ಫೇಸ್ ಬುಕ್ ಅದ್ಭುತ ವಿಷಯಗಳು ನಿಮಗೆ ಗೊತ್ತಿಲ್ಲ – ಚಾಲೆಂಜ್

FaceBook amazing things | itskannada Technology

(itskannada): ಫೇಸ್ ಬುಕ್ ಅದ್ಭುತ ವಿಷಯಗಳು ನಿಮಗೆ ಗೊತ್ತಿಲ್ಲ ಹಲೋ ಸ್ನೇಹಿತರೆ  ಇಂದು ನಿಮಗೆ ಒಂದು ವಿಶೇಷ ಲೇಖನವನ್ನು ತಂದಿದ್ದೇನೆ. ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಿಷಯಗಳು ಇವು . ಈ ಹಿಂದಿನ ಲೇಖನದಲ್ಲಿ ಫೇಸ್ ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ ಎಂದು ತಿಳಿದಿದ್ದಾಯಿತಲ್ಲವೇ , ಈಗ ಫೇಸ್ ಬುಕ್ ಅದ್ಭುತ ವಿಷಯಗಳು ಬಗ್ಗೆ ತಿಳಿಯೋಣ.

FaceBook ನ ರೋಚಕ ವಿಷಯಗಳು ನಿಮಗಾಗಿ ಪ್ರಪ್ರಥಮ ಭಾರಿಗೆ ” ಇಟ್ಸ್ ಕನ್ನಡ ” ದಲ್ಲಿ ಮಾತ್ರ.

ನಮ್ಮಲ್ಲಿ ಎಲ್ಲರೂ ಫೇಸ್ ಬುಕ್ ಬಳಸುತ್ತೇವೆ , ಆದರೆ ಅದರ ಬಗೆಗೆ ನಮಗೆಷ್ಟು ಗೊತ್ತು ? ಇಲ್ಲ ನಮಗೆ ಗೊತ್ತಿಲ್ಲ ! ಅದರ ಬಗೆಗಿನ ಕೆಲವು ಕುತೂಹಲಕಾರಿ ವಿಷಯಗಳನ್ನು ನಾವು ನೀವು ತಿಳಿಯಲೇ ಬೇಕು. ಫೇಸ್ ಬುಕ್ ಪ್ರಾರಂಭವಾದ 4 ಪೆಬ್ರವರಿ 2004 ರಿಂದ ಇಂದಿನ ತನಕ ಅದೆಷ್ಟೋ ಮಿಲಿಯನ್ ಜನರನ್ನು ತನ್ನತ್ತ ಸೆಳೆದಿದೆ.

ಒಂದಲ್ಲಾ ಒಂದು ರೀತಿ ಅದು ನಮಗೆ ಉಪಯೋಗಕಾರಿಯಾಗಿದೆ. ಕೆಲವು ಅಡಕು-ತೊಡಕುಗಳು ಇವೆಯಾದರೂ ಅವೆಲ್ಲಾ ಲೆಕ್ಕಕ್ಕೆ ಬರುವುದಿಲ್ಲ. ಬಳಸಬೇಕಾದ ಸಾಧನವನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಅದು ಅನುಕುಳಕರವಗಿಯೇ ಇರುತ್ತದೆ.

ಇಂದು ನಾವು ನೀವೆಲ್ಲಾ ಬಳಸುತ್ತಿರುವ ” facebook” ನ ಸ್ಥಾಪಕ ತನ್ನ ಕೇವಲ 23ನೆ ವಯಸ್ಸಿನಲ್ಲಿಯೇ ಬಿಲೆನಿಯರ್ ಆದರು.

ಇಂದು ಫೇಸ್ ಬುಕ್ ಕೇವಲ್ ಆಟದ ವಸ್ತು ಆಗದೆ , ಸಾಮಾನ್ಯ ಜ್ಞಾನದ ಜೊತೆಗೆ ಮನೋರಂಜನೆಯನ್ನು ನೀಡುತ್ತಿದೆ. ಕಿರಿಯರಿಂದ ಹಿರಿಯರ ತನಕ FaceBook ಚಿರಪರಿಚಿತ.

(facebook) ಫೇಸ್ ಬುಕ್ ಅದ್ಭುತ ವಿಷಯಗಳು – ಏನು ?

