Welcome To Kannada News Today

ದೇಶದಾದ್ಯಂತ 100 ಮಳಿಗೆಗಳ ಸ್ಥಾಪನೆಗೆ ರೆಸ್ಪಾನ್ಸಿವ್ ಇಂಡಸ್ಟ್ರೀಸ್ ನಿರ್ಧಾರ

Responsive Industries to set up 100 stores nationwide

🌐 Kannada News :
ಅಗ್ರಗಣ್ಯ ವೀನೈಲ್ ಟೈಲ್ಸ್ (ನೆಲಹಾಸು) ಉತ್ಪಾದಕ ಕಂಪನಿಯಾದ ರೆಸ್ಪಾನ್ಸಿವ್ ಇಂಡಸ್ಟ್ರೀಸ್ ಮುಂದಿನ ಮೂರು ವರ್ಷಗಳಲ್ಲಿ ದೇಶದಾದ್ಯಂತ 100 ಸ್ವತಂತ್ರ ಮಳಿಗೆಗಳನ್ನು ಸ್ಥಾಪನೆಗೆ ನಿರ್ದಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯ ಅಧ್ಯಕ್ಷ ರಿಷಭ್ ಅಗರ್‍ವಾಲ್ ತಿಳಿಸಿದ್ದಾರೆ.

ಕ್ಷಿಪ್ರವಾಗಿ ಬೆಳೆಯುತ್ತಿರುವ ವಿಲಾಸಿ ವೀನೈಲ್ ಟೈಲ್ಸ್ ಉದ್ಯಮದ ಲಾಭ ಪಡೆಯುವ ಉದ್ದೇಶದಿಂದ ಬೆಂಗಳೂರು, ಮುಂಬೈ, ಅಹ್ಮದಾಬಾದ್ ಹಾಗೂ ದೆಹಲಿಯಲ್ಲಿ ಈ ವರ್ಷ ನಾಲ್ಕು ಸಿಓಸಿಓ (ಕಂಪನಿ ಮಾಲಕತ್ವದ ಮತ್ತು ಕಂಪನಿ ಕಾರ್ಯನಿರ್ವಹಣೆಯ) ವಿನ್ಯಾಸ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.

Rishabh Agarwal - Chairman of Responsive Industries
Rishabh Agarwal – Chairman of Responsive Industries
 ಈ ಮೂಲಕ ಬ್ರಾಂಡ್ ಅಸ್ತಿತ್ವವನ್ನು ಬಲಪಡಿಸಲು ಉದ್ದೇಶಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ಬಿ2ಸಿ ಮೇಲೆ ಗಮನ ಹರಿಸಿರುವುದು ನಿಜಕ್ಕೂ ಪ್ರತಿಫಲ ನೀಡುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ತನ್ನ ಇಂಪ್ಯಾಕ್ಟ್ ಬ್ರಾಂಡ್‍ನಡಿ ವಿಲಾಸಿ ವೀನೈಲ್ ಟೈಲ್ಸ್ ವಲಯದಲ್ಲಿ 500 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿ ಹೊಂದಿದೆ.
Web Title : Responsive Industries to set up 100 stores nationwide

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.