ಎಂ ಎಸ್ ಧೋನಿ ದಾಖಲೆ ಮುರಿದ ವೃದ್ಧಿಮಾನ್ ಸಹಾ

(itskannada): ಎಂ ಎಸ್ ಧೋನಿ ದಾಖಲೆ ಮುರಿದ ವೃದ್ಧಿಮಾನ್ ಸಹಾ : ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಂ ಇಂಡಿಯಾ ಸೋಲೊಪ್ಪಿಕೊಂಡಿದೆ. ಆದರೆ, ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಈ ಪಂದ್ಯದಲ್ಲಿ ಎಂಎಸ್ ಧೋನಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಎಂ ಎಸ್ ಧೋನಿ ದಾಖಲೆ ಮುರಿದ ವೃದ್ಧಿಮಾನ್ ಸಹಾ

ಟೆಸ್ಟ್ ಪಂದ್ಯವೊಂದರಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದ ಧೋನಿಯನ್ನು ಸಹಾ ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಪಂದ್ಯದಲ್ಲಿ ಸಹಾ ಅವರಿಗೆ 10 ವಿಕೆಟ್ ಲಭಿಸಿದೆ. ಪಂದ್ಯವೊಂದರಲ್ಲಿ 9 ವಿಕೆಟ್ ಗಳಿಸಿ ಧೋನಿ ದಾಖಲೆ ಬರೆದಿದ್ದರು. ಮೆಲ್ಬೋರ್ನ್ ನಲ್ಲಿ ಡಿಸೆಂಬರ್ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದ್ದರು.

ಧೋನಿ ಅವರು ಕ್ಯಾಚ್, ಸ್ಟಂಪಿಂಗ್ ಮೂಲಕ ವಿಕೆಟ್ ಗಳಿಸಿದ್ದರೆ, ಸಹಾ ಅವರು ಎಲ್ಲಾ ವಿಕೆಟ್ ಗಳನ್ನು ಕ್ಯಾಚ್ ಮೂಲಕ ಪಡೆದಿದ್ದಾರೆ. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಚೊಚ್ಚಲ ಪಂದ್ಯವಾಡಿದ ಸಹಾ, ಒಟ್ಟಾರೆಯಾಗಿ ಭಾರತ ಪರ 32 ಟೆಸ್ಟ್ ಪಂದ್ಯಗಳಲ್ಲಿ 85 ವಿಕೆಟ್ ಗಳಿಸಿದ್ದು, 75 ಕ್ಯಾಚ್ ಹಾಗೂ 10 ಸ್ಟಂಪಿಂಗ್ ಸಾಧನೆ ಮಾಡಿದ್ದಾರೆ. 1980ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ಇಂಗ್ಲೆಂಡಿನ ಬಾಬ್ ಟೇಲರ್, 2000ರಲ್ಲಿ ಹ್ಯಾಮಿಲ್ಟನ್ ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಕೂಡಾ ಈ ಹಿಂದೆ ಇದೇ ರೀತಿ ಸಾಧನೆಯನ್ನು ಮಾಡಿದ್ದಾರೆ.

ಎಂ ಎಸ್ ಧೋನಿ ದಾಖಲೆ ಮುರಿದ ವೃದ್ಧಿಮಾನ್ ಸಹಾ - Kannada News

ಆದರೆ, ಪಂದ್ಯವೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ಜಂಟಿ ದಾಖಲೆ ಜಾಕ್ ರಸೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿದೆ. 1995ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡಿನ ವಿಕೆಟ್ ಕೀಪರ್ ಜಾಕ್ ರಸೆಲ್ 11 ಕ್ಯಾಚ್ ಗಳಿಸಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಅವರು 2013ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ಪಾಕಿಸ್ತಾನ ವಿರುದ್ಧ ಇದೇ ಸಾಧನೆ ಮಾಡಿದ್ದರು. | itskannada Sports


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಕ್ರೀಡಾ ಸುದ್ದಿಗಳಿಗಾಗಿ ಕ್ರೀಡಾ-ಲೋಕ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೀಡಾ ಪುಟ –ಕನ್ನಡ ಕ್ರೀಡಾ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೀಡಾ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Sports click Karnataka Sports News or look at Kannada Sports News

Follow us On

FaceBook Google News