ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ವ್ಯಕ್ತಿ ಬಂಧನ

ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಡೆಬಿಟ್ ಕಾರ್ಡ್ ನಂಬರ್ ಮತ್ತು ಪಾಸ್ ವರ್ಡ್ ಪಡೆದು ಕ್ಷಣಮಾತ್ರದಲ್ಲಿ ಅವರ ಹಣವನ್ನು ಲಪಟಾಯಿಸುತ್ತಿದ್ದ
ಖತಾರ್ ನಾಕ್ ವ್ಯಕ್ತಿಯನ್ನ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ( Kannada News ) : ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಉಂಡೆನಾಮ ಹಾಕುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಹಣ ಡ್ರಾ ಮಾಡಲು ಬರುವ ಜನರನ್ನು ಟಾರ್ಗೆಟ್ ಮಾಡಿಕೊಂಡು ಸಹಾಯ ಮಾಡುವಂತೆ ನಟಿಸಿಅವರಿಂದ ಡೆಬಿಟ್ ಕಾರ್ಡ್ ನ ನಂಬರ್ ಹಾಗೂ ಪಿನ್ ‌ಗಳನ್ನು ಪಡೆದು ವಂಚಿಸಿ ಸ್ಥಳದಿಂದ ಎಸ್ಕೇಪ್ ಆಗುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಈ ರೀತಿಯಾಗಿ ಜನರಿಗೆ ವಂಚಿಸುತ್ತಿದ್ದ, ಬಂಧಿತ ಆರೋಪಿಯನ್ನು ಭದ್ರಾವತಿ ಹುಡ್ಕೋ ಕಾಲೋನಿ ನಿವಾಸಿ ಎನ್. ಸಾಗರ ದಡಿಯಾ ದಿಲೀಪ್ ಎನ್ನಲಾಗಿದೆ.

ಭದ್ರಾವತಿ ಹೊಸೂರು ಸಿದ್ದಾಪುರ ಗ್ರಾಮಕ್ಕೆ ಸೇರಿದ ವ್ಯಕ್ತಿಯೊಬ್ಬರು ಶಿವಮೊಗ್ಗ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಸ್ವಲ್ಪ ಅಡಚಣೆ ಉಂಟಾಗಿದೆ. ಆ ವೇಳೆ ಈ ಅಪರಿಚಿತ ವ್ಯಕ್ತಿಯಿಂದ ಸಹಾಯ ಕೋರಿದ್ದೇ ತಡ, ಅದನ್ನೇ ದುರುಪಯೋಗಪಡಿಸಿಕೊಂಡ ಈ ಖತಾರ್ ನಾಕ್ ವ್ಯಕ್ತಿ, ಆರೋಪಿ ಸಾಗರ್, ಆ ವ್ಯಕ್ತಿಯಿಂದ ಡೆಬಿಟ್ ಕಾರ್ಡ್ ನಂಬರ್ ಹಾಗೂ ಪಿನ್ ಪಡೆದು ನಂತರ ಅವರ ಅಕೌಂಟ್ ನಿಂದ ರೂ 37,887 ರೂ. ಹಣವನ್ನು ಡ್ರಾ ಮಾಡಿ, ಪಂಗನಾಮ ಹಾಕಿದ್ದಾನೆ, ಈ ಕುರಿತು ಶಿವಮೊಗ್ಗ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಕುರಿತು ಆರೋಪಿತನ ಪತ್ತೆಗಾಗಿ ಬಗ್ಗೆ ಶ್ರೀ ಗುರುರಾಜ್, ಕೆಟಿ ಪಿ.ಐ., ಸಿಇಎನ್ ಕ್ರೈಂ ಪೊಲೀಸ್ ಠಾಣೆ, ಶಿವಮೊಗ್ಗ ರವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಲು ಯಶಸ್ವಿಯಾಗಿದ್ದಾರೆ.

ಆರೋಪಿ ಸಾಗರನನ್ನು ಬಂಧಿಸಿ ಆತನಿಂದ 45 ಸಾವಿರ ರೂ.ಗಳನ್ನು ವಶಕ್ಕೆ ಪಡೆದು, ಸದ್ಯ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Web Title : Man arrested in ATM fraud case of Shivamogga

>> Get Breaking News & Live News Updates in Kannada, Like Us on Facebook, Twitter. Read More Latest Kannada News Live Alerts online at kannadanews.today News Portal.

This website uses cookies to improve your experience. We'll assume you're ok with this, but you can opt-out if you wish. Accept Read More