ತೆಲುಗು ಚಿತ್ರ ಸೈರಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್

Story Highlights

Telugu Film Sye Raa Release Date was Fixed

ತೆಲುಗು ಚಿತ್ರ ಸೈರಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ಕಿಚ್ಚ ಸುದೀಪ್ ಸೇರಿ ಚಿತ್ರರಂಗದ ಟಾಪ್ ನಟರ ದಂಡೇ ನಟಿಸಿರುವ, ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷಿತ ಚಿತ್ರ “ಸೈರಾ” ರಿಲೀಸ್ ಡೇಟ್ ಫಿಕ್ಸ್ ಆಗಿದೆ, ಈ ಹಿಂದೆ ಚಿತ್ರ ತಂಡವು ಚಿತ್ರವನ್ನು ಆಗಸ್ಟ್ ೧೫ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಲು ನಿರ್ಧರಿಸಿತ್ತು ಆದರೆ ಚಿತ್ರೀಕರಣ ತಡವಾದ ಕಾರಣ ಬಿಡುಗಡೆ ದಿನವನ್ನು ಮುಂದೂಡಿತ್ತು.

ಈಗ, ಮೂಲಗಳ ಪ್ರಕಾರ, ಚಿತ್ರ ತಂಡವು ಅಕ್ಟೋಬರ್ 2 ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ, ಗಾಂಧಿ ಜಯಂತಿ ದಿನ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಚಿತ್ರವು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಸಿದ ಚಿತ್ರವಾದ್ದರಿಂದ, ಅಕ್ಟೋಬರ್ ೨ ರಂದು ಬಿಡುಗಡೆ ಮಾಡುವುದೇ ಸರಿಯೆಂದು ನಿರ್ಧರಿಸಿದ್ದಾರೆ.

ಇನ್ನು ಚಿತ್ರದಲ್ಲಿ ನಯಂತರಾ, ಬಿಗ್ ಬಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್ ಸೇರಿದಂತೆ ಇತರ ಪ್ರಮುಖ ನಟರು ಅಭಿನಯಿಸಿದ್ದಾರೆ, ಸೈರಾ ಚಿತ್ರದ ಸೆಟ್ ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಿಂದ ಚಿತ್ರೀಕರಣವು ಸ್ವಲ್ಪ ದಿನಗಳವರೆಗೂ ಮುಂದೂಡಲಾಗಿತ್ತು. ಇದೀಗ ಸೈರಾ ವೇಗವಾಗಿ ಚಿತ್ರೀಕರಣಗೊಳ್ಳುತ್ತಿದ್ದು ಅತಿ ಬೇಗ ಸಿನಿ ಪ್ರಿಯರನ್ನು ರಂಜಿಸಲು ತೆರೆ ಮೇಲೆ ಬರಲಿದೆ.

ಕೇವಲ ತೆಲುಗು ಭಾಷಿಗರು ಮಾತ್ರವಲ್ಲದೆ, ಕನ್ನಡ, ಹಿಂದಿ ತೆಮಿಳಿಗರು ಸಹ ಚಿತ್ರದ ಬಗ್ಗೆ ಬಹು ನಿರೀಕ್ಷೆ ಇಟ್ಟುಕೊಂಡಿದ್ದು, ಚಿರಂಜೀವಿ ಅಭಿಮಾನಿಗಳು ಚಿತ್ರ ಬಿಡುಗಡೆ ದಿನಕ್ಕಾಗಿ ಕಾದು ಕುಳಿತಿದ್ದಾರೆ..////

Web Title : Telugu Film Sye Raa Release Date was Fixed
(Kannada News Online @ kannadanews.today)

Related Stories