ಅಪ್ಲಿಕೇಶನ್ ಗಳನ್ನು install ಮಾಡದೆ ಬಳಸಬಹುದು

Use Android Apps Without Installing

Kannada Technology (itskannada) ಅಪ್ಲಿಕೇಶನ್ ಗಳನ್ನು install ಮಾಡದೆ ಬಳಸಬಹುದು-Use Android Apps Without Installing : ಗೂಗಲ್ ಕಂಪನಿ ತನ್ನ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಸಾಫ್ಟ್ವೇರ್ Google Play ನವಿಕರಿಸಿ ಹೊಸ ವೈಶಿಷ್ಟ್ಯಗಳನ್ನು ಘೋಷಿಸಿದೆ.

ಕಂಪನಿಯು ಪ್ರಕಟಿಸಿದ ಅತ್ಯಂತ ಪ್ರಮುಖವಾದ ನವೀಕರಣವೆಂದರೆ  Android ಮೊಬೈಲಿನ  ಪ್ಲೇ ಸ್ಟೋರ್ನಲ್ಲಿನ Google ಇನ್ಸ್ಟೆಂಟ್ ಅಪ್ಲಿಕೇಶನ್ಗಳ ಲಭ್ಯತೆ. ಈ ಹೊಸ ವೈಶಿಷ್ಟ್ಯತೆ ಸಹಾಯ ದಿಂದ ಗ್ರಾಹಕರು ಯಾವುದೇ ಅಪ್ಲಿಕೇಶನ್ install ಮಾಡಿಕೊಳ್ಳುವ ಮೊದಲು ಪರೀಕ್ಷಿಸಿ ಅಥವಾ ಟೆಸ್ಟ್ ಮಾಡಿ, ಇಷ್ಟವಾದಲ್ಲಿ ಮಾತ್ರ install ಮಾಡಿಕೊಳ್ಳಬಹುದಾಗಿದೆ.(ಇದಕ್ಕಾಗಿ Try it Now ಎಂಬ ಹೊಸ ಬಟನ್ ಪರಿಚಯಿಸಿದೆ)

ಈ ಇನ್ಸ್ಟೆಂಟ್ ಅಪ್ಲಿಕೇಶನ್ಗಳ ವೈಶಿಷ್ಟ್ಯತೆ ಸಾಹಾಯದಿಂದ ಯಾವುದೇ ಅಪ್ಲಿಕೇಶನ್ install ಮಾಡಿಕೊಳ್ಳದೆ ಅಪ್ಲಿಕೇಶನ್’ಗಳ ವೈಶಿಷ್ಟ್ಯತೆಗಳನ್ನೂ ತಿಳಿದುಕೊಳ್ಳಬಹುದಾಗಿದೆ.

ಈ ವೈಶಿಷ್ಟ್ಯವು ಮೊದಲಿಗೆ Google ನ ಪಿಕ್ಸೆಲ್ ಮತ್ತು ನೆಕ್ಸಸ್ ಶ್ರೇಣಿಯ ಸಾಧನಗಳಲ್ಲಿ ಮಾತ್ರ ಲಭ್ಯವಿತ್ತು, ಆದರೆ ಈಗ ಆಂಡ್ರಾಯ್ಡ್ 6.0 ಅಥವಾ ಅದಕ್ಕಿಂತ ಹೆಚ್ಚಿನ ಎಲ್ಲಾ ಸಾಧನಗಳಲ್ಲಿ ಲಭ್ಯವಿದೆ.

ಇನ್ಸ್ಟೆಂಟ್ ಅಪ್ಲಿಕೇಶನ್ಗಳನ್ನು ಸಕ್ರಿಯಗೊಳಿಸುವುದು ಹೇಗೆ ?

ಇನ್ಸ್ಟೆಂಟ್ ಅಪ್ಲಿಕೇಶನ್ಗಳು ಎಂದರೇನು ಅಂತ ಸ್ವಲ್ಪ ಐಡಿಯಾ ಸಿಕ್ಕಿರುತ್ತೆ , ಈಗ ಹೇಗೆ ಬಳಸಬಹುದೆಂದು ನೋಡೋಣ.

ಮೊಬೈಲ್ ಸೆಟ್ಟಿಂಗ್ಸ್ (Mobile Device settings)>ಗೂಗಲ್ ಸೆಟ್ಟಿಂಗ್ಸ್ (Google or Google settings or Google services)>ಇನ್ಸ್ಟೆಂಟ್ ಅಪ್ಲಿಕೇಶನ್ಗಳು (Instant apps)>On – ಮಾಡಿ (ಕೆಳಗಿನ ಚಿತ್ರಗಳಲ್ಲಿ ನೋಡಬಹುದು).

instant apps kannadainstant apps - #kannada techinstant apps kannada technology

ಇನ್ಸ್ಟೆಂಟ್ ಅಪ್ಲಿಕೇಶನ್ಗಳನ್ನು ಬಳಸುವುದು ಹೇಗೆ? 

