ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಹೈದರಾಬಾದ್ ಆಸ್ಪತ್ರೆಗೆ ದಾಖಲು.. !

ವೈದ್ಯರು ಬಾಲಕೃಷ್ಣ ಅವರ ಯೋಗಕ್ಷೇಮವನ್ನು ದೃಢಪಡಿಸಿದ್ದಾರೆ, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ ಮತ್ತು ಶೀಘ್ರವೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ತೆಲುಗು ಹಿರಿಯ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ (admitted to a hospital) . ಕಳೆದ ಆರು ತಿಂಗಳಿನಿಂದ ನಟನನ್ನು ಕಾಡುತ್ತಿದ್ದ ಎಡ ಭುಜದ ನೋವಿನಿಂದ ಅವರು ಆಸ್ಪತ್ರೆ ಸೇರಿದ್ದಾರೆ. ಬಾಲಕೃಷ್ಣ ಅವರಿಗೆ ಬಲಗೈ ಎತ್ತಲು ಸಾಧ್ಯವಾಗುತ್ತಿಲ್ಲ, ತೀವ್ರ ನೋವು ಕಾಣಿಸಿಕೊಂಡಿದೆ ಎಂದು ಎಂದು ಆಸ್ಪತ್ರೆಗಳ ವೈದ್ಯಕೀಯ ಪ್ರತಿನಿಧಿಗಳ ಹೇಳಿಕೆ ತಿಳಿಸಿದೆ.

“ಎಂಆರ್‌ಐ ಜೊತೆಗಿನ ಮೌಲ್ಯಮಾಪನದ ನಂತರ, ಬಂಜಾರಾ ಹಿಲ್ಸ್‌ನ ಕೇರ್ ಆಸ್ಪತ್ರೆಗಳಲ್ಲಿ ನಮ್ಮ ಮೂಳೆ ಶಸ್ತ್ರಚಿಕಿತ್ಸಕರ ತಂಡವು ಬಾಲಕೃಷ್ಣ ಅವರಿಗೆ ಚಿಕಿತ್ಸೆ ನೀಡಲು ನಿರ್ಧರಿಸಿದೆವು. ನಮ್ಮ ಭುಜದ ಶಸ್ತ್ರಚಿಕಿತ್ಸಕ ಡಾ. ರಘುವೀರ್ ರೆಡ್ಡಿ ಮತ್ತು ಡಾ. ಬಿ.ಎನ್. ಪ್ರಸಾದ್ ಅವರು ಭುಜದ ಸ್ನಾಯುವಿನ ಸ್ನಾಯುರಜ್ಜುಗಳನ್ನು ಯಶಸ್ವಿಯಾಗಿ ಸರಿಪಡಿಸಲು 4 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದರು, ”ಎಂದು ಆಸ್ಪತ್ರೆಯ ಪತ್ರಿಕಾ ಹೇಳಿಕೆ ತಿಳಿಸಿದೆ.

ವೈದ್ಯರು ಬಾಲಕೃಷ್ಣ ಅವರ ಯೋಗಕ್ಷೇಮವನ್ನು ದೃಢಪಡಿಸಿದ್ದಾರೆ, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ ಮತ್ತು ಶೀಘ್ರವೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ನಂದಮೂರಿ ಬಾಲಕೃಷ್ಣ ತೆಲುಗು ಚಿತ್ರರಂಗದ ಲೆಜೆಂಡ್. ಅವರು ತಮ್ಮ 40 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ

Stay updated with us for all News in Kannada at Facebook | Twitter
Scroll Down To More News Today