ಫೇಸ್ ಬುಕ್ ಅದ್ಭುತ ವಿಷಯಗಳು (FaceBook amazing things) ಏನು ಎಂದು ತಿಳಿಯುವ ಮೊದಲು ಇದರ ಸಂಸ್ಥಾಪಕನ ಬಗ್ಗೆ ತಿಳಿಯೋಣ .

facebook-founder-markzuckerburg-itskannada
ಫೇಸ್ ಬುಕ್ ಸಂಸ್ಥಾಪಕ

ಸಂಸ್ಥಾಪಕ : ಮಾರ್ಕ್ ಜ಼ುಕರ್‌ಬರ್ಗ್

ಮಾರ್ಕ್ ಎಲಿಯಟ್ ಜ಼ುಕರ್‌ಬರ್ಗ್‌ನು ಅಮೇರಿಕನ್ ಕಂಪ್ಯೂಟರ್ ಪ್ರೋಗ್ರಾಮರ್, ಇಂಟರ್ನೆಟ್ ಉದ್ಯಮಿ, ಹಾಗೂ ಲೋಕೋಪಕಾರಿ ವ್ಯಕ್ತಿ. ಸಾಮಾಜಿಕ ನೆಟ್ವರ್ಕಿಂಗ್ ವೆಬ್‌ಸೈಟ್ ಆದ ಫೇಸ್ಬುಕ್‌ನ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು  ಸಹ ಸಂಸ್ಥಾಪಕರಾದ ಇವರ ಒಟ್ಟು ಐಶ್ವರ್ಯ ಅಮೇರಿಕಾದ 55.3 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಇವರನ್ನು ವಿಶ್ವದ 5 ನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲಾಗಿದೆ.೨೦೧೦ರಿಂದ, ಟೈಮ್ ಮ್ಯಾಗಜ಼ಿನ್ ಜ಼ುಕರ್‌ಬರ್ಗ್ ಅವರನ್ನು ವಿಶ್ವದ ಶ್ರೀಮಂತ ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರೆಂದು ಗುರುತಿಸಿದೆ. (ಕೃಪೆ :ವಿ.ಕಿ.ಪಿ)

ಫೇಸ್ ಬುಕ್ ಅದ್ಭುತ ವಿಷಯಗಳು – ಇಲ್ಲಿವೆ !

ಫೇಸ್ ಬುಕ್ ಅದ್ಭುತ ವಿಷಯಗಳು (Facebook amazing things)- ಇಲ್ಲಿವೆ ನೋಡಿ , ಒಂದೊಂದು ವಿಷಯವು ನಿಜಕ್ಕೂ ವಿಶೇಷ.

 1. FACEBOOK ಸ್ಥಾಪನೆ  4 ಪೆಬ್ರವರಿ 2004 .
 2. ಫೇಸ್ ಬುಕ್ ಸಂಸ್ಥೆಯ ನೌಕರರ ಸಂಖ್ಯೆ 23.165 ( 30 ಸೆಪ್ಟೆಂಬರ್ 2017 ಕ್ಕೆ ).
 3. ವಿಶ್ವದಲ್ಲಿ 13 ರಿಂದ 14 ಜನರಲ್ಲಿ ಒಬ್ಬರು ಫೇಸ್ ಬುಕ್ ಬಳಕೆದಾರರಾಗಿದ್ದಾರೆ.FaceBook amazing things- itskannada
 4. ಹೊರದೆಶಗಳಾದ USA ಹಾಗು ಮುಂತಾದವುಗಳು ತಮ್ಮ ಇಂಟರ್ನೆಟ್ ಬಳಕೆಯ 75% ನಷ್ಟು FACEBOOK ಬಳಸುತ್ತಾರೆ.
 5. ಫೇಸ್ ಬುಕ್ ಕೇವಲ ಕನ್ನಡ , ಹಿಂದಿ , ಇಂಗ್ಲಿಷ್ ಅಲ್ಲದೆ ಬರೋಬ್ಬರಿ 70 ಭಾಷೆಗಳಲ್ಲಿ ಲಭ್ಯವಿದೆ.
 6. ಪ್ರತಿ ತಿಂಗಳು ಫೇಸ್ ಬುಕ್ ನಲ್ಲಿ ಸರಿಸುಮಾರು 2.5 ಬಿಲಿಯನ್ ಫೋಟೋಗಳು ಅಪ್ಲೋಡ್ ಆಗುತ್ತವೆ.
 7. facebook ನಲ್ಲಿ 20 ನಿಮಿಷಗಳಿಗೆ 18.50.000 ರಷ್ಟು ತಮ್ಮ ಸ್ಟೇಟಸ್ ಅಪ್ಡೇಟ್ ಮಾಡುತ್ತಾರೆ.
 8.  20 ನಿಮಿಷಗಳಿಗೆ 1 ಮಿಲಿಯನ್ ಜನರು ತಮ್ಮ ತಮ್ಮ ಫ್ರೆಂಡ್ಸ್ ಸರ್ಕಲ್ ನಲ್ಲಿ likes ನೀಡುತ್ತಾರೆ.
 9. facebook ನ ಬೆಳವಣಿಗೆ ಕಂಡು ಕೆಲವು ದೇಶಗಳು ಇದನ್ನು ಬ್ಯಾನ್ ಮಾಡಿದ್ದಾರೆ . ಅವುಗಳು , China, victnam , Bangladesh , NorthKorea , ಹಾಗೂ ಇನ್ನು ಕೆಲವು .
 10. ಫ್ಲೋರಿಡಾ ಸರ್ಕಾರದ ನಿಯಮದಂತೆ ಒಬ್ಬ ನ್ಯಾಯಾದಿಶರು ಇನ್ನೊಬ್ಬ ನ್ಯಾಯಾದಿಶರನ್ನು , ಒಬ್ಬ ವಕೀಲರು ಇನ್ನೊಬ್ಬ ವಕೀಲರನ್ನು ಫೇಸ್ ಬುಕ್ ನಲ್ಲಿ ಫ್ರೆಂಡ್ ಮಾಡಿಕೊಳ್ಳುವಂತಿಲ್ಲ.