 ನಿಮ್ಮ ಮೊಬೈಲ್’ನಲ್ಲಿ  ಇನ್ಸ್ಟೆಂಟ್ ಸೆಟ್ಟಿಂಗ್ಸ್ ಅನ್ನು ಸಕ್ರಿಯಗೊಳಿಸಿದ ನಂತರ, ಗೂಗಲ್ ವೆಬ್ ಬ್ರೌಸರ್ನಲ್ಲಿ ನಿಮಗೆ ಬೇಕಾದ ಅಪ್ಲಿಕೇಶನ್’ಗಳನ್ನೂ ಸರ್ಚ್ ಮಾಡಿ , ನೀವು ಸರ್ಚ್ ಮಾಡಿದ ಆಪ್ ಇನ್ಸ್ಟೆಂಟ್ ಅಪ್ಲಿಕೇಶನ್ಗಳನ್ನು ಸಪೋರ್ಟ್ ಮಾಡುತ್ತಿದ್ದಲ್ಲಿ ಆ ಆಪ್’ನ ಮುಂದೆ  “Instant” ಐಕಾನ್ ಎಂದು ಬರದಿರುತ್ತದೆ. ಈ ತ್ವರಿತ ಐಕಾನ್ ಟ್ಯಾಪ್ ಮಾಡುವುದರಿಂದ ಬಳಕೆದಾರರನ್ನು Google Play Store ನಲ್ಲಿ ಲ್ಯಾಂಡಿಂಗ್ ಪುಟಕ್ಕೆ ಕರೆದೊಯ್ಯುವ ಬದಲು ತತ್ಕ್ಷಣ(Instant) ಅಪ್ಲಿಕೇಶನ್ ಪುಟಕ್ಕೆ ಕರೆದೊಯ್ಯುತ್ತದೆ.

kannada technology-Use Android Apps Without Installing

ತತ್ಕ್ಷಣದ ಅಪ್ಲಿಕೇಶನ್ಗಳು ನಿಯಮಿತ ಅಪ್ಲಿಕೇಶನ್ಗಳಿಗಿಂತ ಐದು ಪಟ್ಟು ಕಡಿಮೆ ಮೆಮೊರಿ ಉಪಯೋಗಿಸುತ್ತವೆ.ಉದಾಹರಣೆಗೆ,  ಯವುದದರು ಆಪ್ install ಮಾಡಿದಾಗ 100 MB ಮೆಮೊರಿ ಬಳಸಿದರೆ, ತತ್ಕ್ಷಣದ ಅಪ್ಲಿಕೇಶನ್ಗಳು ಕೇವಲ 20 MB ಬಳಸುತ್ತವೆ, ಅದನ್ನು ಕೂಡ ಬ್ರೌಸರ್’ ನ  ಹಿಸ್ಟರಿ ಡಿಲೀಟ್ ಮಡಿ ಕ್ಲೀನ್ ಮಾಡಬಹುದು. ಕೆಳಗಿನ ಚಿತ್ರಗಳಲ್ಲಿ ಗಮನಿಸಬಹುದು.

ಸದ್ಯಕ್ಕೆ ಎಲ್ಲಾ ಆಪ್ಗಳು ಇನ್ಸ್ಟಂಟ್ ಆಪ್ ವೈಶಿಷ್ಟ್ಯಗಳನ್ನು ಹೊಂದಿಲ್ಲ , ಆದರೆ ಮುಂಬರುವ ದಿನಗಳಲ್ಲಿ ಗ್ರಾಹಕರ ದೃಷ್ಟಿಕೋನದಿಂದ ಇನ್ಸ್ಟಂಟ್ ಆಪ್ ಖಡ್ಡಾಯ ಮಾಡಲು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಕ್ರಿಯ ಗೊಳಿಸಲು ಗೂಗಲ್ ಕಂಪನಿ ನಿರ್ಧರಿಸಿದೆ. ಇದರಿಂದ ಕಿರಿ ಕಿರಿ ಯಾವುದೇ ಇಲ್ಲದೆ ಸಮಯ ಹಾಗು ಮೊಬೈಲ್’ನ ಮೆಮೊರಿ ಉಳಿಸಬಹುದಾಗಿದೆ.

ಭಾರತದಲ್ಲಿ ಸಧ್ಯಕ್ಕೆ, ಇನ್ಸ್ಟಂಟ್ ಅಪ್ಲಿಕೇಶನ್’ಗಳು ವೆಬ್ ಬ್ರೌಸರ್ನಲ್ಲಿ ಮಾತ್ರ ಲಭ್ಯ,ಶೀಘ್ರದಲ್ಲಿ  ಪ್ಲೇ ಸ್ಟೋರ್ ‘ನಲ್ಲಿ ಈ ಓಂದು ವಿಶೇಷತೆ ದೊರೆಯುತ್ತದೆ ಎಂದು ಗೂಗಲ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ –  Kannada Gadgets News