ಬರ್ತಾಯಿದೆ ವಾಟ್ಸಾಪ್ ‘ಮಲ್ಟಿ-ಡಿವೈಸ್’ ಆಪ್ಷನ್

Is WhatsApp Going To Roll Out 'Multi-Device' Option

ಬರ್ತಾಯಿದೆ ವಾಟ್ಸಾಪ್ ‘ಮಲ್ಟಿ-ಡಿವೈಸ್’ ಆಪ್ಷನ್

ವಾಟ್ಸಾಪ್… ಈ ಅಪ್ಲಿಕೇಶನ್ ಇಲ್ಲದೆ ಇರೋ ಯಾವುದಾದ್ರೂ ಸ್ಮಾರ್ಟ್‌ಫೋನ್ ಇದೆಯೇ? ಖಂಡಿತವಾಗಿಯೂ ಇಲ್ಲ ! ಈ ಚಾಟ್ ಅಪ್ಲಿಕೇಶನ್ ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ವಿಷಯವಾಗಿದೆ, ಏಕೆಂದರೆ ಜನರು ತಮ್ಮ ಆತ್ಮೀಯರು ಮತ್ತು ಪ್ರಪಂಚದಾದ್ಯಂತ ಎಲ್ಲಿಯಾದರೂ ಇರುವ ತಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡಲು, ತಮ್ಮ ಸಂತೋಷ ಹಂಚಿಕೊಳ್ಳಲು ಮತ್ತು ಸಂತೋಷದಿಂದ ಮಾತನಾಡಲು ಈ ಆಪ್ ಅನುವು ಮಾಡಿಕೊಡುತ್ತದೆ.

ಈ ಚಾಟ್ ಅಪ್ಲಿಕೇಶನ್‌ನಲ್ಲಿ ಈವರೆಗೆ ಒಂದು ಸಣ್ಣ ನ್ಯೂನತೆಯಿದೆ, ಅದೇನಪ್ಪ ಅಂದ್ರೆ ವಾಟ್ಸಾಪ್ ಒಮ್ಮೆ ಒಂದೇ ಸಾಧನ ದಲ್ಲಿ ಮಾತ್ರ ಬಳಸಬಹುದು, ಆದ್ದರಿಂದ ಜನರು ಇದನ್ನು ತಮ್ಮ ಬಹು ಸಾಧನಗಳಾದ ಟ್ಯಾಬ್ ಮತ್ತು ಮೊಬೈಲ್‌ನಂತಹ ಇತರ ಸಾಧನಗಳಲ್ಲಿ ಒಟ್ಟಿಗೆ ಬಳಸಲಾಗುವುದಿಲ್ಲ.

ಹಾಗೂ ವಾಟ್ಸಾಪ್ ವೆಬ್ ಡೆಸ್ಕ್ ಟಾಪ್ ನಲ್ಲಿ ಬಳಸಬಹುದು, ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸ ಬಹುದು. ಮೂಲಗಳ ಪ್ರಕಾರ, ಈಗ ವಾಟ್ಸಾಪ್  ‘ಮಲ್ಟಿ-ಡಿವೈಸ್’ ಆಯ್ಕೆಯನ್ನು ಹೊರತರಲು ಯೋಚಿಸುತ್ತಿದೆ.

ಬರ್ತಾಯಿದೆ ವಾಟ್ಸಾಪ್ 'ಮಲ್ಟಿ-ಡಿವೈಸ್' ಆಪ್ಷನ್ - Kannada News

ಈ ಅಪ್ಲಿಕೇಶನ್‌ನ ಬೀಟಾ ಆವೃತ್ತಿ, 2.20.143 ಆಗಿದ್ದು, ಈ ಆಯ್ಕೆಯನ್ನು ಸದ್ಯ ಪರೀಕ್ಷಿಸಲಾಗುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ, ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಹೊಸ ಆವೃತ್ತಿಯ ನವೀಕರಣ ಬಿಡುಗಡೆಯಾಗುತ್ತದೆ. ಆ ಆವೃತ್ತಿಯಲ್ಲಿ ಒಮ್ಮೆಲೇ ಹಲವು ಸಾಧನದಲ್ಲಿ ಬಳಸುವ ಆಯ್ಕೆ ಇರುತ್ತದೆ.

Follow us On

FaceBook Google News