ತೆಲುಗು ಹಿರಿಯ ನಟ ನರಸಿಂಗ್ ಯಾದವ್ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

Comedy Villain Narsing Yadav Slips Into Coma, Put On Ventilator

ತೆಲುಗು ಹಿರಿಯ ನಟ ನರಸಿಂಗ್ ಯಾದವ್ ಗಂಭೀರ ಎಂಬ ಮಾಹಿತಿ ಸಿಕ್ಕಿದೆ. ಅವರು ಮನೆಯಲ್ಲಿ ಅಚಾನಕ್ಕಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ ಮತ್ತು ತಕ್ಷಣ ಅವರನ್ನು ಸೋಮಾಜಿಗುಡದ ಯಶೋದ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. 

ಹಾಸ್ಯನಟ ಮತ್ತು ಖಳನಾಯಕನಾಗಿ ಅನೇಕ ಪಾತ್ರಗಳನ್ನು ನಿರ್ವಹಿಸಿದ ನರಸಿಂಗ್ ಯಾದವ್, ರಾಮ್ ಗೋಪಾಲ್ ವರ್ಮಾ ಅವರ ಚಿತ್ರಗಳಲ್ಲಿ ಇರಲೇ ಬೇಕಾದ ನಟರಲ್ಲಿ ಒಬ್ಬರು. ಅವರು ಹಲವಾರು ಭಾಷೆಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಅವರು ಬೀಳಲಿಲ್ಲ ಇದ್ದಕ್ಕಿಂದಂತೆ ಕೋಮಾಗೆ ಹೋದರು : ನರ್ಸಿಂಗ್ ಯಾದವ್ ಅವರ ಪತ್ನಿ

”ನನ್ನ ಪತಿ ಸಂಜೆ 4 ಗಂಟೆಗೆ ಪ್ರಜ್ಞೆ ತಪ್ಪಿದರು. ತಕ್ಷಣ ಸೋಮಾಜಿಗುಡ ಯಶೋದಾ ಆಸ್ಪತ್ರೆಗೆ ಸಾಗಿಸಲಾಯಿತು. ನಾವು ಅವರಿಗೆ ಡಯಾಲಿಸಿಸ್ ಕೂಡ ಮಾಡಿದ್ದೇವೆ. ಅವರು ಆಕಸ್ಮಿಕವಾಗಿ ಕೋಮಾಕ್ಕೆ ಹೋಗಿದ್ದಾರೆ. 48 ಗಂಟೆಗಳ ಕಾಲ ನಿಗಾಘಟಕದಲ್ಲಿ ಇರಿಸಲಾಗಿದೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನಡೆಯುತ್ತಿದೆ. 

ಅವರು ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿದೆ ಎಂಬುದು ಸುಳ್ಳು ಸುದ್ದಿ . ಅವರು ಎಲ್ಲಿಯೂ ಬೀಳಲಿಲ್ಲ. ಅವರು ಅಚಾನಕ್ಕಾಗಿ ಕೋಮಾಗೆ ಹೋಗಿದ್ದಾರೆ. ಅವರು ಚೇತರಿಸಿಕೊಂಡು ಆರೋಗ್ಯವಾಗಿ ಮನೆಗೆ ಬರಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನು ನಂಬಬೇಡಿ. ಎಲ್ಲರೂ ಅವರು ಸುರಕ್ಷಿತವಾಗಿ ಮನೆಗೆ ಬರಲು ಪ್ರಾರ್ಥಿಸಿ, ” ಎಂದು ನರ್ಸಿಂಗ್ ಯಾದವ್ ಅವರ ಪತ್ನಿ ಅವರ ಆರೋಗ್ಯ ಸ್ಥಿತಿಯನ್ನು ತಿಳಿಸಿದ್ದಾರೆ.

📢 Kannada News ಸಮಯೋಚಿತ ನವೀಕರಣಗಳಿಗಾಗಿ Facebook | Twitter ಪೇಜ್‌ ಲೈಕ್‌ ಮಾಡಿ, ದಿನದ ಪ್ರಮುಖ ಸುದ್ದಿಗಳಿಗಾಗಿ Kannada News Today ಅಧಿಕೃತ ಕನ್ನಡ ನ್ಯೂಸ್ ವೆಬ್‌ಸೈಟ್ ಭೇಟಿ ನೀಡಿ, ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಪಡೆಯಿರಿ.