ಸೈರಾ ಚಿತ್ರದ ವಿದೇಶಿ ಕಲಾವಿದ ಸಾವು

Russian man Artist of Sye Raa Film Died

ಸೈರಾ ಚಿತ್ರದ ವಿದೇಶಿ ಕಲಾವಿದ ಸಾವು – Russian man Artist of Sye Raa Film Died

ಸೈರಾ ಚಿತ್ರದ ವಿದೇಶಿ ಕಲಾವಿದ ಸಾವು

ಮೂಲತಃ ರಷ್ಯಾದ ಕಲಾವಿದ 38 ವರ್ಷದ ಅಲೆಕ್ಸಾಂಡರ್ ಎಂಬಾತ ಹೈದರಾಬಾದ್ ನ ಬಿಸಿಲ ತಾಪಕ್ಕೆ ಸಾವನ್ನಪ್ಪಿದ್ದಾರೆ. ಅಲೆಕ್ಸಾಂಡರ್ ಮೆಘಾಸ್ಟಾರ್ ಚಿರಂಜೀವಿ ಅಭಿನಯದ ಮುಂಬರುವ ಚಿತ್ರ ” ಸೈರಾ ” ಚಿತ್ರದ ಕಲಾವಿದರಲ್ಲಿ ಒಬ್ಬರು.

ಚಿತ್ರೀಕರಣಕ್ಕಾಗಿ ಅಪಾರ್ಟ್ ಮೆಂಟಲ್ಲಿ ತಂಗಿದ್ದ ಅವರು ಗೇಟ್ ಬಳಿ ಪ್ರಜ್ಞಾ ಹೀನವಾಗಿ ಬಿದ್ದಿದ್ದನ್ನು ಕಂಡು ಸ್ಥಳೀಯರು ಕೊಂಡಾಪುರದ ಆಸ್ಪತ್ರೆಗೆ ಸಾಗಿಸಿದ್ದಾರೆ. ತದನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

ಅಲೆಕ್ಸಾಂಡರ್ ನ ಬ್ಯಾಗೊಂದರಲ್ಲಿ ಒಂದು ಕ್ಯಾಮರಾ ಪತ್ತೆಯಾಗಿತ್ತು ಮತ್ತು ಚಿತ್ರೀಕರಣದ ಛಾಯಾಚಿತ್ರಗಳು ಅದರಲ್ಲಿ ಕಂಡುಬಂದಿವೆ. ಅವರು ಚಿತ್ರೀಕರಣಕ್ಕಾಗಿ ಕಡಪಕ್ಕೆ ಹೋದ ಚಲನಚಿತ್ರ ತಂಡದ ಸದಸ್ಯರಲ್ಲಿ ಒಬ್ಬರು ಎಂದು ತಿಳಿದು ಬಂದಿದೆ.

ಇನ್ನು ಪ್ರಕರಣ ದಾಖಲಿಸಿರುವ ಪೊಲೀಸರು, ಆತನ ಸಾವಿನ ಬಗ್ಗೆ ಆತನ ಸ್ನೇಹಿತ ಬೋರಾಜ್ ಗೆ ತಿಳಿಸಿದ್ದಾರೆ. ಬೋರಾಜ್ ಗೋವಾದಲ್ಲಿ ವಾಸವಿದ್ದು ಅವರು ಹೈದರಾಬಾದ್ ಗೆ ಆಗಮಿಸಿದ ನಂತರ ಶವ ಪರೀಕ್ಷೆ ನಡೆಯಲಿದೆ..

ಸುದ್ದಿ ತಿಳಿದ ಚಿತ್ರ ತಂಡ ಅಲೆಕ್ಸಾಂಡರ್ ಸಾವಿಗೆ ಕಂಬನಿ ಮಿಡಿದಿದೆ. ಇನ್ನೂ ಕೆಲವರು ಚಿತ್ರ ಪ್ರಾರಂಭದಿಂದ ಅಪಶಕುನಗಳು ಅವಘಡಗಳೂ ನಡೆಯುತ್ತಲೇ ಇವೆ ಎಂದು ಗುಸುಗುಡುತ್ತಿದ್ದಾರೆ.////

Web Title : Russian man of Artist Sye Raa Film Died
(Kannada News Today @ kannadanews.today)