ಪೆಟ್ರೋಲ್ ಡೀಸಲ್ ಬೇಕಿಲ್ಲ, ಬಂದಿದೆ ಗಾಳೀಲಿ ಓಡೋ ಕಾರು

No need for petrol diesel, car moving from the air

ಪೆಟ್ರೋಲ್ ಡೀಸಲ್ ಬೇಕಿಲ್ಲ, ಬಂದಿದೆ ಗಾಳೀಲಿ ಓಡೋ ಕಾರು

ತಂತ್ರಜ್ಞಾನ : ಈಗಿರುವ ಕಾರುಗಳ ಮೇಂಟೆನೆನ್ಸ್ ನಿಂದ ಬೇಸತ್ತು ಗಾಳಿಗೆ ಓಡೋ ಕಾರುಗಳು ಯಾವಾಗ ಬರುವುದು ಎಂದು ಬಳಸುವವರಿಗೆ ಈ ವಿಚಾರವಂತೂ ಸಿಹಿಸುದ್ದಿ.

ಹೌದು, ನೀವು ಓದುತ್ತಿರುವುದು, ನಾವು ಬರೆದಿರುವುದು ಎರಡೂ ನಿಜ, ಗಾಳಿಯಿಂದ ಚಲಿಸುವ ಕಾರ್ ಅನ್ನು ಈಗ ಅಭಿವೃದ್ಧಿಪಡಿಸಲಾಗಿದ್ದು, ಆ ಕಾರು ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್, ಡೀಸೆಲ್  ಬೆಲೆಗಳ ನಡುವೆ ನಿರ್ವಹಣೆಯ ವೆಚ್ಚವೇ ಇಲ್ಲದ ಈ ಕಾರನ್ನು ಯಾರು, ಎಲ್ಲಿ, ಯಾವಾಗ ಅಭಿವೃದ್ಧಿಪಡಿಸಿದರು, ನಮ್ಮ ಕೈಗೆ ಎಂದು ಸಿಗುತ್ತೆ ಎಂಬ ಕುತೂಹಲ ನಿಮ್ಮಲ್ಲಿ ಮೂಡಬಹುದು.

ಈಜಿಪ್ಟ್ ನ ಹೆಲೆನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ತಂಡ ತಮ್ಮ ‘ಪದವಿಯ ಶೈಕ್ಷಣಿಕ ಯೋಜನೆ’ಗಾಗಿ ಆಕ್ಸಿಜನ್ ಕಂಪ್ರೆಸ್ಡ್ ಇಂಧನ ದಿಂದ ಚಲಿಸುವ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ.

ಇದಕ್ಕಾಗಿ ಇವರು ಕೇವಲ 18 ಸಾವಿರ ಈಜಿಪ್ಟ್ ಪೌಂಡ್ ಗಳನ್ನು ($ 1,008.40) ವೆಚ್ಚ ಮಾಡಿದ್ದಾರೆ. ‘ಗೋ ಕಾರ್ಟಿಂಗ್’ ರೇಸ್ ನಲ್ಲಿ ಬಳಸುವ ಕಾರನ್ನು ಹೋಲುವ ಇದರಲ್ಲಿ ಒಬ್ಬ ವ್ಯಕ್ತಿ ಮಾತ್ರ ಪ್ರಯಾಣಿಸಬಹುದು.
ಮಾದರಿ ವ್ಯಕ್ತಿಯ ವಾಹನವನ್ನು ಚಾಲನೆ ಮಾಡಬಹುದು.

ಈ ಕಾರಿನಿಂದ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ.   40 ಕಿಮೀ ಚಲಿಸುವ ಒಳಗೆ 30 ಕಿ.ಮೀ. ಚಲಿಸಲು ಬೇಕಾಗುವ ಕಂಪ್ರೆಸ್ಡ್ ಆಕ್ಸಿಜನ್ ಇಂಧನವನ್ನು ತಯಾರಿಸಿಕೊಳ್ಳುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಬಳಸದೆ ಇರುವ ಕಾರಣದಿಂದ ಇಂಜಿನ್ ತಣ್ಣಗಾಗಿಸಬೇಕಾಗಿಲ್ಲ, ಗಾಳಿಯನ್ನು ಬಳಸುವುದರಿಂದ ನಿರ್ವಹಣಾ ವೆಚ್ಚ ಶೂನ್ಯವೆಂದು ಈ ಕಾರಿನ ಡಿಸೈನರ್  ಮೊಹಮ್ಮದ್ ಯಾಸಿರ್  ಹೇಳಿದ್ದಾರೆ.

ಗಂಟೆಗೆ 40 ಕಿಮೀ ವೇಗದ ಈ ಕಾರನ್ನು ಗಂಟೆಗೆ 100 ಕಿ.ಮೀ ವೇಗಕ್ಕೆ ಏರಿಸುವುದಕ್ಕೆ,  100 ಕಿ.ಮೀ ಚಲಿಸುವ ಒಳಗೆ, ಮತ್ತೆ 100 ಕಿ. ಮೀ ಚಲನೆಗೆ ಬೇಕಾಗುವ ಇಂಧನವನ್ನು ಸಂಗ್ರಹಣೆ ಮಾಡಿಕೊಳ್ಳುವ ತಂತ್ರಜ್ಞಾನವನ್ನು ಇದಕ್ಕೆ ಜೋಡಿಸಲು  ವಿದ್ಯಾರ್ಥಿಗಳು ಮುಂದಾಗಿದ್ದಾರೆ.  ಈ ತಂಡವು  ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ನಿಧಿಯನ್ನು ಸಂಗ್ರಹಿಸುತ್ತಿದೆ. ////

WebTitle : ಪೆಟ್ರೋಲ್ ಡೀಸಲ್ ಬೇಕಿಲ್ಲ, ಬಂದಿದೆ ಗಾಳೀಲಿ ಓಡೋ ಕಾರು-No need for petrol diesel, car moving from the air

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Kannada Gadgets News   ।  Kannada Technology News