ಪುನೀತ್ ಮಗಳು ದೆಹಲಿಗೆ ಆಗಮನ, ಇಂದು ಸಂಜೆ ಬೆಂಗಳೂರಿಗೆ..

ಪುನೀತ್ ರಾಜ್ ಕುಮಾರ್ ಮಗಳು ಸದ್ಯ ಅಮೆರಿಕಾದಿಂದ ದೆಹಲಿಗೆ ಆಗಮಿಸಿದ್ದು, ಬೆಂಗಳೂರಿಗೆ ಸಂಜೆ 4.30 ಕ್ಕೆ ಆಗಮಿಸುವ ನಿರೀಕ್ಷೆಯಿದೆ

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ಕರುನಾಡಲ್ಲಿ ಅತೀವ ದುಃಖವನ್ನು ತಂದಿದೆ. ನಿನ್ನೆ ಬೆಳಗ್ಗೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ವೈದ್ಯರ ಪ್ರಯತ್ನ ಫಲಿಸದ ಕಾರಣ ಪುನೀತ್ ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕ ರಾಜ್ಯವು ಪ್ರಸ್ತುತ ತೀವ್ರ ಶೋಕದಲ್ಲಿದೆ. ಪುನೀತ್  ಮಗಳು ಬರುವಿಕೆಗಾಗಿ ಕಾಯಲಾಗುತ್ತಿದೆ, ಪುನೀತ್ ರಾಜ್ ಕುಮಾರ್ ಮಗಳು ದ್ರುತಿ ಸದ್ಯ ಅಮೆರಿಕಾದಿಂದ ದೆಹಲಿಗೆ ಆಗಮಿಸಿದ್ದು, ಬೆಂಗಳೂರಿಗೆ ಸಂಜೆ 4.30 ಕ್ಕೆ ಆಗಮಿಸುವ ನಿರೀಕ್ಷೆಯಿದೆ. ಅವರ ಪುತ್ರಿ ಅಮೆರಿಕದಿಂದ ಮರಳಿದ ನಂತರ ಅಂತ್ಯಕ್ರಿಯೆ ನಡೆಯಲಿದೆ. ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ವಿಧಿವಿಧಾನಗಳೊಂದಿಗೆ ಮಾಡಲಾಗುವುದು ಎಂದು ಕರ್ನಾಟಕ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ನಿನ್ನೆ ಸಂಜೆ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿತ್ತು, ನಂತರ ಕಂಠೀರವ ಕ್ರೀಡಾಂಗಣಕ್ಕೆ ತೆರಳಿ ನಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಅವರ ನಿಧನಕ್ಕೆ ರಾಜ್ಯಾದ್ಯಂತ ಗಣ್ಯರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗದ ಸುತ್ತ ಬಿಗಿ ಭದ್ರತಾ ಪಡೆಗಳನ್ನು ಸರ್ಕಾರ ನಿಯೋಜಿಸಿದೆ.

ಮಾಹಿತಿ ಪ್ರಕಾರ, 40 ಕೆಎಸ್‌ಆರ್‌ಪಿ ತುಕಡಿಗಳ ಜೊತೆಗೆ ಸುಮಾರು 6000 ಪೊಲೀಸರು, ಸಿಟಿ ಆರ್ಮ್ಡ್ ರಿಸರ್ವ್, ಆರ್‌ಎಎಫ್ ಅನ್ನು ನಿಯೋಜಿಸಲಾಗಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಪುನೀತ್ ಅಂತಿಮ ದರ್ಶನ ಪಡೆದು ನಮಸ್ಕರಿಸಿದ್ದಾರೆ.

 

Stay updated with us for all News in Kannada at Facebook | Twitter
Scroll Down To More News Today