ಫೇಸ್ ಬುಕ್ ಅದ್ಭುತ ವಿಷಯಗಳು – ಇನ್ನಷ್ಟು

ಫೇಸ್ ಬುಕ್ ಅದ್ಭುತ ವಿಷಯಗಳು – ಇನ್ನಷ್ಟು ಏನು ಎಂಬುದನ್ನು ಇಲ್ಲಿ ನೋಡಿ .

 1. ಅಮೇರಿಕಾದ 13 ವರ್ಷದ ಮಕ್ಕಳೇ ತಮ್ಮ ಫೇಸ್ ಬುಕ್ ಖಾತೆ ತೆರೆಯುತ್ತಾರೆ.
 2.  google ನಲ್ಲಿ ಸರ್ಚ್ ಮಾಡುವ ಟಾಪ್ 5 ಕೀವರ್ಡ್ ನಲ್ಲಿ facebook ಕೂಡ ಒಂದು.
 3.  ಈಗಾಗಲೇ ಸತ್ತಿರುವ 30 ಮಿಲಿಯನ್ ಜನರ ಅಕೌಂಟ್ ಗಳು ಇಂದಿಗೂ ಚಾಲನೆಯಲ್ಲಿವೆ.
 4.  ಫೇಸ್ ಬುಕ್ ನಲ್ಲಿ ದಿನಕ್ಕೆ 6 ಲಕ್ಷ ಬಾರಿ ಹ್ಯಾಕ್  ಮಾಡಲು Hackers ಪ್ರಯತ್ನಿಸುತ್ತಾರೆ ,
 5.  ಸತ್ತಿರುವ ವ್ಯಕ್ತಿಯ ಅಕೌಂಟ್ ಫೇಸ್ ಬುಕ್ ನಲ್ಲಿ ಇದ್ದರೆ , ಫೇಸ್ ಬುಕ್ ಅನ್ನು ಸಂಪರ್ಕಿಸಿ ಅವ್ರ ಅಕೌಂಟ್ ಅನ್ನು ನೆನಪಿನ ಖಾತೆ ಯಾಗಿ ಮಾರ್ಪಡಿಸಬಹುದು.
 6.  facebook ನ ಲೈಕ್ ಬಟನ್ ನೀವು ಹೊತ್ತುವ ಸಮಯಕ್ಕೆ ಅಥವಾ ಒಂದು ಸರಾಸರಿ 1.8 ಮಿಲಿಯನ್ ಒತ್ತಲ್ಪಡುತ್ತದೆ.
 7. ನಿಮಗೆ ಗೊತ್ತ ಫೇಸ್ ಬುಕ್ ನ ಸಂಸ್ಥಾಪಕನ ಅಕೌಂಟ್ ಬ್ಲಾಕ್ ,ಅಥವಾ ರಿಪೋರ್ಟ್ ಮಾಡಲು ಸಾಧ್ಯವಿಲ್ಲ.
 8. ಒಂದು ವೇಳೆ, ಯಾವಾಗಲಾದರು ಒಂದು ನಿಮಿಷ ಫೇಸ್ ಬುಕ್ ನ ಸರ್ವರ್ ಡೌನ್ ಆದರೆ ನಿಮಿಷಕ್ಕೆ 25,000 ಡಾಲರ್ ಗಳಷ್ಟು ನಷ್ಟವಾಗುತ್ತದೆ.
 9. 2014 ರಲ್ಲಿ ಒಮ್ಮೆ ಫೇಸ್ ಬುಕ್ ನ ಸರ್ವರ್ ಡೌನ್  ಆಗಿತ್ತು ಆಗ ಆದ ನಷ್ಟ  2,86,09000.
 10. ಅಮೆರಿಕಾದಲ್ಲಿ ಹಲವು ಕೊಲೆಗಳು , ಫೇಸ್ ಬುಕ್ ನಲ್ಲಿ UNFRIEND ಮಾಡಿರುವುದಕ್ಕೆ ಆಗಿವೆ.
 11. ನಿಮಗೆ ಗೊತ್ತ ನಿಮ್ಮ ಎಲ್ಲಾ ಚಲನವಲನಗಳನ್ನು ಫೇಸ್ ಬುಕ್ ರೆಕಾರ್ಡ್ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ,
