ರಾಜ್ಯದಾದ್ಯಂತ ಸಾವಿರಾರು ಪುನೀತ್ ಪೋಸ್ಟರ್‌ಗಳ ಮೂಲಕ ಅಭಿಮಾನಿಗಳ ಪ್ರೀತಿ

Puneeth's fans show the late actor love by putting up his posters : ರಾಜ್ಯದ ಸಾವಿರಾರು ಅಭಿಮಾನಿಗಳು ಸಾವಿರಾರು ಬ್ಯಾನರ್ ಗಳ ಮೂಲಕ ಅಪ್ಪು ಮೇಲಿನ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ

Online News Today Team

Puneeth’s fans show the late actor love by putting up his posters : ಕನ್ನಡ ನಟ ಪುನೀತ್ ರಾಜ್‌ಕುಮಾರ್ ಶುಕ್ರವಾರ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ವಯಸ್ಸು 46. ಈ ಹಿಂದೆ ಶನಿವಾರ ನಡೆಯಬೇಕಿದ್ದ ನಟನ ಅಂತ್ಯಕ್ರಿಯೆ ಈಗ ಭಾನುವಾರ (ಇಂದು) ನಡೆಯುತ್ತಿದೆ. ಅಂತಿಮ ನಮನ ಸಲ್ಲಿಸಲು ಜನರಿಗೆ ಅವಕಾಶ ಕಲ್ಪಿಸಲಾಗಿತ್ತು.

ಈಗಷ್ಟೇ ರಾಷ್ಟ್ರಗೀತೆ ಜೊತೆಗೆ ಮೂರು ಸುತ್ತು ಕುಶಾಲು ತೋಪು ಹಾರಿಸಿ ನಟನಿಗೆ ಗೌರವ ಸಲ್ಲಿಸಲಾಯಿತು, ಪುನೀತ್ ರಾಜ್ ಕುಮಾರ್ ಮೇಲೆ ಹೊದಿಸಲಾಗಿದ್ದ ರಾಷ್ಟ್ರದ್ವಜವನ್ನು ಕುಟುಂಬಕ್ಕೆ ಮುಖ್ಯಮಂತ್ರಿಗಳು ನೀಡಿದರು.

ಪುನೀತ್ ರಾಜ್ ಕುಮಾರ್ ಇಲ್ಲದ ವಿಷಯದಲ್ಲಿ ಶಿವರಾಜ್ ಕುಮಾರ್ ತನ್ನೊಳಗೆ ತಾನೇ ಕುಗ್ಗಿಹೋಗಿದ್ದಾರೆ, ಇನ್ನು ಪತ್ನಿ ಅಶ್ವಿನಿ ರವರು ಮಕ್ಕಳ ಕೈಹಿಡಿದು ಪತಿಯನ್ನೇ ದಿಟ್ಟಿಸಿ ನೋಡುತ್ತಿರುವ ದೃಶ್ಯ ಯಾರಿಗೂ ಸಹಿಸಿಕೊಳ್ಳಲಾಗದ ದೃಶ್ಯ. ಒಟ್ಟಾರೆ ಕರ್ನಾಟಕದಲ್ಲಿ ಸೂತಕದ ಛಾಯೆ…

ಈ ನಡುವೆ ರಾಜ್ಯದ ಸಾವಿರಾರು ಅಭಿಮಾನಿಗಳು ಸಾವಿರಾರು ಬ್ಯಾನರ್ ಗಳ ಮೂಲಕ ಅಪ್ಪು ಮೇಲಿನ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

 

Follow Us on : Google News | Facebook | Twitter | YouTube