ಅಂಬೇಡ್ಕರ್ ರವರ ತತ್ವ ಆದರ್ಶ ಪಾಲಿಸಿ, ಉತ್ತಮ ನಾಯಕರಾಗಿ

Everyone should follow Ambedkar's ideal

ಗುಳೇದಗುಡ್ಡ : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ನೆಹರು ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ನೆನ್ನೆ ಬೆಳಗಿನ ಜಾವ ಆಚರಿಸಲಾಯಿತು.

ಶಾಲೆಯಲ್ಲಿನ ಡಾ. ಅಂಬೇಡ್ಕರ್ ರವರ ಫೋಟೋಗೆ  ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತಯ್ಯ ಸರ ಗಣಾಚಾರಿ ಸರ್ ಮತ್ತು ಶ್ರೀ ವೀರಣ್ಣ ಚಿನ್ನಿ ಮಾಲಾರ್ಪಣೆ ಮಾಡಿದರು.

ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತಯ್ಯ ಸರ್ ಗಣಾಚಾರಿ  “ವಿವಿಧ ಸಂಸ್ಕೃತಿ, ಧರ್ಮದವರು ನೆಲೆಸಿರುವ ಭಾರತ ದೇಶಕ್ಕೆ ಸಮರ್ಥವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ” ಅವರ ತತ್ವ ಪಾಲನೆ ಮತ್ತು ಅವರ ಬಗೆಗಿನ ವಿಷಯಗಳನ್ನು ಈಗಿನ ಕಾಲದ ಮಕ್ಕಳಿಗೆ ಅರಿವಾಗುವಂತೆ ತಿಳಿಸಿಕೊಡಬೇಕು, ಅಂಬೇಡ್ಕರ್ ದೇಶದ ಆಸ್ತಿ. ಅವರ ಮಾದರಿ ಬದುಕು, ತತ್ವ, ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.

ಅಂಬೇಡ್ಕರ್ ರವರ ತತ್ವ ಆದರ್ಶ ಪಾಲಿಸಿ, ಉತ್ತಮ ನಾಯಕರಾಗಿ - Kannada News

ನಂತರ ಸಂಸ್ಥೆಯ ಉಪಾಧ್ಯಕ್ಷರಾದ ವೀರಣ್ಣ ಚಿಂದಿ ಅವರು ಮಾತನಾಡಿ `ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ಮಾನವತಾವಾದಿ’ ಎಂದು ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತಯ್ಯ ಸರಗಣಚಾರಿ ಸರ್, ಉಪಾಧ್ಯಕ್ಷರಾದ ವೀರಣ್ಣ ಚಿಂದಿ, ಸಾಯಿ ಕೃಷ್ಣ ಸರ್, ಪ್ರದೀಪ್ ಸರ್,ಶಿವು ಕಳ್ಳಿಗುಡ್ಡ, ಸೇರಿದಂತೆ ಎಲ್ಲಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.///

Follow us On

FaceBook Google News

Read More News Today