Welcome To Kannada News Today

ರಸ್ತೆ ಅಪಘಾತದಲ್ಲಿ ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನ, ಕಂಬನಿ ಮಿಡಿದ ಜಗ್ಗೇಶ್

Public TV reporter killed in road accident in Ramanagar

🌐 Kannada News :

ಬೆಂಗಳೂರು : ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ವರದಿಗಾರ ಹನುಮಂತು ರವರು ಇಂದು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಎಟಿಎಂಗೆ ಹಣ ತುಂಬಲು ತೆರಳುತ್ತಿದ್ದ ಎಟಿಎಂ ವಾಹನವು ಡಿಕ್ಕಿ ಹೊಡೆದ ಪರಿಣಾಮ, ಕರ್ತವ್ಯ ನಿರತ ಪತ್ರಕರ್ತ ಹನುಮಂತು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಅವರು ತನ್ನ ಹೆಂಡತಿ ಮತ್ತು ಒಂದು ವರ್ಷದ ಮಗುವನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸರು, ಪರಿಶೀಲನೆ ನಡೆಸಿ, ಅಪಘಾತಕ್ಕೆ ಕಾರಣವಾದಂತ ವಾಹನವನ್ನು ಜಪ್ತಿ ಮಾಡಿ, ಈ ಸಂಬಂಧ ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ ಗೋಲ್ಡನ್ ಸ್ಟಾರ್ ಗಣೇಶ್, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ವರದಿಗಾರ ಹನುಮಂತು ರಾಮನಗರದ ಜಿಲ್ಲಾ ಕಾರಾಗೃಹದ ಬಳಿ ವರದಿ ಮಾಡಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂಬುದು ತಿಳಿದು ಬಂದಿದೆ. ಎಟಿಎಂಗೆ ಹಣ ತುಂಬುವ ವಾಹನವು ಹನುಮಂತು ಅವರ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು ಎಂದು ತಿಳಿದು ಬಂದಿದೆ.

ರಾಮನಗರ ಜೈಲಿನ ವಿಚಾರಣಾಧೀನ ಖೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸುವ ಕುರಿತು ಅವರು ವರದಿ ಮಾಡಿದ್ದರು, ಹಾಗೂ ದುರ್ವಿಧಿ ಇದುವೇ ಅವರ ಕೊನೆಯ ವರದಿ.

ಇದನ್ನೂ ಓದಿ : ಲಾಕ್ ಡೌನ್ ಉಲ್ಲಂಘನೆ : ನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ FIR

ಇನ್ನು ಹನುಮಂತು ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿ ವರದಿಗಾರನ ಕುಟುಂಬಕ್ಕೆ, ಅನಾರೋಗ್ಯದಿಂದ ಬಳಲುತ್ತಿರುವ ಹನುಮಂತುವಿನ ಮಗುವಿನ ಚಿಕಿತ್ಸೆ ಬರಿಸಲು 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಖಾಸಗಿ ಟಿವಿ ವಾಹಿನಿಯ ವರದಿಗಾರ ಹನುಮಂತು ನಿಧನದ ಸುದ್ದಿ ತಿಳಿದ ಸ್ಯಾಂಡಲ್ ವುಡ್ ನಟ ನವರಸನಾಯಕ, ಕಂಬನಿ ಮಿಡಿದಿದ್ದಾರೆ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೃತ ಪತ್ರಕರ್ತನಿಗೆ ಸಂತಾಪ ಸೂಚಿಸಿದ್ದಾರೆ.

ಕಾಯಕಯೋಗ ಮಾಡುವಾಗ ಮರಣಹೊಂದಿದ ವಿಷಯ ಕೇಳಿ ದುಃಖವಾಯಿತು..! ಈ ಕೈಯಿಂದ ಕಾಯಕ ಎಷ್ಟು ಹೊಟ್ಟೆತುಂಬಿಸುತ್ತಿತ್ತೋ ಪಾಪ ! ಅವರ ಕುಟುಂಬದ ಸದಸ್ಯರ ನೋವು ಬರಿಸುವ ಶಕ್ತಿ ಕಾಯಕಯೋಗದ ಪಾಠ ಮಾಡಿದವನೆ ನೀಡಬೇಕು..ಹರಿಃಓಂ ಎಂದು ಟ್ವೀಟ್ ಮಾಡಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile