿಯ ನಟಿ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ ಅನೂರಾಧ ಅವರು ಕರೆ ನೀಡಿದರು.

Online News Today Team

ಬೆಂಗಳೂರು (Bengaluru) ಜೂನ್ 21: ದಿನನಿತ್ಯ ಜೀವನದಲ್ಲಿ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳುವ ಮೂಲಕ ಜೀವನ ಉತ್ಸಾಹವನ್ನು ಹೆಚ್ಚಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಎಲ್ಲರೂ ನಮ್ಮ ಪ್ರಾಚೀನ ಪರಂಪರೆಯ ಪ್ರಮುಖ ಕೊಡುಗೆಯಾಗಿರುವ ಯೋಗವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹಿರಿಯ ನಟಿ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ ಅನೂರಾಧ ಅವರು ಕರೆ ನೀಡಿದರು.

ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಇಂದು ನಗರದ ವನ ವಿಕಾಸ ಕಟ್ಟಡದ ಎದುರು ಸಾಮೂಹಿಕ ಯೋಗ ಅಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯೋಗದ ವಿವಿಧ ಆಸನಗಳ ಪ್ರದರ್ಶಿಸಿ ನಂತರ ಮಾತನಾಡಿದರು. ಯೋಗ ಭಾರತೀಯ ಪರಂಪರೆಯ ಪ್ರಮುಖವಾದಂತಹ ಕೊಡುಗೆ. ಈ ಕೊಡುಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ ವಿಶ್ವವ್ಯಾಪಿಯಾಗಿದೆ.

Practice yoga in everyday life says Tara Anuradha

ಆದರೆ ಬಹಳಷ್ಟು ಭಾರತೀಯರು ಇನ್ನೂವರೆಗೂ ತಮ್ಮ ಜೀವನದ ಭಾಗವನ್ನಾಗಿ ಯೋಗಾಭ್ಯಾಸವನ್ನು ಅಳವಡಿಸಿಕೊಂಡಿಲ್ಲ. ಯೋಗ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಾವುಗಳು ಜೀವನದಲ್ಲಿ ಉತ್ಸಾಹವನ್ನು ಪಡೆದುಕೊಳ್ಳಬಹುದಾಗಿದೆ. ದೈಹಿಕವಾಗಿ ಮಾನಸಿಕವಾಗಿ ಶಕ್ತಿಯನ್ನು ಮತ್ತು ನವಚೈತನ್ಯವನ್ನು ನೀಡುವಂತಹ ಯೋಗವನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ರಾಜ್ಯದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್ ಕೆ ಸಿಂಗ್ ಮಾತನಾಡಿ ಯೋಗಾಭ್ಯಾಸದಿಂದ ದೇಹ ಫ್ಲೆಕ್ಸಿಬಲ್ ಆಗುತ್ತದೆ. ದೇಹ ಆಘಾತಗಳಿಗೆ ಸಕಾರಾತ್ಮಕ ವಾಗಿ ಪ್ರತಿಕ್ರಿಯಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಪ್ರಾಣಾಯಾಮ ನಮ್ಮ ಆಂತರಿಕ ಅಂಗಾಂಗಗಳಿಗೆ ಚೈತನ್ಯ ತುಂಬುತ್ತದೆ ಎಂದರು.

ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅರಣ್ಯ ಅಭಿವೃದ್ಧಿ ನಿಗಮ ದ ವ್ಯವಸ್ಥಾಪಕ ನಿರ್ದೇಶಕ ಶ್ರೀಮತಿ ರಾಧಾದೇವಿ ಹಾಗೂ ಹಿರಿಯ ಅಧಿಕಾರಿಗಳು ಮತ್ತು ನೌಕರರು ಪಾಲ್ಗೊಂಡಿದ್ದರು.

Practice yoga in everyday life says Tara Anuradha

Follow Us on : Google News | Facebook | Twitter | YouTube