Puneet Rajkumar : ಪುನೀತ್ ರಾಜ್ ಕುಮಾರ್ ಕೊನೆಯ ಫೋಟೋ ವೈರಲ್

Puneet Rajkumar Last Pick Viral : ಪುನೀತ್ ರಾಜ್‌ಕುಮಾರ್ ನಿಧನ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪುನೀತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಅಕ್ಟೋಬರ್ 29ರಂದು ಬೆಳಗ್ಗೆ ಜಿಮ್ ಮಾಡುವಾಗ ಹೃದಯಾಘಾತವಾಗಿ ದಿಢೀರ್ ಕುಸಿದು ಬಿದ್ದಿದ್ದರು. 

ಅವರ ನಿಧನ ಸುದ್ದಿ ಇಡೀ ಕನ್ನಡಿಗರ ಕಣ್ಣಲ್ಲಿ ನೀರು ತರಿಸಿತ್ತು. ಸದ್ಯ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗಿದ್ದು, ಅಲ್ಲಿ ಅಪಾರ ಜನಸ್ತೋಮವಿದೆ. ಈ ವೇಳೆ ಯಾವುದೇ ಹಾನಿಯಾಗದಂತೆ ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇನ್ನೊಂದೆಡೆ ಪುನೀತ್ ಲಾಸ್ಟ್ ಪಿಕ್ ಇಂಟರ್ನೆಟ್ ಅಲ್ಲಿ ವೈರಲ್ ಆಗಿದೆ. ಆ ಪಿಕ್ ನಲ್ಲಿ ಪುನೀತ್ ವಾಕಿಂಗ್ ಮಾಡುತ್ತಿರುವುದು ಕಾಣುತ್ತಿದೆ. ಪುನೀತ್ ಕನ್ನಡದ ಟಾಪ್ ಸ್ಟಾರ್. ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಅಭಿಮಾನಿಗಳು ಪುನೀತ್ ಅವರನ್ನು ಪ್ರೀತಿಯಿಂದ ಪವರ್ ಸ್ಟಾರ್, ಅಪ್ಪು ಆಂತಾಲೇ ಕರೆಯುತ್ತಾರೆ. ಹೀರೋ ಮಾತ್ರವಲ್ಲದೆ, ಸಾವಿರಾರು ಜನರಿಗೆ ಸಹಾಯ ಮಾಡಿದ ರಿಯಲ್ ಹೀರೊ ಇಂದು ನಮ್ಮ ನಡುವೆ ಇಲ್ಲದಿರುವುದು ತುಂಬಾ ಬೇಸರದ ಸಂಗತಿ…. ನಂಬಲಾಗದ ಸತ್ಯ

Stay updated with us for all News in Kannada at Facebook | Twitter
Scroll Down To More News Today