ಪುನೀತ್ ರಾಜ್ ಕುಮಾರ್ : ತಾಯಿ ಅಶ್ವಿನಿಯನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

Puneeth Rajkumar funeral : ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿವಿಧಾನ ನಡೆಯುತ್ತಿದೆ, ಪುನೀತ್ ಕುಟುಂಬ ವರ್ಗ ಪೂಜೆ ಸಲ್ಲಿಸುತ್ತಿದೆ, ಅಂತಿಮ ಪೂಜೆ ಸಲ್ಲಿಸಿ ಪುನೀತ್ ಮಕ್ಕಳು ಹಾಗೂ ಪತ್ನಿ ಬಿಕ್ಕಿ ಬಿಕ್ಕಿ ಅತ್ತರು, ತಾಯಿ ಅಶ್ವಿನಿಯನ್ನು ಅಪ್ಪಿಕೊಂಡು ಅತ್ತ ಮಕ್ಕಳು, ವಿಧಿವಿಧಾನವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಲಾಗುತ್ತಿದೆ.

🌐 Kannada News :

Puneeth Rajkumar funeral : ನಟ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ಕರ್ನಾಟಕ ಸೇರಿದಂತೆ ದೇಶದ ನಾನಾ ಮೂಲೆಯ ಅಭಿಮಾನಿಗಳನ್ನು ಶೋಕದಲ್ಲಿ ಮುಳುಗಿಸಿದೆ, ಈ ನಡುವೆ ರಾಜ್ಯ ಮೂಲೆ ಮೂಲೆಯಿಂದ ಲಕ್ಷಾಂತರ ಅಭಿಮಾನಿಗಳು ಇನ್ನೂ ಸಹ ತಮ್ಮ ಅಭಿಮಾನಿ ನಟನನ್ನು ನೋಡಲು ಬರುತ್ತಲೇ ಇದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿವಿಧಾನ ನಡೆಯುತ್ತಿದೆ, ಪುನೀತ್ ಕುಟುಂಬ ವರ್ಗ ಪೂಜೆ ಸಲ್ಲಿಸುತ್ತಿದೆ, ಅಂತಿಮ ಪೂಜೆ ಸಲ್ಲಿಸಿ ಪುನೀತ್ ಮಕ್ಕಳು ಹಾಗೂ ಪತ್ನಿ ಬಿಕ್ಕಿ ಬಿಕ್ಕಿ ಅತ್ತರು, ತಾಯಿ ಅಶ್ವಿನಿಯನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು, ವಿಧಿವಿಧಾನವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಲಾಗುತ್ತಿದೆ.

ವಿನಯ್ ರಾಜ್ ಕುಮಾರ್ ವಿಧಿವಿಧಾನವನ್ನು ನೆರೆವೇರಿಸುತ್ತಿದ್ದಾರೆ, ಎಲ್ಲೆಡೆ ನೀರವ ಮೌನ… ಮೌನ… ಮೌನ ಕರ್ನಾಟಕದ ಮನೆ ಮನೆಯಲ್ಲೂ ಸೂತಕ ಆವರಿಸಿದೆ.  ಹೂವಿನ ಪಲ್ಲಕಿಯಲ್ಲಿ ಚಿರನಿದ್ರೆಯಲ್ಲಿರುವ ನಟ ಪುನೀತ್ ಒಮ್ಮೆ ಎದ್ದು ಬರಬಾರದೇ ಎಂಬ ಕೋಟ್ಯಂತರ ತಾಯಂದಿರ ಕೂಗು ಆ ದೇವರಿಗೆ ಕೇಳುತಿಲ್ಲವೇ…

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today