ನೀವು Google Pay ಅನ್ನು ಬಳಸುತ್ತೀರಾ? ಆಗಿದ್ರೆ ಹುಷಾರ್

Story Highlights

Do you use Google Pay, Did you get any message saying Good News, Beware - Gadgets News

ಕನ್ನಡ ನ್ಯೂಸ್ ಟುಡೇTech News

ತಂತ್ರಜ್ಞಾನ : ನೀವು Google Pay ಅನ್ನು ಬಳಸುತ್ತೀರಾ? ಆಗಿದ್ರೆ ಹುಷಾರ್. ನಿಮಗೆ ಒಳ್ಳೆಯ ಸುದ್ದಿ ಎಂದು ಯಾವುದೇ ಸಂದೇಶ ಬಂದಿದೆಯೇ? ಸಂದೇಶದಲ್ಲಿ ಯಾವುದೇ ಲಿಂಕ್ ಕ್ಲಿಕ್ ಮಾಡಿದರೆ ಮುಗಿತು, ನಿಮ್ಮ ಖಾತೆಯಲ್ಲಿ ಹಣ ಕಾಣೆ. ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆಗೇ ಪರಿಶೀಲಿಸಿ. ನಗದು ಕಣ್ಮರೆಯಾಗಿರುತ್ತದೆ ..

ನಕಲಿ ಸಂದೇಶಗಳು, ಲಿಂಕ್ ಗಳನ್ನೂ ಸೈಬರ್ ವಂಚಕರು ಆಮಿಷಕ್ಕೆ ಒಳಪಡಿಸಿ ನಿಮ್ಮ ಖಾತೆಗೆ ಕನ್ನ ಹಾಕಲು ಯತ್ನಿಸುತ್ತಾರೆ.. ಪ್ರಚಲಿತ  ‘ನಕಲಿ ಸುದ್ದಿ ಇದೀಗ ವೈರಲ್ ಆಗುತ್ತಿದೆ,’ ಗೂಗಲ್ ಪೇ ಬಳಕೆದಾರರಿಗೆ ಒಳ್ಳೆಯ ಸುದ್ದಿ ‘ ಎಂದು ಬರುವ ಆ ಸಂದೇಶವನ್ನು ಮತ್ತು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಹಲವರು ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ.

ಗೂಗಲ್ ಪೇ ಲಿಂಕ್ಸ್ ಮತ್ತು ಫೋನ್ ಸಂದೇಶಗಳು ಮತ್ತು ವಾಟ್ಸಾಪ್ ಗಳ ಬಗ್ಗೆ ಎಚ್ಚರವಹಿಸಿ. ಒಮ್ಮೆ ನೀವು ಬಂಪರ್ ಆಫರ್ ಎಂದು ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಹಣವನ್ನು ದೋಚುತ್ತಾರೆ.  ಕ್ಲಿಕ್ ಮಾಡಿದರೆ, ನಿಮ್ಮ ಖಾತೆ ಖಾಲಿಯಾಗಿರುತ್ತದೆ ಎಂದು ಸೈಬರ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆ ಹ್ಯಾಕರ್‌ಗಳ ಕೈಗೆ ಸಿಗದಂತೆ ಎಚ್ಚರ ಇರಲಿ, ಸೈಬರ್ ಅಪರಾಧಿಗಳು ಮೋಸದ ಲಿಂಕ್‌ಗಳನ್ನು ರಚಿಸಿದ್ದಾರೆ, ಅವುಗಳ ಮೇಲೆ ಕ್ಲಿಕ್ ಮಾಡಿ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದರೆ, ಸುಲಭವಾಗಿ ಅವರು ನಿಮ್ಮ ಹಣ ದೋಚಬಹುದು.

ಅಕ್ಟೋಬರ್ 21 ರಂದು ಸೈಬರಾಬಾದ್‌ನ ವೈದ್ಯರೊಬ್ಬರು 5.29 ಲಕ್ಷ ರೂ. ಇದೆ ರೀತಿ ಕಳೆದುಕೊಂಡಿದ್ದಾರೆ . ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ .. ನಿಮ್ಮ ಕೆವೈಸಿ ಮತ್ತು ಖಾತೆ ವಿವರಗಳನ್ನು ತಕ್ಷಣ ನವೀಕರಿಸಿ. ಮತ್ತು ಯಾವುದೇ ನಕಲಿ ಲಿಂಕ್ ಅನ್ನು Google ಅಥವಾ Google Pay App ನಿಮಗೆ ಕಳುಹಿಸುವುದಿಲ್ಲ ಎಂಬುದು ನೆನಪಿರಲಿ. ಇದೆ ರೀತಿ ಮೋಸ ಹೋದವರ ಹಲವು ಕಥೆಗಳು Google News ನಲ್ಲಿ ಹರಿದಾಡುತ್ತಿವೆ.////

Quick Links : Kannada Gadgets News | Kannada Technology News