ಗಾಯನ ಅವಕಾಶಕ್ಕೆ ಮಂಚಕ್ಕೆ ಕರೆದಿದ್ರಂತೆ, ಟಾಲಿವುಡ್ ನಲ್ಲೂ #MeToo

Director Asked Popular Singer to Come Bed with Him

ಗಾಯನ ಅವಕಾಶಕ್ಕೆ ಮಂಚಕ್ಕೆ ಕರೆದಿದ್ರಂತೆ, ಟಾಲಿವುಡ್ ನಲ್ಲೂ #MeToo – Director Asked Popular Singer to Come Bed with Him

ಗಾಯನ ಅವಕಾಶಕ್ಕೆ ಮಂಚಕ್ಕೆ ಕರೆದಿದ್ರಂತೆ, ಟಾಲಿವುಡ್ ನಲ್ಲೂ #MeToo

ತೆಲುಗು ನಟಿ ಶ್ರೀ ರೆಡ್ಡಿ ಮೀ ಟು ಬಗ್ಗೆ ಮಾತನಾಡಿದ ನಂತರ, ಟಾಲಿವುಡ್ ನ ಅನೇಕ ಇತರ ಕಲಾವಿದರು ಸಹ ತಮ್ಮ # MeToo ಕಥೆಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಅವಕಾಶಗಳ ಆಸೆ ತೋರಿಸಿ ಕಾಮತೃಷೆ ತೀರಿಸಿ ಕೊಳ್ಳಲು ಪ್ರಯತ್ನಿಸಿದ ಹಲವು ನೀಚ ಕೃತ್ಯಗಳು ಒಂದೊಂದಾಗಿ ಹೊರ ಬರುತ್ತಿವೆ.

ಸಧ್ಯ ಈಗ ಗಾಯಕಿ ಪ್ರಾಣವಿ ಆಚಾರ್ಯ ಸರಧಿ, ಶ್ರೀ ರಾಮದಾಸು, ಹ್ಯಾಪಿ ಡೇಸ್, ಯಮದಂಗ ಮತ್ತು ಲಯನ್ ಚಿತ್ರಗಳಲ್ಲಿ ಹಾಡಿ ಜನಪ್ರಿಯವಾಗಿರುವ ಗಾಯಕಿ ಪ್ರಣವಿ ಆಚಾರ್ಯ ಕೂಡಾ ಲೈಂಗಿಕ ಕಿರುಕುಳಗಳನ್ನು ಎದುರಿಸಿರುವ ಬಗ್ಗೆ ಬಹಿರಂಗಗೊಳಿಸಿದ್ದಾರೆ.

ತನ್ನ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ನಿರ್ಮಾಪಕರು ತಮ್ಮ ಚಲನಚಿತ್ರಗಳಲ್ಲಿ ಹಾಡಲು ಅವಕಾಶ ನೀಡುವುದಕ್ಕೆ ಲೈಂಗಿಕ ಸುಖ ಬಯಸಿದ್ದರಂತೆ, ಆದರೆ ಗಾಯಕಿ ಅದನ್ನು ಬಲವಾಗಿ ತಿರಸ್ಕರಿಸಿ ಹೊರ ಬಂದಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಬಹಿರಂಗಗೊಳಿಸಿದ್ದು, ಈ ಹೀನಾಯ ಮನಸ್ಸನ್ನು ಕಟುವಾಗಿ ಕಂಡಿಸಿದ್ದಾರೆ. ಅಲ್ಲದೆ ಮಂಚಕ್ಕೆ ಕರೆದ ನಿರ್ದೇಶಕನಿಗೆ ಚಪ್ಪಲಿ ತೋರಿಸಿ ಬಂದರಂತೆ.

ಗಾಯಕಿ ಪ್ರಣವಿ ಅವರು ಹೆಸರಾಂತ ನೃತ್ಯ ನಿರ್ದೇಶಕ ರಘು ಮಾಸ್ಟರ್ ಅವರ ಪತ್ನಿ. ಇವರು 2016 ರ ಏಪ್ರಿಲ್ 22 ರಂದು ವಿವಾಹವಾದರು. ಸಧ್ಯ ಈಗ ಟಾಲಿವುಡ್ ನಲ್ಲಿ ಒಂದೊಂದಾಗೆ #MeToo ಕಥೆಗಳು ಬಿಚ್ಚಿಕೊಳ್ಳುತ್ತಿವೆ. ಬಾರೀ ಸದ್ದು ಮಾಡುತ್ತಿರುವ #MeToo ಹವಾ ಕೆಲವರಲ್ಲಿ ಭೀತಿ ಹುಟ್ಟಿಸಿದೆ, ಯಾವಾಗ ಯಾರು ತಮ್ಮ ಮೇಲೆ ಆರೋಪ ಮಾಡುತ್ತಾರೋ ಅಂತ ತಬ್ಬಿಬ್ಬಾಗಿರೋ ಜನರೂ ಸಹ ಇದ್ದಾರೆ. ///

Web Title :Director Asked Popular Singer to Come Bed with Him
(Find Latest Kannada News Live @ kannadanews.today)