ಶಿವಣ್ಣ ಅಭಿಮಾನಿಗಳು ಫುಲ್ ಖುಷ್-ಶುರುವಾಯ್ತು ಟಗರು ಹವಾ !

Shivanna fans are Happy for Tagaru | itskannada Film

itskannada-ಶಿವಣ್ಣ ಅಭಿಮಾನಿಗಳು ಫುಲ್ ಖುಷ್ -ಶುರುವಾಯ್ತು ಟಗರು ಹವಾ ! ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮ ಚಿತ್ರ ಜೀವನದಲ್ಲಿ ಒಂದೇ ರೀತಿಯ ಆಯಾಮವನ್ನು ಕಾಪಾಡಿಕೊಂಡು ಬಂದಿರುವ ದೊಡ್ಡ ನಟ. ಕನ್ನಡ ಸಿನಿಮಾರಂಗದಲ್ಲಿ ಶೇಕಡ 90 ರಷ್ಟು ಅಭಿಮಾನಿಗಳನ್ನು ಹೊಂದಿರುವ ನಟ. ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಇಲ್ಲಿಯ ತನಕ ತಿರುಗಿ ನೋಡಿದ್ದೇ ಇಲ್ಲ. ಸದ್ಯ ಶಿವಣ್ಣ ಅಭಿನಯದ ಟಗರು ಚಿತ್ರಕ್ಕೆ ಬಾರಿ ಡಿಮ್ಯಾಂಡ್ ಕ್ರಿಯೆಟ್ ಮಾಡಿದೆ. ಎಲ್ಲೆಡೆ ಟಗರು ಹವಾ ಶುರುವಾಗಿದೆ.

ಈಗಾಗಲೇ ಟೀಸರ್ ಮತ್ತು ಮೇಕಿಂಗ್ ನಿಂದ ಬಾರಿ ಕುತೂಹಲ ಸೃಷ್ಠಿಸಿರುವ ಟಗರು ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದಿದ್ದಾರೆ. ಈ ಹಿಂದೆ ಹೊಸಪೇಟೆಯಲ್ಲಿ ಮೂರು ಹಾಡುಗಳನ್ನ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಯನ್ನ ಹೆಚ್ಚಿಸಿದ್ದ ಸಿನಿಮಾ ತಂಡ ಕೊನೆಯ ಹಂತ ತಲುಪಿದೆ. ಚಿತ್ರದ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ.

ಇದರ ಮದ್ಯೆ ಚಿತ್ರಕ್ಕೆ ಬಾಲಿವುಡ್ ಮತ್ತು ಟಾಲಿವುಡ್ ನಿಂದಲೂ ಬಾರಿ ಬೇಡಿಕೆ ಬಂದಿದೆಯಂತೆ. ಈ ಚಿತ್ರದ ಡಬ್ಬಿಂಗ್ ರೈಟ್ಸ್ ಗಾಗಿ ಹಲವು ನಿರ್ಮಾಪಕರು ಬೇಡಿಕೆ ಇಟ್ಟಿದ್ದಾರಂತೆ. ಶೂಟಿಂಗ್ ದಿನದಿಂದಲೂ ಕುತೂಹಲವನ್ನು ಹೆಚ್ಚು ಮಾಡುತ್ತಾ ಬಂದಿರುವ ತಂಡವು, ಚಿತ್ರ ತೆರೆಗೆ ಬರುವ ಮುಂಚೆಯೇ ಈ ಮಟ್ಟಕ್ಕೆ ಟಗರು ಹವಾ ಸೃಷ್ಟಿ ಮಾಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದೆ. ಅಲ್ಲದೆ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಈ ವಿಷಯ ಕೇಳಿ ಖುಷಿ ತಂದಿದೆ.

ಸೂಪರ್ ಹಿಟ್ ನಿರ್ದೇಶಕ  ದುನಿಯಾ ಸೂರಿ ಈ ಸಿನಿಮಾವನ್ನ ನಿರ್ದೇಶನ ಮಾಡಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಇನ್ನೂ ಹೆಚ್ಚಿದೆ. ಸಿನಿಮಾದ ಹಾಡುಗಳು ಈಗಾಗಲೇ ಮನಸೆಳೆದಿವೆ. ಚಿತ್ರವು ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. | itskannada Film

ಇದನ್ನು ಓದಿ- ರಿಮೇಕ್ ಸಿನಿಮಾಗಳಲ್ಲಿ ನಟಿಸೊಲ್ಲ 


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸಿನಿಮಾ ಸುದ್ದಿಗಾಗಿ ಸಿನಿ-ಹನಿ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸಿನಿಮಾ ಪುಟ –ಕನ್ನಡ ಸಿನಿಮಾ ಸುದ್ದಿಗಳು-ಇಲ್ಲವೇ ವಿಭಾಗ ಸ್ಯಾಂಡಲ್ ವುಡ್ ಸುದ್ದಿ ಕ್ಲಿಕ್ಕಿಸಿ itskannada :today news in Kannada: for latest news visit-Kannada news– more in Kannada Film click Kannada Film News or look at Sandalwood News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.