Video, ನನ್ನ ಬಿಟ್ಟು ಬಿಡಿ ಸ್ವಾಮಿ: ವಿಷ್ಣು ದಾದಾ ಕ್ಷಮೆ ಯಾಚಿಸಿದ ತೆಲುಗು ನಟ ವಿಜಯ್ ರಂಗರಾಜು

ಸಾಹಸ ಸಿಂಹ ವಿಷ್ಣು ವರ್ಧನ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ್ದಕ್ಕಾಗಿ ತೆಲುಗು ನಟ ವಿಜಯ್ ರಂಗರಾಜು ಅಂತಿಮವಾಗಿ ವಿಷ್ಣು ದಾದಾ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.

(Kannada News) : Telugu actor Vijay Rangaraju apologises : ಸಾಹಸ ಸಿಂಹ ವಿಷ್ಣು ವರ್ಧನ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ್ದಕ್ಕಾಗಿ ತೆಲುಗು ನಟ ವಿಜಯ್ ರಂಗರಾಜು ಅಂತಿಮವಾಗಿ ವಿಷ್ಣು ದಾದಾ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ತೆಲುಗು ನಟ ವಿಜಯ್ ರಂಗರಾಜು ನಟ ವಿಷ್ಣು ವರ್ಧನ್ ಕುರಿತಂತೆ ಬಾಯಿಗೆ ಬಂದಂತೆ ಮಾತನಾಡಿದ್ದರು, ಅಭಿಮಾನಿಗಳು ತಿರುಗಿ ಬಿದ್ದ ನಂತರ ಈಗ ನಟ ವಿಜಯ್ ರಂಗರಾಜು ವಿಷ್ಣುವಿನ ಕುಟುಂಬಕ್ಕೆ ಕ್ಷಮೆಯಾಚಿಸಿದ್ದಾರೆ.

ತೆಲುಗು ನಟ ವಿಜಯ್ ರಂಗರಾಜು
ತೆಲುಗು ನಟ ವಿಜಯ್ ರಂಗರಾಜು

ತಮ್ಮ ಕ್ಷಮಾಪಣೆಯ ವಿಡಿಯೋ ಮಾಡಿದ ನಟ ವಿಜಯ್ ರಂಗರಾಜು ಅವರು : ‘ನಾನು ವಿಷ್ಣು ದಾದಾ ಬಗ್ಗೆ ಮಾತನಾಡಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ತಪ್ಪು ಮಾಡಿದ ತಪ್ಪಿತಸ್ಥ. ಮಾಡಿದ ತಪ್ಪಿಗೆ ನಾನು ಈಗ ಕರೋನಾದಿಂದ ಬಳಲುತ್ತಿದ್ದೇನೆ.

ನಾನು ವಿಷ್ಣುವಿನ ಅಭಿಮಾನಿಗಳು, ವಿಷ್ಣುವಿನ ಕುಟುಂಬ, ಅತ್ಯುತ್ತಮ ನಟರಾದ ಪುನೀತ್ ರಾಜ್‌ಕುಮಾರ್, ಸುದೀಪ್ ಮತ್ತು ಉಪೇಂದ್ರ ಅವರನ್ನು ಬೇಡಿಕೊಳ್ಳುತ್ತೇನೆ.

ನಾನು ಮಾಡಿದ್ದು ದೊಡ್ಡ ತಪ್ಪು. ನನ್ನನ್ನು ಕ್ಷಮಿಸಿ. ನಾನು ವಿಷ್ಣು ದಾದಾ ಬಗ್ಗೆ ಮಾತನಾಡುವುದು ತಪ್ಪು. ಈ ತಪ್ಪಿಗೆ ನಾನು ಈಗ ಶಿಕ್ಷೆ ಅನುಭವಿಸುತ್ತಿದ್ದೇನೆ. ನಾನು ಕರೋನಾದಿಂದ ಬಳಲುತ್ತಿದ್ದೇನೆ. ನಾನು ಪಾಪ ಮಾಡಿದ್ದೇನೆ. ‘ ಎಂದು ಅಳುತ್ತಾ ಕ್ಷಮೆಯಾಚಿಸಿದ್ದಾರೆ.

ತೆಲುಗು ನಟ ವಿಜಯ್ ರಂಗರಾಜು ಕ್ಷಮೆಯಾಚಿಸಿದ ವಿಡಿಯೋ ನೋಡಿ… 

Web Title : Telugu actor Vijay Rangaraju apologizes to Vishnuvardhan Fans and Family

Scroll Down To More News Today