ಪುನೀತ್ ರಾಜ್ ಕುಮಾರ್ : “ದೊಡ್ಮನೆ ಹುಡುಗ” ನಿಗೆ ಕಣ್ಣೀರ ವಿಧಾಯ

ಸಕಲ ಗೌರವಗಳೊಂದಿಗೆ ಪುನೀತ್​ಗೆ ಅಂತಿಮ ವಿದಾಯ, ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಕೋನೆಗಳಿಗೆ.... ಬೆಂಗಳೂರಿನ ಕಂಠೀರವ ಮೈದಾನದಲ್ಲಿ ಸರ್ಕಾರಿ ಅಧಿಕೃತ ವಿಧಿವಿಧಾನಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನೆರವೇರಿತು.

ಬೆಂಗಳೂರು: ಸಕಲ ಗೌರವಗಳೊಂದಿಗೆ ಪುನೀತ್​ಗೆ ಅಂತಿಮ ವಿದಾಯ, ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಕೋನೆಗಳಿಗೆ…. ಬೆಂಗಳೂರಿನ ಕಂಠೀರವ ಮೈದಾನದಲ್ಲಿ ಸರ್ಕಾರಿ ಅಧಿಕೃತ ವಿಧಿವಿಧಾನಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನೆರವೇರಿತು.

ಪುನೀತ್ ಅವರ ಅಂತ್ಯಕ್ರಿಯೆ ಅವರ ತಂದೆ ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಸಮಾಧಿ ಬಳಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕರ್ನಾಟಕ ಬಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಿನಿಮಾ ನಟರು ಪಾಲ್ಗೊಂಡಿದ್ದರು.

ಸರ್ಕಾರದ ವತಿಯಿಂದ ವಿಧಿವಿಧಾನಗಳು ಮುಕ್ತಾಯವಾಗಿ, ಕುಟುಂಬಸ್ಥರಿಂದ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಯಿತು. ಭೂತಾಯಿ ಮಡಿಲು ಸೇರಿದ ನಟನ ಅಗಲಿಕೆ ಶತಮಾನ ಕಳೆದರೂ ಮರೆಯಲಾಗದು…

ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿ ನೋಡಲು ಅಪಾರ ಅಭಿಮಾನಿಗಳು ಮುಗಿಬಿದ್ದರು. ಪುನೀತ್ ಸಹೋದರ ರಾಘವೇಂದ್ರ ಪುತ್ರ ವಿನಯ್ ರಾಜ್ ಕುಮಾರ್ ಅಂತಿಮ ವಿಧಿವಿಧಾನ ನಡೆಸಿಕೊಟ್ಟರು.

ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಮನೆಯವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ವಿಕ್ರಮ್ ಆಸ್ಪತ್ರೆಯಲ್ಲಿ ಮೃತಪಟ್ಟರು.

ಪುನೀತ್ ರಾಜ್ ಕುಮಾರ್ ಮನೆ ಬಳಿ ಹೈ ಸೆಕ್ಯೂರಿಟಿ ಏರ್ಪಡಿಸಲಾಗಿದೆ. ಅಂತ್ಯಸಂಸ್ಕಾರ ಮುಗಿಸಿ ಕುಟುಂಬಸ್ಥರು ಮನೆ ಕಡೆ ಬರುವ ಸಾಧ್ಯತೆ ಇರುವುದರಿಂದ ಸದಾಶಿವನಗರದ ಮನೆಯ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಮನೆಯ ಹತ್ತಿರಕ್ಕೆ ಅಭಿಮಾನಿಗಳನ್ನು ನಿರ್ಬಂಧಿಸಲಾಗಿದೆ.

Stay updated with us for all News in Kannada at Facebook | Twitter
Scroll Down To More News Today