Welcome To Kannada News Today

ಪುಷ್ಪಾ ಚಿತ್ರದ ಗಾಸಿಫ್ ಗೆ ತೆರೆ, ರಶ್ಮಿಕಾ ಮಂದಣ್ಣ ಮಾತ್ರ ಹೀರೋಯಿನ್

rumours about the Pushpa movie, here is an official clarity

🌐 Kannada News :

ರಶ್ಮಿಕಾ ಮಂದಣ್ಣ ಎಲ್ಲಿ ಇದ್ದರಲ್ಲಿ ಖಂಡಿತಾ ಗಾಸಿಫ್ , ಟ್ರೋಲಿಗರಿಗಂತೂ ರಶ್ಮಿಕಾ ಹಾಟ್ ಕೇಕ್… ರಶ್ಮಿಕಾ ಕುಂತ್ರು ಟ್ರೊಲ್ ನಿಂತರೂ ಟ್ರೊಲ್… ಈಗ ಈ ಗಾಸಿಪ್ ಗಳು ಅವರ ಪಾತ್ರಗಳ ಮೇಲೂ ಸೃಷ್ಟಿಯಾಗಿದ್ದು, ಅದಕ್ಕೆ ಉತ್ತರ ಸಿಕ್ಕಿದೆ.

ಅಭಿಮಾನಿಗಳ ಬಹುನಿರೀಕ್ಷಿತ ಟಾಲಿವುಡ್ ಚಿತ್ರ “ಪುಷ್ಪಾ” ಚಿತ್ರಕ್ಕಾಗಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಮೂರನೇ ಬಾರಿಗೆ ಹೊಂದಾಗಿದ್ದಾರೆ. ಆ ಮೂಲಕ ಪ್ರೇಕ್ಷಕರಿಗೆ, ಸಿನಿರಸಿಕರಿಗೆ ಮನೋರಂಜನೆಯ ರಸದೌತಣ ಸಿಗೋದಂತೂ ಗ್ಯಾರಂಟಿ.

ಇನ್ನು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಚಿತ್ರಕ್ಕಾಗಿ ನಿರ್ಮಾಪಕರು ಮತ್ತೊಬ್ಬ ನಾಯಕಿಯನ್ನು ಕರೆತಂದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡಿತ್ತು. ಚಿತ್ರದಲ್ಲಿ ಎರಡನೇ ನಾಯಕಿ ಇದ್ದು ನಿವೇತಾ ಪೆತುರಾಜ್ ಹೆಸರು ಕೇಳಿ ಬಂದಿತ್ತು. ಆದರೆ, ಚಿತ್ರತಂಡ ಇದೀಗ ಅಧಿಕೃತ ಸ್ಪಷ್ಟತೆ ನೀಡಿದೆ.

ಚಿತ್ರತಂಡ ಅಧಿಕೃತವಾಗಿ ಹೇಳಿಕೆ ನೀಡುವ ಮೂಲಕ ಹರಿದಾಡುತ್ತಿದ್ದ ವದಂತಿ ಸುದ್ದಿಗೆ ತೆರೆ ಹೇಳೆದಿದೆ. ಚಿತ್ರದಲ್ಲಿ ಯಾವುದೇ ಎರಡನೇ ನಾಯಕಿ ಇಲ್ಲ ಮತ್ತು ರಶ್ಮಿಕಾ ಮಾತ್ರ ಮುಖ್ಯ ನಾಯಕಿ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೇ. ಅಲ್ಲದೆ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಇಬ್ಬರೂ ಗಂಡ-ಹೆಂಡತಿಯಾಗಿ ನಟಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶಕರು. ಲಾಕ್‌ಡೌನ್ ಮುಗಿದ ನಂತರ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತದೆ…..

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile