ವೀಡಿಯೋ, 32 ದಿನಗಳ ಅಂತರದಲ್ಲಿ ಸಾಹೋ, ಸೈರಾ ಬಿಡುಗಡೆ

Saaho and Sye Raa movies will be released in Just 32 days Gap

32 ದಿನಗಳ ಅಂತರದಲ್ಲಿ ಸಾಹೋ, ಸೈರಾ ಬಿಡುಗಡೆ – Saaho and Sye Raa movies will be released in Just 32 days Gap

32 ದಿನಗಳ ಅಂತರದಲ್ಲಿ ಸಾಹೋ, ಸೈರಾ ಬಿಡುಗಡೆ

ಕನ್ನಡ ನ್ಯೂಸ್ ಟುಡೇ : ಸಿನಿ ರಸಿಕರಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಖ್ಯಾತ ನಟ ಪ್ರಭಾಸ್ ಅಭಿನಯದ ಸಾಹೋ ಆಗಸ್ಟ್ 30 ರಂದು ಬಿಡುಗಡೆಯಾಗಲಿದೆ. ಚಿತ್ರದ ಮೇಲಿನ ನಿರೀಕ್ಷೆಗಳು ದೊಡ್ಡದಾಗಿದೆ. ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಟ್ರೈಲರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಪ್ರಭಾಸ್ ಸಾಹೋ ಚಿತ್ರದಲ್ಲಿ ಭಾರತೀಯ ಸಿನಿ ಪರದೆಯಲ್ಲಿ ಯಾರು ಮಾಡದ ಸಾಹಸಗಳನ್ನು, ಚಮತ್ಕಾರಗಳನ್ನು ಮಾಡಲಿದ್ದಾರೆ. ಬಾಹುಬಲಿ ಸೂಪರ್ ಡ್ಯೂಪರ್ ಹಿಟ್ ನಂತೆಯೇ ಸಾಹೋ ಕೂಡ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಸಿನಿಮಾ ಬಿಡುಗಡೆ ದಿನಕ್ಕಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ.

ಏತನ್ಮಧ್ಯೆ, ಮೆಗಾ ಸ್ಟಾರ್ ಚಿರಂಜೀವಿ ನಟಿಸಿರುವ ಐತಿಹಾಸಿಕ ಕಥೆಯ ಬಹು ನಿರೀಕ್ಷಿತ ಸೈರಾ ಚಿತ್ರವೂ ಸಹ ಬಿಡುಗಡೆಯಾಗಲಿದೆ, ವಿಶೇಷವೆಂದರೆ ಇವೆರಡು ಚಿತ್ರಗಳು ಕೇವಲ 32 ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ಸೈರಾ ಸಿನಿಮಾ ಮೆಗಾಸ್ಟಾರ್ ಚಿರಂಜೀವಿಯ ಪ್ರತಿಷ್ಠೆಯ ಸಿನಿಮಾ. ಈ ಚಿತ್ರಕ್ಕಾಗಿ ಮೆಗಾಸ್ಟಾರ್ ಅವರು ತುಂಬಾ ಶ್ರಮಿಸಿದ್ದಾರೆ. ಆಗಲೇ ಬಿಡುಗಡೆಗೊಂಡಿರುವ ಟ್ರೈಲರ್ ವಿಡಿಯೋ ಭಾರಿ ಹಿಟ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ಸೈರಾ ಚಿತ್ರಕ್ಕೂ ಭಾರಿ ನಿರೀಕ್ಷೆಗಳಿವೆ. ಇದನ್ನು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಪ್ರದರ್ಶಿಸಲಾಗುತ್ತಿದೆ. ಆದರೆ, ಸಾಹೋ ಮತ್ತು ಸೈರಾ ಚಿತ್ರಗಳ ನಡುವೆ ಕೇವಲ 32 ದಿನಗಳ ಅಂತರವಿದೆ. ಎರಡು ದೊಡ್ಡ ಬಜೆಟ್ ಚಲನಚಿತ್ರಗಳು ಕಡಿಮೆ ದಿನಗಳ ಅಂತರದಲ್ಲಿ ಬಿಡುಗಡೆಗೊಂಡರೆ, ಯಾವುದಾದರೂ ಚಿತ್ರಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ.////

Web Title : Saaho and Sye Raa movies will be released in Just 32 days Gap

📢 Kannada News ಸಮಯೋಚಿತ ನವೀಕರಣಗಳಿಗಾಗಿ Facebook | Twitter ಪೇಜ್‌ ಲೈಕ್‌ ಮಾಡಿ, ದಿನದ ಪ್ರಮುಖ ಸುದ್ದಿಗಳಿಗಾಗಿ Kannada News Today ಅಧಿಕೃತ ಕನ್ನಡ ನ್ಯೂಸ್ ವೆಬ್‌ಸೈಟ್ ಭೇಟಿ ನೀಡಿ, ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಪಡೆಯಿರಿ.