Kannada News - Kannadigas Adda

Welcome To Kannada News - Kannadigas Adda

ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ ರೈಸರ್ಸ್​ ಗೆಲುವು

Kannadanews.today - ಕನ್ನಡಿಗಾಸ್ ಅಡ್ಡ

Sports : (itskannada) ಮುಂಬೈ: ಐಪಿಎಲ್ ಟಿ20​ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಸನ್​ ರೈಸರ್ಸ್​ ಹೈದರಾಬಾದ್​ 31 ರನ್​​ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಹೈದರಾಬಾದ್​ ತಂಡ ಮುಂಬೈ ಬೌಲಿಂಗ್​ ದಾಳಿಗೆ ತತ್ತರಿಸಿ 18.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 118 ರನ್​ ಗಳಿಸಿತು.
ಗೆಲುವಿಗೆ ಹೈದರಾಬಾದ್ ನೀಡಿದ 119 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಮುಂಬಯಿ ಇಂಡಿಯನ್ಸ್ ತಂಡ, 21 ರನ್ ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿತು.
ಮುಂಬೈ 18.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 87 ರನ್​ ಗಳಿಸುವ ಮೂಲಕ ಹೈದರಾಬಾದ್​ ನೀಡಿದ್ದ ಸುಲಭ ಗುರಿಯನ್ನು ತಲುಪಲಾಗದೇ ಸೋಲಿಗೆ ಶರಣಾಯಿತು.
ಹೈದರಾಬಾದ್ ಪರ ಕೇನ್​ ವಿಲಿಯಮ್ಸನ್​(29) ಹಾಗೂ ಯೂಸೂಫ್​ ಪಠಾಣ್​(29) ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಗಮನಾರ್ಹ ಪ್ರದರ್ಶನ ನೀಡಲಿಲ್ಲ.
ಮುಂಬೈ ಪರ ಮಿಚೆಲ್​ ಮೆಕ್ಲೆಹೆಂಗನ್​, ಹಾರ್ದಿಕ್​ ಪಾಂಡ್ಯ ಹಾಗೂ ಮಯಾಂಕ್​ ಮಾರ್ಕಂಡೆ ತಲಾ ಎರಡು ವಿಕೆಟ್ ಪಡೆದರೆ, ಜಸ್ಪ್ರಿತ್​ ಬೂಮ್ರಾ ಹಾಗೂ ಮುಸ್ತಫಿಝುರ್ ರಹಮಾನ್ ತಲಾ ಒಂದೊಂದು ವಿಕೆಟ್​ ಪಡೆದು ಮಿಂಚಿದರು. || ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ . .Kannada Sports News

ವಿಜಯೇಂದ್ರಗೆ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆ

STAR KANNADA : ನಿರೀಕ್ಷಿಸಿ – ನೂತನ ಅಂತರ್ಜಾಲ ಸುದ್ದಿವಾಹಿನಿ STAR KANNADA – KANNADA NEWS PORTAL
Star Kannada ದ ಸಾಮಾಜಿಕ ಜಾಲತಾಣಗಳು – FaceBook – Twitter – Google + – Youtube – Pinterest – Instagram.

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.