ಅಪ್ಪು ಇಲ್ಲ ಅಂತ ಹೇಳೋಕೆ ಕಷ್ಟ ಆಗುತ್ತೆ…. ಅಣ್ಣ ಶಿವರಾಜ್ ಕುಮಾರ್

ನನ್ನ ಮಗುವಿನ ರೀತಿ ಪುನೀತ್ ರಾಜ್ ಕುಮಾರ್, ನನ್ನ ಮಗುವನ್ನೇ ಕಳೆದುಕೊಂಡಂತೆ ಆಗಿದೆ ಎಂದ ಶಿವರಾಜ್ ಕುಮಾರ್

ನಟ ಪುನೀತ್ ರಾಜ್ ಕುಮಾರ್ ರವರ ಎಲ್ಲಾ ಅಂತಿಮ ವಿಧಿವಿಧಾನಗಳನ್ನು ಮಾಡಿದ ನಂತರ, ಪುನೀತ್ ಅಣ್ಣ ಡಾ ಶಿವರಾಜ್ ಕುಮಾರ್ ಮಾತನಾಡಿದರು, ಶಾಂತಿಯುತವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.

ಮಾತು ಪ್ರಾರಂಭಿಸಿದ ಬಳಿಕ ಸ್ವಲ್ಪ ತಡವರಿಸಿದ ಶಿವರಾಜ್ ಕುಮಾರ್ ರವರು… ಅಪ್ಪು ಇಲ್ಲ ಎನ್ನಲು ಕಷ್ಟ ಆಗುತ್ತಿದೆ, ನಾನು ಅವನಿಗಿಂತ ಹದಿಮೂರು ವರ್ಷ ದೊಡ್ಡವನು, ನನಗೆ ಅವನು ಮಗುವಿದ್ದಂತೆ, ನನ್ನ ಮಗುವನ್ನೇ ಕಳೆದುಕೊಂಡಂತೆ ಬಾಸವಾಗುತ್ತಿದೆ, ಈ ನೋವು ನಮ್ಮನ್ನು ಕೊನೆಯ ತನಕ ಕಾಡುತ್ತದೆ ಎಂದರು.

ಅಪ್ಪು ಇಲ್ಲ ಅಂತ ಹೇಳೋಕೆ ಕಷ್ಟ ಆಗುತ್ತೆ.... ಶಿವರಾಜ್ ಕುಮಾರ್
ಅಪ್ಪು ಇಲ್ಲ ಅಂತ ಹೇಳೋಕೆ ಕಷ್ಟ ಆಗುತ್ತೆ…. ಶಿವರಾಜ್ ಕುಮಾರ್

ಹಾಗೆ ಅಭಿಮಾನಿಗಳ ಆತ್ಮಹತ್ಯೆ ಬಗ್ಗೆ ಮಾತನಾಡಿದ ಅವರು, ಯಾರು ಆ ಕೆಲಸ ಮಾಡಬೇಡಿ, ನಮಗೂ ಅವರ ಮೇಲೆ ಪ್ರೀತಿ ಇಲ್ಲವೇ ? ದಯವಿಟ್ಟು ಕೆಟ್ಟ ನಿರ್ದಾರ ಮಾಡಬೇಡಿ ಎಂದರು.

ಹಾಗೆ ಕುಟುಂಬಸ್ಥರು ಮಂಗಳವಾರ ಹಾಲು-ತುಪ್ಪ ನೆರೆವೇರಿಸುವ ತನಕ ಸಾರ್ವಜನಿಕ ಪ್ರವೇಶ ಇರುವುದಿಲ್ಲ ಎಂಬ ಬಗ್ಗೆ ತಿಳಿಸಿದರು. ಆ ದೇವರು ಅವಸರವಾಗಿ ಕರೆದುಕೊಂಡು ಬಿಟ್ಟ, ನನಗೆ ತುಂಬಾನೇ ನೋವಾಗುತ್ತಿದೆ, ನನ್ನ ಮಗುವನ್ನೇ ಕಳೆದುಕೊಂಡಂತೆ ಆಗಿದೆ….

ಈ ಸಂದರ್ಭದಲ್ಲಿ ಎಲ್ಲರೂ ಸಹಕಾರ ಕೊಟ್ಟಿದ್ದಾರೆ, ಜನರು, ಸರ್ಕಾರ, ಅಭಿಮಾನಿಗಳು, ಪೊಲೀಸ್, ಮೀಡಿಯಾ … ಎಲ್ಲರಿಗೂ ಧನ್ಯವಾದ ಎಂದರು….

ಹಾಲು-ತುಪ್ಪ ಆದನಂತರ ಆದಷ್ಟು ಬೇಗ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ, ಅಪ್ಪುವನ್ನು ನೀವು ನೋಡದೆ ಯಾರು ನೋಡಬೇಕು… ಆದರೆ ನಮ್ಮ ವಿಧಿಗಳು ನಡೆದ ನಂತರ ಆದಷ್ಟು ಬೇಗ ಅನುವು ಮಾಡಲಾಗುತ್ತದೆ ಎಂದರು.