Welcome To Kannada News Today

ರಾಬರ್ಟ್ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು ಬಾರೀ ಮೊತ್ತಕ್ಕೆ ಮಾರಾಟ

The digital and satellite rights of Roberrt Cinema sold for a large sum

🌐 Kannada News :

ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್’ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು

‘ರಾಬರ್ಟ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರಕ್ಕೆ ಇನ್ನೊಂದು ಸುದ್ದಿ ಹೊರ ಬಿದ್ದಿದೆ, ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು ಬಾರೀ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಕೇವಲ ಫಸ್ಟ್ ಲುಕ್‌, ಟೈಟಲ್‌ನಿಂದಲೇ ಸಾಕಷ್ಟು ಹೈಪ್ ಸೃಷ್ಟಿಸಿದ್ದ ನಿರೀಕ್ಷೆಯ ಚಿತ್ರವಿದು.

ಈಗ ಈ ಸಿನಿಮಾ ಬಗ್ಗೆ ಮತ್ತೊಂದು ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ರಾಬರ್ಟ್ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು ಬಾರೀ ಮೊತ್ತಕ್ಕೆ ಮಾರಾಟವಾಗಿದೆ. ಈ ಹಿನ್ನೆಲೆಯಲ್ಲಿ ರಾಬರ್ಟ್ ಭರ್ಜರಿ ಬೇಟೆ ಆರಂಭಿಸಿದೆ.

ಈ ಹಿಂದೆ ಇದೆ ರೀತಿ ಕುತೂಹಲ ಉಂಟುಮಾಡಿದ್ದ ರಾಬರ್ಟ್ ಸಿನಿಮಾದ ಹಾಡುಗಳ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಕಂಪೆನಿ ಖರೀದಿ ಮಾಡಿದೆ. ಆದರೆ ಇದರ ಮೊತ್ತ ಎಷ್ಟು ಎಂಬುದುವನ್ನು ಚಿತ್ರತಂಡವಾಗಲೀ, ಆಡಿಯೋ ಕಂಪೆನಿಯರಾಗಲೀ ಬಹಿರಂಗಪಡಿಸಿರಲಿಲ್ಲ. ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಿದ್ದು, ಸಿನಿರಸಿಕರ ನಿರೀಕ್ಷೆ ಹೆಚ್ಚಿಸಿದೆ.

ರಾಬರ್ಟ್ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು ಬಾರೀ ಮೊತ್ತಕ್ಕೆ ಮಾರಾಟ
ರಾಬರ್ಟ್ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು ಬಾರೀ ಮೊತ್ತಕ್ಕೆ ಮಾರಾಟ

ಗಾಂಧಿನಗರದಲ್ಲಿ ಹವಾ, ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ

ಗಾಂಧಿನಗರದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿರೋ ‘ರಾಬರ್ಟ್’​ ಚಿತ್ರೀಕರಣ ಆರಂಭವಾಗುವುದಕ್ಕೂ ಮೊದಲಿನಿಂದಲೂ ಭಾರೀ ಸದ್ದು ಮಾಡಿದ್ದ ದರ್ಶನ್ ಅಭಿನಯದ ಬಾರಿ ನಿರೀಕ್ಷೆಯ ಸಿನಿಮಾ. ದರ್ಶನ್ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿರುವ ‘ರಾಬರ್ಟ್’ ಸಿನಿಮಾ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Web Title : The digital and satellite rights of Roberrt Cinema sold for a large sum

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile