KNT [ Kannada News Today ] : Sports
ಫ್ಯಾಂಟಸಿ ಕ್ರಿಕಟ್ ಪ್ಲಾಟ್‍ಫಾರಂ ಫ್ಯಾನ್‍ಫೈಟ್ ನಡೆಸುತ್ತಿರುವ #ಪ್ಲೆ ಅಂಡ್ ವಿನ್ ಬಿಗ್ ಎಂಬ ಅಭಿಯಾನದಲ್ಲಿ ಬೆಂಗಳೂರಿನ ಶೇಕ್ ಸಬ್ರುದ್ದೀನ್ ಅವರು ಭಾಗವಹಿಸಿ ಭಾರತ- ನ್ಯೂಜಿಲೆಂಡ್ ಪಂದ್ಯದ ವೇಳೆ ಕೇವಲ 39 ರೂಪಾಯಿನೊಂದಿಗೆ ಆರಂಭಿಸಿ ಒಂದು ಲಕ್ಷ ರೂಪಾಯಿ ಮತ್ತು ಕೇವಲ ಐದು ರೂಪಾಯಿ ಬಳಸಿ ಗ್ಯಾಡ್ಜಟ್ ಪೂಲ್ ಸ್ಪರ್ಧೆಯಲ್ಲಿ ಕನಸಿನ ಮೊಬೈಲ್ ಸೆಟ್ ವನ್ ಪ್ಲಸ್ 7ಟಿ ಪ್ರೊ ಮೊಬೈಲ್ ಸೆಟ್ ಗೆದ್ದಿದ್ದಾರೆ.
ಈ ಬೆಳವಣಿಗೆ ಬಗ್ಗೆ ಮಾತನಾಡಿದ ಫ್ಯಾನ್‍ಫೈಟ್ ಸಿಇಓ ಅಖಿಲ್ ಸುಹಾಗ್, “ಫ್ಯಾನ್‍ಫೈಟ್ ಬೆಳವಣಿಗೆ ಬಗ್ಗೆ ನಮಗೆ ಅಪಾರ ಸಂತಸವಿದೆ. ಇದು ಆಟಗಾರರು ಗೆಲುವನ್ನು ಇಡೀ ಆಟಗಾರರ ಸಮುದಾಯದ ಜತೆ ಸಂಭ್ರಮಿಸುವ ಪ್ಲಾಟ್‍ಫಾರಂ ಆಗಿದ್ದು, ಇದರ ಜತೆಗೆ ತಮ್ಮ ಕೌಶಲವನ್ನು ಕೂಡಾ ಪ್ರದರ್ಶಿಸಲು ಅವಕಾಶವಾಗುತ್ತದೆ. ಜತೆಗೆ ದೊಡ್ಡ ಮೊತ್ತದ ಬಹುಮಾನವನ್ನು ಕೂಡಾ ಗೆಲ್ಲಲು ಅವಕಾಶವಿದೆ” ಎಂದು ಹೇಳಿದರು.
ಬಹುಮಾನ ಗೆದ್ದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಟಿ20ಐ ಸ್ಪರ್ಧೆಯ ವಿಜೇತ ಶೇಖ್ ಸಬ್ರುದ್ದೀನ್, “ಫ್ಯಾನ್‍ಫೈಟ್‍ನಲ್ಲಿ ಬಹುಮಾನ ಗೆದ್ದಿರುವ ಬಗ್ಗೆ ಅತೀವ ಸಂತಸವಿದೆ. ನಾನು ವೃತ್ತಿಯಲ್ಲಿ ಬಾಣಸಿಗ. ಈ ಫ್ಯಾನ್‍ಫೈಟ್‍ನಲ್ಲಿ ಹೆಚ್ಚಿನ ಬಹುಮಾನಗಳನ್ನು ಗೆಲ್ಲಲು ಅವಕಾಶವಿದೆ. ಆಟಗಾರರ ಸಾಧನೆಯ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ನನ್ನ ಆಡುವ 11 ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ. ಫ್ಯಾನ್‍ಫೈಟ್‍ನಲ್ಲಿ ಆಡುವುದು ಸುಲಭ ಹಾಗೂ ಇದು ದೊಡ್ಡ ಸಂಖ್ಯೆಯ ಬಳಕೆದಾರರ ಇಂಟರ್‍ಫೇಸ್ ಹೊಂದಿದ್ದು, ಇತರ ಲಭ್ಯ ಪ್ಲಾಟ್‍ಫಾರಂಗಳಲ್ಲಿ ಇರುವ ವಿಶೇಷತೆಗಳಿಂತ ಹೆಚ್ಚಿನ ವಿಶೇಷತೆಗಳಿವೆ” ಎಂದು ಹೇಳಿದ್ದಾರೆ.
– ರೇವಣ್ಣ ಹೆಗ್ಡೆ
Web Title : Sheikh Subrudin of Bengaluru won One Lakhs prize at Fantasy Cricket Platform fanfight
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
(ಕನ್ನಡ ಸುದ್ದಿಗಳು Kannada News Today, KNT News Network)
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.