Welcome To Kannada News Today

ಬದಾಮಿಗೆ ದಿಡೀರ್ ಬೇಟಿ ನೀಡಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್

Department of Education Secretary Umashankar visited Badami

🌐 Kannada News :

ಬದಾಮಿ : ಚಾಲುಕ್ಯ ನಗರಿ ವಾಸ್ತುಶಿಲ್ಪಗಳ ಬಿಡು ಎಂದು ಹೆಸರಾದ ಬದಾಮಿಗೆ ಶಿಕ್ಷಣ ಇಲಾಖೆಯ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಉಮಾ ಶಂಕರ್ ಅವರು ಶಿಕ್ಷಣ ಇಲಾಖೆಗೆ ದಿಢೀರ್ ಭೇಟಿ ನೀಡಿದರು.
ನಂತರ ಅವರು ವಾಸ್ತುಶಿಲ್ಪಗಳ ತವರೂರಾದ ಐಹೊಳೆ ಪಟ್ಟದಕಲ್ಲು ಶಿವಯೋಗ ಮಂದಿರ ಮಹಾಕೂಟ ವೀಕ್ಷಿಸಿದರು.

ನಂತರ ಬದಾಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲೆಗೆ ಸ್ವಾಗತಿಸಿ ಗೌರವ ಸನ್ಮಾನ ಮಾಡಲಾಯಿತು.

ಮಾನ್ಯ ಶಿಕ್ಷಣ ಇಲಾಖೆಯ ಪ್ರಧಾನ ಗೌರವಾನ್ವಿತ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಎಸ್ ಆರ್ ಉಮಾಶಂಕರ್ ಅವರಿಗೆ ಶಿಕ್ಷಕರ ಪ್ರಮುಖ ಸಮಸ್ಯೆಗಳಾದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.

ಹಾಗೂ ಪದವೀಧರ ಶಿಕ್ಷಕರ ಬಡ್ತಿ ಸಮಸ್ಯೆ, ಹಾಗೂ SSA ಶಿಕ್ಷಕರ ವೇತನ ಬಜೆಟ್ ಸಮಸ್ಯೆ ಬಗ್ಗೆ ತಿಳಿಸಿ ಪರಿಹರಿಸಲು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಲಿ, ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಾಗೇ ನವರ್, ಕಾರ್ಯದರ್ಶಿಗಳಾದ ಬಿ ಟಿ ಕೋವಳಿ, ಖಜಾಂಚಿ ಅಧಿಕಾರಿಗಳಾದ ಪಿ ಎಸ್ ಪಮ್ಮಾರ್, ತಾಲೂಕು ಅಧ್ಯಕ್ಷರಾದ ಎಸ್ ಬಿ ಮಜ್ಜಿಗೆ, ಕಾರ್ಯದರ್ಶಿ ತಿರುಕಪ್ಪ ನವರ್, ಸಂಘಟನೆಯ ಪ್ರಮುಖರಾದ ಶ್ರೀ ಕೇಸರಿ ಅವರು, ಶ್ರೀ ಶರೀಫ್ ಅವರು, ಶ್ರೀ ಕಾಡರ & ಮುತ್ತು ಬಳ್ಳಾ nps ರಾಜ್ಯ ಸಂಘಟನಾ ಕಾರ್ಯದರ್ಶಿ ಅವರು ಹಾಗೂ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. /// ವರದಿ : ರವಿಕುಮಾರ ಮುರಾಳ

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.