 12.  LIKE ಬಟನ್ ಗೆ AWESOME ಎಂದು ಇಡುವ ಮಾತಾಗಿತ್ತಾದರು , ಕೊನೆಗೆ ಅದು ಬದಲಾಗಲಿಲ್ಲ.
 13.  WhatsApp ನ ಸಂಸ್ಥಾಪಕರಾದ Brian Acton ರವರಿಗೆ ಫೇಸ್ ಬುಕ್ ಕೆಲಸ ನೀಡಲು ನಿರಾಕರಿಸಿತ್ತು , ಆ ನಂತರವೇ Brian Acton whatsapp ಸ್ಥಾಪಿಸಿದ್ದು.
 14. ಫೇಸ್ ಬುಕ್ ನ ಮುಖ್ಯ ಅಧಾಯ facebook Advertise ನಿಂದ.
 15. ನೀವು facebook ನಲ್ಲಿ ಯಾವುದಾದರು ದೋಷ ಕಂಡು ಹಿಡಿದಲ್ಲಿ ನಿಮಗೆ ಬಹುಮಾನ ನೀಡಲಾಗುತ್ತದೆ.
 16.  ನೀವು facebook ನಲ್ಲಿ ವಿವಿಧ ರೀತಿಯಲ್ಲಿ ಹಣ ಗಳಿಸ ಬಹುದು.
 17. ನಿಮಗಾಗಿ ಈ ಫೇಸ್ ಬುಕ್ ಅದ್ಭುತ ವಿಷಯಗಳು ಕಲೆ ಹಾಕಲು ” ಇಟ್ಸ್ ಕನ್ನಡ ” ಶ್ರಮಿಸಿದೆ , ನಿಮಗೆ ಈ ಲೇಖನ ಇಷ್ಟವಾಗಿದ್ದರೆ , ದಯವಿಟ್ಟು itskannada FaceBook ಪೇಜ್ ಲೈಕ್ ಮಾಡಿ.

ಇವಿಷ್ಟು ಫೇಸ್ ಬುಕ್ ಅದ್ಭುತ ವಿಷಯಗಳು ( FaceBook amazing things ) ಇನ್ನು ಉಳಿದ ವಿಷಯಗಳನ್ನು ಮುಂದಿನ ಲೇಖನದಲ್ಲಿ ಅಪ್ಡೇಟ್ ಮಾಡಲಾಗುತ್ತದೆ. itskananda Technology


WebTitle : FaceBook amazing things

Keyword : ಫೇಸ್ ಬುಕ್ ಅದ್ಭುತ ವಿಷಯಗಳು , FaceBook amazing things ,


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ತಂತ್ರಜ್ಞಾನ ಸುದ್ದಿಗಾಗಿ ತಂತ್ರ-ಜ್ಞಾನ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ತಂತ್ರಜ್ಞಾನ ಪುಟ –ಕನ್ನಡ ತಂತ್ರಜ್ಞಾನ-ಇಲ್ಲವೇ ವಿಭಾಗ ಕನ್ನಡ ಗ್ಯಾಜೆಟ್ಗಳ ಸುದ್ದಿ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Technology  click Kannada Technology or look at Kannada Gadgets